SUDDIKSHANA KANNADA NEWS/DAVANAGERE/DATE:04_10_2025
ದಾವಣಗೆರೆ: ರೈತರನ್ನು ಕೈಹಿಡಿದಿರುವ ಬೆಳೆ ಅಡಿಕೆ. ಹೊಸ ಅಡಿಕೆ ಕ್ವಿಂಟಾಲ್‌ಗೆ 61,000 ರೂ., ತಲುಪಿದೆ.
READ ALSO THIS STORY: 35 ದಿನಗಳ ಕಾಲ ಬ್ಯೂಟಿ ಪಾರ್ಲರ್ ಉಚಿತ ತರಬೇತಿ: ಅರ್ಜಿ ಆಹ್ವಾನ
ಇನ್ನೂ ಹೆಚ್ಚಾಗುವ ಸಂಭವವಿದೆ. ಹಾಗೆಂದ ಮಾತ್ರಕ್ಕೆ ರೈತರು ಅಡಿಕೆಯನ್ನು ಸಂಗ್ರಹಿಸಿ, ದರ ಹೆಚ್ಚಳದ ನಿರೀಕ್ಷೆ ಮಾಡುತ್ತಾ ಕೂರಬಾರದು ಎಂದು ಸಲಹೆ ನೀಡಲಾಗುತ್ತಿದೆ.
ದರ ಹೆಚ್ಚಿದಂತೆ ಇನ್ನೂ ಹೆಚ್ಚಾಗಬಹುದೆಂಬ ಬಯಕೆಯಲ್ಲಿ ಸಂಗ್ರಹ ಮುಂದುವರೆಸುವುದು ಅಥವಾ ದರ ಕಡಿಮೆಯಾಗುತ್ತಿರುವುದನ್ನು ನೋಡುತ್ತಿದ್ದಂತೆ ಸಂಪೂರ್ಣ ಸಂಗ್ರಹವನ್ನು ಮಾರಾಟಕ್ಕೆ ಪ್ರಯತ್ನಿಸುವುದು ಸಾಮಾನ್ಯ. ಈ ಸ್ವಭಾವ ಲಾಭ ತರುವುದಕ್ಕಿಂತ ನಷ್ಟವುಂಟು ಮಾಡಿರುವುದೇ ಹೆಚ್ಚು. ಅಡಿಕೆ ದರ ಹೆಚ್ಚಾಗುತ್ತಿದ್ದಂತೆ ನಮ್ಮ ಸಂಗ್ರಹದಲ್ಲಿ ಒಂದಿಷ್ಟು ಅಡಿಕೆಯನ್ನು ಮಾರಾಟ ಮಾಡುತ್ತಾ ಹೋಗಬೇಕು. ಆಗ ಮಾರುಕಟ್ಟೆಯಲ್ಲಿ ದರದ ಸ್ಥಿರತೆಯನ್ನು ಕಾಯ್ದುಕೊಳ್ಳಬಹುದು.
ಇನ್ನೂ ದರ ಹೆಚ್ಚಾಗಬಹುದೆಂಬ ನಿರೀಕ್ಷೆಯಲ್ಲಿ ಅಡಿಕೆ ಸಂಗ್ರಹವನ್ನು ಹಾಗೇ ಇಟ್ಟುಕೊಂಡರೆ ಸಂಘಟಿತ ವರ್ತಕರು ದರವನ್ನು ಬೀಳಿಸಿ, ರೈತರು ಮುಗಿಬಿದ್ದು ಅಡಿಕೆ ಮಾರಾಟ ಮಾಡುವಂತ ಪರಿಸ್ಥಿತಿಯನ್ನು ನಿರ್ಮಾಣ ಮಾಡುತ್ತಾರೆ. ಮಾರುಕಟ್ಟೆ ಸ್ಥಿರತೆ, ಅವೈಜ್ಞಾನಿಕ ಕುಸಿತ ಅಥವಾ ಅನಿರೀಕ್ಷಿತ ದರ ಹೆಚ್ಚಳ ಇದೆಲ್ಲವುದನ್ನು ಒಂದು ನಿಯಂತ್ರಣದಲ್ಲಿ ಇಡಬೇಕೆಂದರೆ ಅಡಿಕೆ ಬೆಳೆಗಾರರು ಬೆಳೆಯಲಿಕ್ಕೆ ಹಾಕುವ ಶ್ರಮಕ್ಕಿಂತ ಮಾರಾಟ ಮಾಡುವಾಗ ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳಬೇಕಿದೆ ಎಂದು ಕಬ್ಬು ನಿಯಂತ್ರಣ ಮಂಡಳಿಯ ನಾಮ ನಿರ್ದೇಶಿತ ಸದಸ್ಯ ತೇಜಸ್ವಿ ವಿ. ಪಟೇಲ್ ಮನವಿ ಮಾಡಿದ್ದಾರೆ.