SUDDIKSHANA KANNADA NEWS/ DAVANAGERE/ DATE:28-05-2023
ದಾವಣಗೆರೆ: ದಿ ಕೇರಳ ಸ್ಟೋರಿ (THE KERALA STORY) ಸಿನಿಮಾ (CINEMA) ಎಲ್ಲೆಡೆ ಸಂಚಲನ ಸೃಷ್ಟಿಸಿದೆ. ಪೋಷಕರು, ವಿದ್ಯಾರ್ಥಿಗಳು ಚಿತ್ರ ವೀಕ್ಷಿಸಿ ಲವ್ ಜಿಹಾದ್ (LOVE ZIHAD) ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಮತ್ತಷ್ಟು ದಿನಗಳವರೆಗೆ ಚಿತ್ರ ಪ್ರದರ್ಶನಕ್ಕೆ ಬೇಡಿಕೆ ಇಟ್ಟಿದ್ದಾರೆ. ನಾವು ಸಿನಿಮಾ ನೋಡಲು ಆಗಿಲ್ಲ. ಈ ಕಾರಣಕ್ಕೆ ಮತ್ತೆ ಒಂದು ವಾರ ಕಾಲ ಚಿತ್ರ ಪ್ರದರ್ಶನಕ್ಕೆ ಅನುವು ಮಾಡಿಕೊಡುವಂತೆ ಕೇಳಿಕೊಂಡಿದ್ದಾರೆ.
ಈ ಕಾರಣಕ್ಕೆ ದಾವಣಗೆರೆಯ ಪ್ರೇರಣಾ ಯುವ ಸಂಸ್ಥೆಯು “ದಿ ಕೇರಳ ಸ್ಟೋರಿ”(THE KERALA STORY) ಸಿನಿಮಾ ವನ್ನು ಸಾರ್ವಜನಿಕರಿಗಾಗಿ ಉಚಿತವಾಗಿ ವೀಕ್ಷಿಸಲು ಅವಕಾಶ ಮಾಡಿಕೊಟ್ಟಿದೆ. ಕಳೆದ ಒಂದು ವಾರದಿಂದಲೂ ನಗರದ ತ್ರಿಶೂಲ್ ಚಿತ್ರಮಂದಿರ(THRISHUL THEATER)ದಲ್ಲಿ ಉಚಿತ ವೀಕ್ಷಣೆ ವ್ಯವಸ್ಥೆ ಏರ್ಪಡಿಸಿತ್ತು. ಇದಕ್ಕೆ ವಿವಿಧ ಕಾಲೇಜುಗಳ ವಿದ್ಯಾರ್ಥಿನಿಯರು, ಪೋಷಕರು ಖುಷಿ ವ್ಯಕ್ತಪಡಿಸಿದ್ದರು.
ಬೇಡಿಕೆ ಹೆಚ್ಚಾದ ಕಾರಣಕ್ಕೆ ಮೇ. 28 ರಿಂದ ಜೂನ್ 3 ರವೆರೆಗೆ ಪ್ರತಿದಿನ ಬೆಳಗ್ಗೆ 10.30 ಹಾಗೂ ಮಧ್ಯಾಹ್ನ 2 ಗಂಟೆಗೆ ತ್ರಿಶೂಲ್ ಚಿತ್ರಮಂದಿರ(THRISHUL THEATER)ದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ವೀಕ್ಷಿಸಬಹುದಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಿನಿಮಾಹೆ ವೀಕ್ಷಿಸಬೇಕೆಂದು ದಾವಣಗೆರೆಯ ಪ್ರೇರಣ ಯುವ ಸಂಸ್ಥೆಯ ಅಧ್ಯಕ್ಷ ಎಸ್. ಟಿ. ವೀರೇಶ್ ಅವರು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 98805- 44153, 98444- 22677 ಇಲ್ಲಿ ಸಂಪರ್ಕಿಸಬಹುದಾಗಿದೆ.
