SUDDIKSHANA KANNADA NEWS/ DAVANAGERE/ DATE:31-03-2024
ದಾವಣಗೆರೆ: ಹೋಂ ಕೇರ್ ಟೇಕರ್ ಕೆಲಸ ಮಾಡುತ್ತಿದ್ದ ಯುವತಿ ಮನೆ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಭರತ್ ಕಾಲೋನಿಯ ಹೋಂ ಕೇರ್ ಟೇಕರ್ ಕೆಲಸ ಮಾಡುತ್ತಿದ್ದ ನಂದಿನಿ (22) ಬಂಧಿತ ಆರೋಪಿ. ಬಂಧಿತಳಿಂದ 3.50 ಲಕ್ಷ ರೂಪಾಯಿ ಮೌಲ್ಯದ 68 ಗ್ರಾಂ ಬಂಗಾರದ ಗಟ್ಟಿಯನ್ನು ಬಡಾವಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಘಟನೆ ಹಿನ್ನೆಲೆ ಏನು…?
ಕಳೆದ ಜನವರಿ 8ರಂದು ನಿಜಲಿಂಗಪ್ಪ ಬಡಾವಣೆಯ ಡಾ. ರಜನಿ ಅವರು ಪೊಲೀಸ್ ಠಾಣೆಗೆ ಹಾಜರಾಗಿ ನಮ್ಮ ಮನೆಯಲ್ಲಿ 60 ಗ್ರಾಂ ಬಂಗಾರದ ಮಾಂಗಲ್ಯ ಸರ, 30 ಗ್ರಾಂ ಬಳೆ ಮತ್ತು ಕಿವಿ ಓಲೆ ಕಳ್ಳತನವಾಗಿವೆ. ಮನೆಯಲ್ಲಿ ಕೆಲಸ ಮಾಡುವವರ ಮೇಲೆ ಅನುಮಾನದೆ ಎಂದು ದೂರು ನೀಡಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿದ್ದ ಪೊಲೀಸರು ತಲೆಮರೆಸಿಕೊಂಡಿದ್ದ ಆರೋಪಿತಳಾದ ನಂದಿನಿಯನ್ನು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ಮಾಡಿದಾಗ ಬಂಗಾರದ ಆಭರಣಗಳನ್ನು ಕಳ್ಳತನ
ಮಾಡಿ ಬೇಕಾದಾಗ ಒಡವೆ ಮಾಡಿಸಿಕೊಳ್ಳೋಣ ಅಂತಾ ಕರಗಿಸಿ ಮನೆಯಲ್ಲಿಟ್ಟುಕೊಂಡಿರುವುದಾಗಿ ತಿಳಿಸಿದ್ದಾಳೆ.
ಬಂಧಿತಳಿಂದ ಕಳ್ಳತನ ಮಾಡಿದ್ದ 68 ಗ್ರಾಂ ಬಂಗಾರದ ಗಟ್ಟಿ ( ಅಂದಾಜು ಮೌಲ್ಯ 3.50.000 ರೂ. )ಯನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ್ ಸಂತೋಷ ಹಾಗೂ ಜಿ.ಮಂಜುನಾಥ, ನಗರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಮಲ್ಲೇಶ್ ದೊಡ್ಡಮನಿ ರವರ ಮಾರ್ಗದರ್ಶನಲ್ಲಿ ಬಡಾವಣೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕಿ ಎಂ. ಆರ್ ಚೌಬೆ, ಪಿಎಸ್ಐ ರಮೇಶ್, ಚಂದ್ರಶೇಖರ್ ನಾಯ್ಕ, ಎಎಸ್ಐ ರಾಜಪ್ಪ, ಸಿಬ್ಬಂದಿ ಅರುಣ ಕುಮಾರ, ಕೆಂಚಪ್ಪ, ಸೈಯದ್ ಅಲಿ, ವಿಶ್ವಕುಮಾರ್, ಹನುಮಂತಪ್ಪ, ಗೀತಾ ಹೆಚ್. ಅವರ ಕಾರ್ಯವನ್ನು ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಅವರು ಪ್ರಶಂಸಿಸಿದ್ದಾರೆ.