ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಉಭಯ ತಂಡಗಳು ಭರ್ಜರಿ ಸಿದ್ಧತೆಗಳನ್ನು ನಡೆಸಿವೆ, ಅಭ್ಯಾಸದ ವೇಳೆ ಟಿಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಗಾಯಗೊಂಡಿದ್ದಾರೆ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 4ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ನಾಯಕ ರೋಹಿತ್ ಶರ್ಮಾ ಗಾಯಗೊಂಡಿದ್ದು ಟೀಂ ಇಂಡಿಯಾ ಪಾಲಿಗೆ ನುಂಗಲಾಗದ ತುತ್ತಾಗಿದೆ, ಭಾನುವಾರ ಮೆಲ್ಬೊರ್ನ್ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದ್ದ ಹಿಟ್ ಮ್ಯಾನ್ ಗಾಯಗೊಂಡು ಅಭ್ಯಾಸವನ್ನು ಅರ್ಧದಲ್ಲೆ ನಿಲ್ಲಿಸಿದ್ದಾರೆ.
ನೆಟ್ಸ್ ಅಲ್ಲಿ ಅಭ್ಯಾಸ ಮಾಡುವಾಗ ಟೀಂ ಇಂಡಿಯಾದ ಥ್ರೋಡೌನ್ ಸ್ಪೆಷಲಿಸ್ಟ್ ದಯಾ ಅವರು ಎಸೆದ ಬಾಲ್ ರೋಹಿತ್ ಶರ್ಮಾರ ಎಡಮೊಣಕಾಲಿಗೆ ತಾಗಿದ್ದು, ನೋವು ತಾಳಲಾಗದೆ ಅಭ್ಯಾಸವನ್ನು ಮೊಟಕುಗೊಳಿಸಿದರು. ಬಳಿಕ ಅವರಿಗೆ ಫಿಸಿಯೋ ಆರೈಕೆ ಮಾಡಿದ್ದಾರೆ.
ನಿಲ್ಲಲು ಕೂಡ ಸಾಧ್ಯವಾಗದ ಕಾರಣ ಭಾನುವಾರದ 2ನೇ ಅವಧಿಯ ಅಭ್ಯಾಸದಿಂದ ರೋಹಿತ್ ಹೊರಗುಳಿದರು.ಇದು ಟೀಂ ಇಂಡಿಯಾಗೆ ಚಿಂತೆಯನ್ನು ಹೆಚ್ಚಿಸಿದೆ.
ಏಕೆಂದರೆ, ಡಿ.26ರಿಂದ 4ನೇ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದ್ದು, ಈ ಪಂದ್ಯ ಭಾರತದ ಪಾಲಿಗೆ ತುಂಬಾ ಮಹತ್ವವಾದದ್ದು.ಹೀಗಾಗಿ ಪಂದ್ಯದ ಆರಂಭಕ್ಕೂ ಮುನ್ನ ಗಾಯಗೊಂಡಿರುವುದು ಆತಂಕವನ್ನುಂಟು ಮಾಡಿದೆ.
ಭಾರತ ತಂಡವೂ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಾ ಫೈನಲ್ ಗೆ ತಲುಪಲು ಮುಂದಿನ 2ಪಂದ್ಯಗಳು ತುಂಬಾ ಮುಖ್ಯವಾಗಿದ್ದು, ಹಾಗಾಗಿ ಮುಂದಿನ 3ದಿನಗಳಲ್ಲಿ ಅವರು ಚೇತರಿಸಿಕೊಂಡು 4ನೇ ಟೆಸ್ಟ್ ಗೆ ಕಣಕ್ಕಿಳಿಯಲಿದ್ದಾರ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.