ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ; ಪೊಲೀಸ್ ಸಿಬ್ಬಂದಿ ಸೇರಿ ಹಲವರಿಗೆ ಗಾಯ

On: July 17, 2024 1:16 PM
Follow Us:
---Advertisement---

ಕಟಪಾಡಿ: ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಟಪಾಡಿ ಜಂಕ್ಷನ್ ಬಳಿ ಭೀಕರ ಅಪಘಾತ ನಡೆದ ಪರಿಣಾಮ ಹೈವೆ ಬಳಿ ಇದ್ದ ಪೊಲೀಸ್ ಹಾಗೂ ಕಾರಿನ ಪ್ರಯಾಣಿಕರು ಗಾಯಗೊಂಡ ಘಟನೆ ಜು.16 ರಂದು ನಡೆದಿದೆ.

ಹರೀಶ್ ನಾರಾಯಣ ಪೂಜಾರಿ ಎಂಬವರು ತಮ್ಮ ಕಾರಿನಲ್ಲಿ ಉದ್ಯಾವರದಿಂದ ಪಡುಬಿದ್ರಿಗೆ ತೆರಳಿದ್ದರು. ಈ ವೇಳೆ ಹೈವೇ ಬಳಿ ಇದ್ದ ಪೊಲೀಸರು ತಪಾಸಣೆಗೆ ಕಾರು ನಿಲ್ಲಿಸುವಂತೆ ಸೂಚಿಸಿದರು. ಹರೀಶ್ ತಮ್ಮ ಕಾರನ್ನು ನಿಲ್ಲಿಸಿದ ವೇಳೆ, ಹಿಂದಿನಿಂದ ಬಂದ ಸ್ವಿಫ್ಟ್ ಕಾರಿನ ಚಾಲಕ ಸುಶಾಂತ್ ತಮ್ಮ ವಾಹನವನ್ನು ದುಡುಕುತನದಿಂದ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿ, ಹರೀಶ್ ನಾರಾಯಣ ಪೂಜಾರಿ ಅವರ ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ.

ಈ ಅಪಘಾತದಲ್ಲಿ ಮತ್ತೊಂದು ಕಾರಿಗೂ ಹಾನಿಯಾಗಿದೆ. ಈ ಪರಿಣಾಮವಾಗಿ, ಹರೀಶ್ ನಾರಾಯಣ ಪೂಜಾರಿ ಅವರ ಕಾರು ಮುಂದೆ ನಿಂತಿದ್ದ ಪೊಲೀಸ್ ಅಧಿಕಾರಿ ರಾಮ ಅವರ ಮೇಲೆ ಹತ್ತಿದೆ. ರಾಮ ಅವರು ರಸ್ತೆಗೆ ಬಿದ್ದು ತಲೆಗೆ ತೀವ್ರ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಉಡುಪಿ ಆಸ್ಪತ್ರೆಗೆ ದಾಖಲಿಸಲಾಯಿತು.ಅಪಘಾತದಲ್ಲಿ ಸ್ವಿಪ್ಟ್ ಕಾರಿನಲ್ಲಿ ಇದ್ದ ಸುಶಾಂತ್, ವಿಷ್ಣು, ಆಶಿಕಾ, ಹಾಗೂ ಹರ್ಷಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು,ಅವರನ್ನುಆಸ್ಪತೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದವರಿಗೆ ಯಾವುದೇ ಗಾಯಗಳಾಗಿಲ್ಲ. ಈ ಅಪಘಾತದಿಂದ ಮೂರು ವಾಹನಗಳು ಜಖಂಗೊಂಡಿದ್ದು ಪೊಲೀಸ್ ವರದಿ ಪ್ರಕಾರ ಸ್ವಿಪ್ಟ್ ಕಾರು ಚಾಲಕ ಸುಶಾಂತ್ ಅವರು ತೀವ್ರ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ವಾಹನ ಚಲಾಯಿಸಿದ್ದರಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

Join WhatsApp

Join Now

Join Telegram

Join Now

Leave a Comment