ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಗುಡ್ ನ್ಯೂಸ್ ಕೊಟ್ಟ ಗೃಹ ಸಚಿವರು: ಪೊಲೀಸ್ ಕಾನ್ ಸ್ಟೇಬಲ್ ಕ್ಯಾಪ್ ಬದಲಾವಣೆಗೆ ಕ್ರಮವೆಂದ್ರು ಡಾ. ಜಿ. ಪರಮೇಶ್ವರ

On: July 27, 2025 8:33 PM
Follow Us:
ಪೊಲೀಸ್
---Advertisement---

SUDDIKSHANA KANNADA NEWS/ DAVANAGERE/ DATE:27_07_2025

ದಾವಣಗೆರೆ: ಪೊಲೀಸ್ ಕಾನ್ಸಟೇಬಲ್‍ಗಳು ಹಾಕುವ ಕ್ಯಾಪ್ ಮಳೆಗೆ ನೆನೆದಾಗ ಇದರಿಂದ ಭಾರ ಹೆಚ್ಚುವುದರಿಂದ ಬದಲಾಯಿಸಬೇಕೆಂಬ ಪ್ರಸ್ತಾವನೆ ಬಹಳ ದಿನಗಳಿಂದ ಇದ್ದು ಸ್ಲೋಚ್‍ಗಳನ್ನು ಬದಲಿಸಲಾಗುತ್ತದೆ. ಅಧಿಕಾರಿಗಳಂತೆ ಪೊಲೀಸ್ ಕಾನ್ ಸ್ಟೇಬಲ್ ಗಳು ಅಧಿಕಾರಿಗಳಿದ್ದಂತೆ, ಅವರನ್ನು ಅಧಿಕಾರಿಗಳನ್ನಾಗಿ ಕಾಣುತ್ತೇನೆ. ಅವರ ಬಲವರ್ಧನೆಯು ಬಹಳ ಮುಖ್ಯವಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದರು.

ಈ ಸುದ್ದಿಯನ್ನೂ ಓದಿ: ಪಾಕ್ ಸಂಪರ್ಕ ಹೊಂದಿದ್ದ ಜಾಲ ಬಯಲು: ಇಸ್ಲಾಂ ಧರ್ಮಕ್ಕೆ ಹಿಂದೂ ಹುಡುಗಿಯರ ಮತಾಂತರಕ್ಕೆ ಆನ್ ಲೈನ್ ಗೇಮ್ಸ್ ಬಳಕೆ!

ಪೊಲೀಸ್ ಇಲಾಖೆಯಿಂದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಏರ್ಪಡಿಸಲಾದ ಮನೆ-ಮನೆಗೂ ಪೊಲೀಸ್ ಮಿತ್ರಪಡೆ, ಪೊಲೀಸ್ ನಡೆ ಸಮುದಾಯದ ಕಡೆ ಕಾರ್ಯಕ್ರಮ ಉದ್ಘಾಟಿಸಿ ಪೊಲೀಸ್ ಮಿತ್ರಪಡೆ, ಜಂಟಿ ಕೈಗಳಾಗಿ ಕೆಲಸ ಮಾಡುವ ಸಾರ್ವಜನಿಕರಿಗೆ ಪ್ರಶಂಸನೀಯ ಪತ್ರ ನೀಡಿ, ಮನೆ-ಮನೆಗೆ ಪೊಲೀಸ್ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು.

ಸೈಬರ್ ಅಪರಾಧ ತಡೆಗೆ ತರಬೇತಿ:

ಸೈಬರ್ ಅಪರಾಧಗಳು ಹೆಚ್ಚಾಗುತ್ತಿದ್ದು ತರಬೇತಿ ಪಡೆದ ನುರಿತ ಸಿಬ್ಬಂದಿಗಳ ಸಂಖ್ಯೆ ಕಡಿಮೆ ಇದೆ. ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಸೈಬರ್ ಅಪರಾಧ ತಡೆಗೆ ಎಲ್ಲಾ ಸಿಬ್ಬಂದಿಗಳಿಗೆ ತರಬೇತಿ ಅತ್ಯವಶ್ಯಕವಾಗಿದೆ. ಹಂತ-ಹಂತವಾಗಿ ಎಲ್ಲರಿಗೂ ಸೈಬರ್ ಅಪರಾಧ ತಡೆ ಬಗ್ಗೆ ತರಬೇತಿ ಕಡ್ಡಾಯ ಮಾಡಲಾಗುತ್ತದೆ. ಸೈಬರ್ ಅಪರಾಧ ಮಾಡುವವರು ನಿಪುಣರಿರುತ್ತಾರೆ, ಅವರಿಗಿಂತಲೂ ಇಲಾಖೆ ಸಿಬ್ಬಂದಿಗಳು ನುರಿತವರಾಗಿರಬೇಕು. ದಿನಬೆಳಗಾಗುವಲ್ಲಿ ಹ್ಯಾಕ್ ಮೂಲಕ ಕೋಟಿಗಟ್ಟಲೆ ಹಣವನ್ನು ದೋಚುತ್ತಾರೆ, ಇದನ್ನು ತಡೆಯಬೇಕಾಗಿದೆ ಎಂದರು.

ಪೊಲೀಸ್ ಠಾಣೆಗಳ ಕಮಾಂಡ್ ಸೆಂಟರ್:

ರಾಜ್ಯದಲ್ಲಿ 1000 ಕ್ಕಿಂತ ಹೆಚ್ಚು ಪೊಲೀಸ್ ಠಾಣೆಗಳಿದ್ದು ಜಿಲ್ಲಾ ಮಟ್ಟದಲ್ಲಿ ಎಲ್ಲಾ ಪೊಲೀಸ್ ಠಾಣೆಗಳನ್ನು ಒಳಗೊಂಡ ಕಮಾಂಡ್‍ಸೆಂಟರ್ ಸ್ಥಾಪಿಸಲಾಗುತ್ತದೆ. ಕಮಾಂಡ್ ಸೆಂಟರ್ ಮೂಲಕ ಲೈವ್ ಮೂಲಕ ಯಾವ ಠಾಣೆಯಲ್ಲಿ ಏನು ನಡೆಯುತ್ತಿದೆ ಎಂಬ ದೃಶ್ಯಗಳು ನೇರವಾಗಿ ಸಿಗಲಿವೆ ಎಂದರು.

ವಸತಿ ಶೇ 70 ಕ್ಕೆ ಹೆಚ್ಚಿಸುವ ಗುರಿ:

ಗೃಹ ಸರ್ಕಾರದ ಪ್ರಮುಖ ಇಲಾಖೆಯಾಗಿದೆ. ಇಲ್ಲಿ ಕೆಲಸ ಮಾಡುವ ಕಾನ್ ಸ್ಚೇಬಲ್ ಗಳಿಂದ ಅಧಿಕಾರಿಗಳ ವರೆಗೆ ವಸತಿ ಸೌಕರ್ಯ ಇರಬೇಕು. ಪ್ರಸ್ತುತ ಶೇ 40 ರಷ್ಟು ಸಿಬ್ಬಂದಿಗಳಿಗೆ ಮನೆಗಳಿವೆ. ಮುಂದಿನ 3 ವರ್ಷಗಳಲ್ಲಿ ಶೇ 70 ರಷ್ಟು ಸಿಬ್ಬಂದಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಪ್ರತಿ ವರ್ಷ ಪೊಲೀಸ್ ವಸತಿ ಗೃಹಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment