ಉಚಿತವಾಗಿ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಿಕೊಳ್ಳಲು ಇದ್ದ ಕೊನೆ ದಿನಾಂಕವನ್ನು, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಮತ್ತೊಮ್ಮೆ ವಿಸ್ತರಿಸಿದೆ.
ಜೂನ್ 14ಕ್ಕೆ ಇದ್ದ ಡೆಡ್‌ಲೈನ್ ಅನ್ನು ಸೆಪ್ಟೆಂಬರ್ 14, 2024ರವರೆಗೆ ವಿಸ್ತರಿಸಿದ್ದು, ಯಾವುದೇ ಶುಲ್ಕವಿಲ್ಲದೆ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಿಕೊಳ್ಳಬಹುದು. ಮೈಆಧಾರ್ ಪೋರ್ಟಲ್‌ನಲ್ಲಿ (https://uidai.gov.in) ಆಧಾರ್ ಕಾರ್ಡ್ ಅಪ್‌ಡೇಟ್ ಉಚಿತವಾಗಿದ್ದರೂ, ಆಫ್‌ಲೈನ್ ಅಪ್‌ಡೇಟ್‌ಗಳಿಗೆ 50ರೂ. ಶುಲ್ಕ ಅನ್ವಯಿಸುತ್ತದೆ.