SUDDIKSHANA KANNADA NEWS/DAVANAGERE/DATE:19_12_2025
ದಾವಣಗೆರೆ: ಮಲೆನಾಡಿನ ವಾಣಿಜ್ಯ ಬೆಳೆ ಅಡಿಕೆ. ಕಳೆದೊಂದು ತಿಂಗಳಿನಲ್ಲಿ ಬರೋಬ್ಬರಿ 10 ಸಾವಿರ ರೂಪಾಯಿ ಪ್ರತಿ ಕ್ವಿಂಟಲ್ ಅಡಿಕೆಗೆ ಕಡಿಮೆಯಾಗಿದೆ. ಇದು ಅಡಿಕೆ ಬೆಳೆಗಾರರಿಗೆ ಶಾಕ್ ನೀಡಿದೆ.
ಈ ಸುದ್ದಿಯನ್ನೂ ಓದಿ: ಸದ್ದಾಗದ ಸಂತ, ಸೇವಾ ಧೀಮಂತ, ಕಾವಿಗೆ ಕಾಯಕ ತೋರಿದ ಶ್ರೀ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ..! ಪೂಜ್ಯರ ಗುರುದೀಕ್ಷೆಯ ಕೈಂಕರ್ಯಕ್ಕೆ ತುಂಬಿದ 24 ವರ್ಷಗಳು..!
ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ದಾವಣಗೆರೆ ಗ್ರಾಮಾಂತರ, ಮಾಯಕೊಂಡ ಸೇರಿದಂತೆ ಹಲವೆಡೆ ಯಥೇಚ್ಛವಾಗಿ ಬೆಳೆಯಲಾಗುತ್ತಿದೆ. ಚನ್ನಗಿರಿ ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಕುಸಿತ ಕಂಡಿದೆ.
ಚನ್ನಗಿರಿ ಅಡಿಕೆ ಮಾರುಕಟ್ಟೆ ಇಂದಿನ ಧಾರಣೆ
ರಾಶಿ
ಕನಿಷ್ಠ: 50,000 ರೂಪಾಯಿ
ಗರಿಷ್ಠ: 55700 ರೂಪಾಯಿ
ಸರಾಸರಿ: 54,308 ರೂಪಾಯಿ
ಬೆಟ್ಟೆ
ಗರಿಷ್ಠ: 40,636 ರೂಪಾಯಿ
ಕನಿಷ್ಠ: 36,936 ರೂಪಾಯಿ
ಸರಾಸರಿ: 38,742 ರೂಪಾಯಿ
ದಾವಣಗೆರೆ ಮಾರುಕಟ್ಟೆ
ಹಸಿ ಅಡಿಕೆ: 6900 ರೂ.
ಕಳೆದ ಅಕ್ಟೋಬರ್ 29ರಂದು 65,820 ರೂಪಾಯಿ ಕ್ವಿಂಟಲ್ ಅಡಿಕೆ ಧಾರಣೆ ಇತ್ತು. ಕನಿಷ್ಠ 58,279 ರೂಪಾಯಿ, ಸರಾಸರಿ 61,867 ರೂಪಾಯಿ ಇತ್ತು. ಇನ್ನು ಹಸಿ ಅಡಿಕೆ ಪ್ರತಿ ಕ್ವಿಂಟಲ್ ಗೆ 7800 ರೂಪಾಯಿ ಇತ್ತು.
ಆದ್ರೆ, ಇಂದು ಅಡಿಕೆ ಧಾರಣೆಯಲ್ಲಿ ಭಾರೀ ಕುಸಿತ ಕಂಡು ಬಂದಿದೆ. ರಾಶಿ ಅಡಿಕೆ ಪ್ರತಿ ಕ್ವಿಂಟಲ್ ಗೆ 50000 ರೂಪಾಯಿ ಕನಿಷ್ಠ ಧಾರಣೆ ಇದ್ದರೆ, ಗರಿಷ್ಠ 55700 ರೂಪಾಯಿ ದಾಖಲಾಗಿದೆ. ಸರಾಸರಿ 54,308 ರೂಪಾಯಿ ಮಾರುಕಟ್ಟೆ ವಹಿವಾಟು ಮುಗಿಸಿದೆ. ಹಸಿ ಅಡಿಕೆ 6900 ರೂಪಾಯಿ ಪ್ರತಿ ಕ್ವಿಂಟಲ್ ಗೆ ನಿಗದಿಯಾಗಿದೆ.
