SUDDIKSHANA KANNADA NEWS
DATE:28-03-2023
DAVANAGERE
ದಾವಣಗೆರೆ: ಭೂ ಸ್ವಾಧೀನ ಮಾಡಿಕೊಳ್ಳುವ ಅಧಿಕಾರ ಪ್ರಾಧಿಕಾರಕ್ಕಿಲ್ಲ. ಅದು ಸರ್ಕಾರಕ್ಕೆ ಇದೆ ಎಂದು ದಾವಣಗೆರೆ – ಹರಿಹರ (DAVANAGERE – HARIHARA) ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ. ವೈ. ಪ್ರಕಾಶ್ (A. Y. PRAKASH) ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಸತಿ ನಿವೇಶನ ಬಡಾವಣೆ ನಿರ್ಮಾಣಕ್ಕೆ ಹಳೇಕುಂದುವಾಡದಲ್ಲಿ 53 ಎಕರೆಯನ್ನು ದೂಡಾ (DHOODA) ಪ್ರಸ್ತಾಪಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಹಣವನ್ನೂ ಕಾಯ್ದಿರಿಸಿದೆ. ಆದ್ರೆ, ಕುಂದುವಾಡ ರೈತರು ಭೂಮಿ ನೀಡಲು ವಿರೋಧ ವ್ಯಕ್ತಪಡಿಸಿದ್ದಾರೆ. ಡಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಇದೇ ಅಭಿಪ್ರಾಯ ವ್ಯಕ್ತವಾಗಿತ್ತು. ಈ ಕಾರಣಕ್ಕಾಗಿ ಸರ್ಕಾರಕ್ಕೆ ಈ ಸಂಬಂಧ ಪ್ರಸ್ತಾವನೆ ಸಲ್ಲಿಸಲಾಗಿದೆ. ದಾವಣಗೆರೆ (DAVANAGERE) ಸುತ್ತಮುತ್ತಲಿನ ನಾಲ್ಕು ಪ್ರದೇಶ ವೀಕ್ಷಣೆ ಮಾಡಿದ್ದು, ನೇರ ಖರೀದಿಗೆ ಸರ್ಕಾರ ಒಪ್ಪಿದರೆ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಸರ್ಕಾರ ಪ್ರಸ್ತಾವನೆಯಲ್ಲಿರುವ ಕಾರಣ ಹಳೇ ಕುಂದುವಾಡ ರೈತರು ಜಮೀನನ್ನು ನಿವೇಶನಕ್ಕಾಗಿ ಮಾರ್ಪಡಿಸಲು ಆಗದು. ಮಾರಾಟ ಮಾಡಲು ಬರುವುದಿಲ್ಲ. ಸರ್ಕಾರದಿಂದ ಸ್ಪಷ್ಟ ನಿರ್ದೇಶನ ಬಂದ ಬಳಿಕ ರೈತರು ಜಮೀನು ಮಾರಾಟ ಮಾಡುವ ಅಥವಾ ನಿವೇಶನಕ್ಕೆ ಅನುಮತಿ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಹಳೇಕುಂದುವಾಡ ರೈತರನ್ನು ಮನವೊಲಿಸಲು ಪ್ರಯತ್ನಿಸಲಾಯಿತು. ಈ ಸಂಬಂಧ ಜಿಲ್ಲಾಧಿಕಾರಿಗಳ ಜೊತೆ ಚರ್ಚೆಯನ್ನೂ ನಡೆಸಲಾಯಿತು. ರೈತರು ವಿರೋಧ ವ್ಯಕ್ತಪಡಿಸಿದ ಕಾರಣ ಈ ವಿಚಾರವನ್ನು ಸರ್ಕಾರಕ್ಕೆ ತಿಳಿಸಲಾಗಿದೆ. ಮುಂದೆ ಯಾವ ಕ್ರಮ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು. ಸರ್ಕಾರ ಭೂ ಸ್ವಾಧೀನದ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತದೆ. ನಮ್ಮ ಮಟ್ಟದಲ್ಲಿ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.