ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಯುವಕನಿಗೆ ಹಿಗ್ಗಾಮುಗ್ಗ ಥಳಿತ: ಆರೋಪಿ ವಿರುದ್ದ ಪೋಕ್ಸೋ ದಾಖಲು, ಹಲ್ಲೆ ನಡೆಸಿದ ಆರು ಮಂದಿ ವಿರುದ್ಧ ಎಫ್ ಐಆರ್

On: December 10, 2023 4:14 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:10-12-2023

ದಾವಣಗೆರೆ: ಜೆರಾಕ್ಸ್ ಮಾಡಿಸಲು ಹೋದ ಬಾಲಕಿ ಪುಸಲಾಯಿಸಿ ಬೈಕ್ ನಲ್ಲಿ ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ಯುವಕನ ಮೇಲೆ 10 ರಿಂದ 15 ಯುವಕರ ಗುಂಪು ಹಲ್ಲೆ ನಡೆಸಿರುವ ಘಟನೆ ನಡೆದಿದ್ದು,
ಹಲ್ಲೆಗೊಳಗಾದ ಯುವಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.

ನಗರದ ಬಡಾವಣೆಯೊಂದರ ನಿವಾಸಿಯಾಗಿರುವ ಯುವಕನು ಬೈಕ್ ನಲ್ಲಿ ಕೂರಿಸಿಕೊಂಡು ರಸ್ತೆ ಬದಿಯ ಖಾಲಿ ಜಾಗದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಜೋರಾಗಿ ಕೂಗಿಕೊಂಡ ಕಾರಣ ಪರಾರಿಯಾಗಿದ್ದಾನೆ. ಆ ಬಳಿಕ ವಿಷಯ ಗೊತ್ತಾಗುತ್ತಿದ್ದಂತೆ ಯುವಕನಿಗೆ ಹದಿನೈದು ಮಂದಿಯ ಗುಂಪು ಹಲ್ಲೆ ನಡೆಸಿದ್ದು, ತೀವ್ರವಾಗಿ ಗಾಯಗೊಂಡ ಯುವಕನನ್ನು ನಗರದ ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಬಾಲಕಿಯು ಯುವಕನಿಂದ ತಪ್ಪಿಸಿಕೊಂಡು ಬಂದು ಮನೆಯವರಿಗೆ ನಡೆದ ಘಟನೆ ವಿವರಿಸಿದ್ದಾಳೆ. ಇದರಿಂದ ಆರೋಪಿ ಪತ್ತೆ ಹಚ್ಚಿ ಮನಸೋ ಇಚ್ಚೆ ಥಳಿಸಲಾಗಿದೆ. ಆಗ ಯುವಕ ಪ್ರಜ್ಞೆ ತಪ್ಪಿದ್ದು, ಆತ ಸಾವನ್ನಪ್ಪಿರಬಹುದು ಎಂದುಕೊಂಡು ಅಲ್ಲಿಂದ ಗುಂಪು ಕಾಲ್ಕಿತ್ತಿದೆ. ಆ ಬಳಿಕ ಹೊತ್ತುಕೊಂಡು ಬಂದು ನಗರದ ಬಡಾವಣೆಯೊಂದರ ಬಳಿ ಬಿಸಾಡಿದೆ ಎಂದು ಮಾಹಿತಿ ಸಿಕ್ಕಿದೆ.

ಬೆಳಿಗ್ಗೆ ಆರೋಪಿಗೆ ಪ್ರಜ್ಞೆ ಬಂದಿದೆ. ಆತ ತೆವಳಿಕೊಂಡು ರಸ್ತೆಗೆ ಬಂದಿದ್ದು, ದಾರಿ ಹೋಕರು ಆತನ ಮೊಬೈಲ್ ಪಡೆದು ಮನೆಯವರಿಗೆ ವಿಷಯ ಮುಟ್ಟಿಸಿದ್ದಾರೆ. ಕೂಡಲೇ ಸಂಬಂಧಿಕರು ಸ್ಥಳಕ್ಕೆ ಬಂದು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ರಾತ್ರೋರಾತ್ರಿ ಪೋಕ್ಸೋ ಪ್ರಕರಣ ದಾಖಲಿಸಿರುವ ಪೊಲೀಸರು, ಹಲ್ಲೆ ನಡೆಸಿದ ಯುವಕರನ್ನು ವಶಕ್ಕೆ ಪಡೆಯುವ ಪ್ರಯತ್ನ ಮಾಡಿಲ್ಲ ಎಂದು ಶ್ರೀರಾಮಸೇನೆ ಮುಖಂಡರು ಆರೋಪ ಮಾಡಿದ್ದಾರೆ. ಗಾಯಗೊಂಡಿರುವ ಯುವಕನ
ತಾಯಿ ಬಸವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಯುವಕನ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಲಾಗಿದೆ. ಹಲ್ಲೆ ನಡೆಸಿದವರ ಪೈಕಿ ಆರು ಮಂದಿ ವಿರುದ್ಧ ಎಫ್ ಐ ಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದೇವೆ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment