SUDDIKSHANA KANNADA NEWS/ DAVANAGERE/ DATE:23_07_2025
ದಾವಣಗೆರೆ: ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಸಂಭವಿಸಿದ ಅಪಘಾತದಲ್ಲಿ ದಾವಣಗೆರೆ (Davanagere)ಯ ಉದ್ಯಮಿ ಸಾವನ್ನಪ್ಪಿದ ಘಟನೆ ನಡೆದಿದೆ.
READ ALSO THIS STORY: ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳ ಮೆಕ್ಕೆಜೋಳ ವರ್ತಕರಿಗೆ ಗುಡ್ ನ್ಯೂಸ್ ಕೊಟ್ಟ ಸಚಿವ ಶಿವಾನಂದ ಪಾಟೀಲ!
ಪ್ರತಾಪ್ ಪವಾರ್ ಸಾವು ಕಂಡ ದುರ್ದೈವಿ ಎಂದು ಗುರುತಿಸಲಾಗಿದೆ. ಚಿಕ್ಕಮಗಳೂರಿನ ಕಡೂರಿನ ಬೈಪಾಸ್ ಬಳಿ ಕಾರಿನಲ್ಲಿ ಪ್ರತಾಪ್ ಪವಾರ್ ತೆರಳುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದ ಪರಿಣಾಮ ಅಸುನೀಗಿದ್ದಾರೆ. ಕುಟುಂಬದವರು, ಸ್ನೇಹಿತರು, ಸಂಬಂಧಿಕರು ಕಂಬನಿ ಮಿಡಿದಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿಯೂ ಆಗಿದ್ದ ಪ್ರತಾಪ್ ಪವಾರ್ ಅವರು ಎಸ್ ಎಸ್ ಎಂ ಫೋರ್ಮ್ ಪಾಲುದಾರರಾಗಿದ್ದರು. ದಾವಣಗೆರೆ ನಗರದ ಮಹಾಲಕ್ಷ್ಮೀ ಲೇ ಔಟ್ ನಲ್ಲಿ ವಾಸವಿದ್ದ ಅವರು ಸಂಘ ಸಂಸ್ಥೆಗಳಲ್ಲಿಯೂ ಗುರುತಿಸಿಕೊಂಡಿದ್ದರು.
ಕಡೂರಿನಲ್ಲಿ ಪ್ರತಾಪ್ ಪವಾರ್ ಅವರು ಕಾರಿನಲ್ಲಿ ಒಬ್ಬರೇ ಇದ್ದರೋ ಅಥವಾ ಮೂವರು ಇದ್ದರೋ ಎಂಬ ಕುರಿತಂತೆ ಖಚಿತ ಮಾಹಿತಿ ಇಲ್ಲ. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಇನ್ನು ಲಾರಿಯು ಪಲ್ಟಿಯಾಗಿದ್ದು, ನುಜ್ಜುಗುಜ್ಜಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಹೆದ್ದಾರಿಯಲ್ಲಿ ಈ ದುರಂತ ಸಂಭವಿಸಿದೆ. ಸ್ಥಳಕ್ಕೆ ಆಗಮಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.