SUDDIKSHANA KANNADA NEWS/DAVANAGERE/DATE:03_10_2025
ದಾವಣಗೆರೆ: ನಗರದ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರಸ್ತುತ ಶೈಕ್ಷಣಿಕ ವರ್ಷದ ಕ್ಯಾಂಪಸ್ ನೇಮಕಾತಿಯಲ್ಲಿ ಶ್ರೇಷ್ಠ ಸಾಧನೆಗೈದಿದ್ದಾರೆ.
ಬೆಂಗಳೂರಿನ ಐಬಿಎಂ ಸಂಸ್ಥೆಯ ಕ್ಯಾಂಪಸ್ ಸಂದರ್ಶನದಲ್ಲಿ ಕಾಲೇಜಿನ ಒಟ್ಟು ಏಳು ವಿದ್ಯಾರ್ಥಿಗಳು, ಕಂಪ್ಯೂಟರ್ ಸೈನ್ಸ್ ವಿಭಾಗದ ಅಭಿಷೇಕ್ ಎಂ ಕಲಘಟಗಿ ಮತ್ತು ತನುಶ್ರೀ ಎಂ ಪೂಜಾರ್, ಕಂಪ್ಯೂಟರ್ ಸೈನ್ಸ್ ಡೇಟಾ ಸೈನ್ಸ್ ವಿಭಾಗದ ಬಿ. ವಿಜಯಲಕ್ಷ್ಮೀ, ಎಂ ಎಮ್. ದರ್ಶನ್ ಕುಮಾರ್, ಎಂ. ಸೇಜಲ್ ಹಾಗೂ ಕಂಪ್ಯೂಟರ್ ಸೈನ್ಸ್ ಬಿಸಿನೆಸ್ ಸಿಸ್ಟಮ್ ವಿಭಾಗದ ಪೂರ್ವಿ ಎಸ್ ಹೆಬ್ಬಾಳ್ ಮತ್ತು ಎಂ ಎನ್ ವಚನ್
ಇವರುಗಳು ವಾರ್ಷಿಕ 4.5 ಲಕ್ಷ ವೇತನ ಮತ್ತು ಇದರ ಜೊತೆಗೆ ಸಂಸ್ಥೆ ಸೇರುವ ಮುನ್ನ 25 ಸಾವಿರ ಸ್ವಾಗತ ಬೋನಸ್‌ನೊಂದಿಗೆ ಆಯ್ಕೆ ಆಗಿದ್ದಾರೆ ಎಂದು ಕಾಲೇಜಿನ ಸಾರ್ವಜನಿಕ ಸಂಪರ್ಕ ಡೀನ್ ಡಾ. ಸಿ ಎಂ ಕಲ್ಲೇರಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.