ಡಿಸೆಂಬರ್ 17ರಂದು ರಾಶಿ ಅಡಿಕೆಯು ಪ್ರತಿ ಕ್ವಿಂಟಲ್ ಗರಿಷ್ಠ 56,499 ರೂಪಾಯಿ, ಕನಿಷ್ಠ 51100 ರೂ ಹಾಗೂ ಸರಾಸರಿ 56,499 ರೂಪಾಯಿ ದಾಖಲಿಸಿತ್ತು. ಇನ್ನು ಬೆಟ್ಟೆ ಅಡಿಕೆಯು ಗರಿಷ್ಠ 40069, ಕನಿಷ್ಠ 36679 ಹಾಗೂ ಸರಾಸರಿ 38297 ರೂಪಾಯಿ ಮಾರುಕಟ್ಟೆ ವಹಿವಾಟು ಮುಗಿಸಿತ್ತು. ಇನ್ನು ಹಸಿ ಅಡಿಕೆಯು 7 ಸಾವಿರ ರೂಪಾಯಿ ದಾಖಲಾಗಿತ್ತು.
ಇಂದು ಅಡಿಕೆ ಧಾರಣೆಯು ಮತ್ತೆ ಕುಸಿತ ಕಂಡಿದ್ದು, ಬರೋಬ್ಬರಿ 1 ಸಾವಿರ ರೂಪಾಯಿಯಷ್ಟು ಕಡಿಮೆಯಾಗಿದೆ. ಬೆಟ್ಟೆ ಅಡಿಕೆಯು 40636 ರೂಪಾಯಿ ಗರಿಷ್ಠ, ಕನಿಷ್ಠ 36,936 ರೂಪಾಯಿ ಹಾಗೂ ಸರಾಸರಿ 38742 ರೂಪಾಯಿ ಮಾರುಕಟ್ಟೆ ವಹಿವಾಟು ಮುಗಿದಿದೆ. ಹಸಿ ಅಡಿಕೆಯು 6900 ರೂಪಾಯಿ ಆಗಿದೆ.
ಡಿಸೆಂಬರ್ ತಿಂಗಳಿಗೆ ಹೆಚ್ಚು ಕಡಿಮೆ ಅಡಿಕೆ ಕೊಯ್ಲು ಮುಗಿಯುತ್ತಿದೆ. ಇನ್ನು ಅಲ್ಪ ಸ್ವಲ್ಪ ಅಡಿಕೆ ಕೊಯ್ಯುವುದು ಇರಲಿದೆ. ಬಹುತೇಕ ಅಂದರೆ ಶೇಕಡಾ 90 ರಷ್ಟು ಅಡಿಕೆಯನ್ನು ಕೊಯ್ಲು ಮಾಡಲಾಗಿದೆ. ಇನ್ನು ಶೇಕಡಾ 10ರಷ್ಟು ಮಾತ್ರ ಇದೆ. ಈ ವರ್ಷ ಕಳೆದ ವರ್ಷಕ್ಕೆ ಹೋಲಿಸಿದರೆ ಅಡಿಕೆ ಫಸಲು ಕಡಿಮೆ ಬಂದಿದೆ. ಕೇವಲ ಒಂದೂವರೆ ತಿಂಗಳಿಗೆ ಹತ್ತು ಸಾವಿರ ರೂಪಾಯಿಗೂ ಹೆಚ್ಚು ಪ್ರತಿ ಕ್ವಿಂಟಲ್ ಗೆ ಅಡಿಕೆ ಧಾರಣೆ ಕುಂಠಿತವಾಗಿರುವುದು ಬೆಳೆಗಾರರಿಗೆ ಆತಂಕ ತಂದಿದೆ.
ಇನ್ನು ಒಂದು ಅಥವಾ ಎರಡು ಎಕರೆ ಹೊಂದಿರುವವರು ಪ್ರತಿ ವರ್ಷ ಅಡಿಕೆ ಮಾರುಕಟ್ಟೆಗೆ ಬಿಡುತ್ತಾರೆ. ಐದು ಎಕರೆಗಿಂತ ಹೆಚ್ಚು ಅಡಿಕೆ ತೋಟ ಹೊಂದಿದವರು ಅಡಿಕೆ ಸಂಗ್ರಹಿಸಿಟ್ಟಿರುತ್ತಾರೆ. ಧಾರಣೆ ಹೆಚ್ಚಾದಾಗ ಅಡಿಕೆ ಮಾರುಕಟ್ಟೆಗೆ ಬಿಟ್ಟು ಲಾಭ ಪಡೆಯುತ್ತಾರೆ. ಆದರೆ, ಅಡಿಕೆ ಧಾರಣೆ ಕುಸಿತ ಕಾಣುತ್ತಿರುವುದರಿಂದ ಅಡಿಕೆ ಮಾರುಕಟ್ಟೆಗೆ ಬಿಡಬೇಕೋ ಅಥವಾ ಮತ್ತಷ್ಟು ಧಾರಣೆ ಏರಿಕೆಯಾಗುತ್ತದೆಯೋ ಎಂಬ ಪ್ರಶ್ನೆಯಲ್ಲಿ ಅಡಿಕೆ ಬೆಳೆಗಾರರು ದಿನದೂಡವಂತಾಗಿದೆ.





Leave a comment