ದಿ ಕೇರಳ ಸ್ಟೋರಿ (THE KERALA STORY) ರಾಜ್ಯ ಮಾತ್ರವಲ್ಲ ದೇಶದ್ಯಾಂತ ಎಲ್ಲರ ಗಮನ ಸೆಳೆಯುತ್ತಿರುವ ಚಿತ್ರ. ಕೇರಳದಲ್ಲಿ ನಡೆಯುತ್ತಿರುವ ಲವ್ ಜಿಹಾದ್ (LOVE ZIHAD), ಮತಾಂತರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸವಿಸ್ತಾರವಾಗಿ ಬೆಳಕು ಚೆಲ್ಲಲಾಗಿದೆ. ಪ್ರತಿಯೊಬ್ಬ ಪೋಷಕರು, ಯುವತಿಯರು, ಮಹಿಳೆಯರು ನೋಡಲೇಬೇಕಾದ ಸಿನಿಮಾ ಕೂಡ ಹೌದು. ಇಂದಿನ ದಿನಗಳಲ್ಲಿ ಭಾರತೀಯ ಸಂಸ್ಕೃತಿ, ಹೆಣ್ಣು ಮಕ್ಕಳ ಜೀವನ, ಮತಾಂತರ ಆದವರ ಗೋಳು, ಲವ್ ಜಿಹಾದ್ ಗೆ ಬಲಿಯಾಗಿ ಬದುಕನ್ನೇ ಮೂರಾಬಟ್ಟೆಯನ್ನಾಗಿಸಿಕೊಂಡವರ ನೋವಿನ ಕಥೆ. ಹಾಗಾಗಿ, ಪ್ರತಿಯೊಬ್ಬರೂ ಚಿತ್ರ ವೀಕ್ಷಿಸಿ ಜಾಗೃತರಾಗಬೇಕು ಎಂದು ವೀರೇಶ್ ಅವರು ಮನವಿ ಮಾಡಿದ್ದಾರೆ.
ಸಿನಿಮಾ(CINEMA)ಗಳು ಕೇವಲ ಕಾಲ್ಪನಿಕವಾಗಿರುತ್ತವೆ. ಮತ್ತೆ ಕೆಲ ಸಿನಿಮಾಗಳು ಸತ್ಯಕ್ಕೆ ಹತ್ತಿರವಾಗುತ್ತಿರುತ್ತವೆ. ಸಂದೇಶವನ್ನೂ ನೀಡುತ್ತವೆ. ಅದೇ ರೀತಿಯಲ್ಲಿ ದಿ ಕೇರಳ ಸ್ಟೋರಿ (THE KERALA STORY) ಸಿನಿಮಾ ನೋಡಿದವರ ಅಭಿಪ್ರಾಯ ಕೇಳಿದರೆ ಅವರೆಲ್ಲರ ಅಭಿಪ್ರಾಯ ಏನು ಬರುತ್ತಿದೆ ಎಂಬುದು ಎಲ್ಲರಿಗೂ ಗೊತ್ತಾಗಿದೆ. ಈ ಕಾರಣಕ್ಕಾಗಿ ಪೋಷಕರು ಹಾಗೂ ಯುವತಿಯರು ಚಿತ್ರ (FILM) ವೀಕ್ಷಣೆಗೆ ಮತ್ತಷ್ಟು ದಿನಗಳ ಅವಕಾಶ ಮಾಡಿಕೊಡುವಂತೆ ಪದೇ ಪದೇ ಮನವಿ ಮಾಡಿದ ಕಾರಣಕ್ಕೆ ಮತ್ತೆ ಒಂದು ವಾರದವರೆಗೆ ಉಚಿತ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದೇವೆ. ಎಲ್ಲರೂ ತಪ್ಪದೇ ಸಿನಿಮಾ ವೀಕ್ಷಿಸಿ, ಮಕ್ಕಳಿಗೂ ಜಾಗೃತಿ ಮೂಡಿಸಿ ಎಂದು ಹೇಳಿದ್ದಾರೆ.
ಕೇವಲ ಯುವತಿಯರು, ಕಾಲೇಜು ಹುಡುಗಿಯರು ಮಾತ್ರವಲ್ಲ, ಯುವಕರೂ ನೋಡಲೇಬೇಕಾದ ಸಿನಿಮಾ ಕೂಡ ಹೌದು. ಲವ್ ಜಿಹಾದ್, ಮತಾಂತರಕ್ಕೆ ಒಳಗಾಗುವುದನ್ನು ತಪ್ಪಿಸುವಂಥ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ಮೂಲಕವಾದರೂ ಅರಿವು ಮೂಡಿಸೋಣ. ಕಾನೂನು ವಿರೋಧಿ ಚಟುವಟಿಕೆಗಳಿಗೆ ಮಟ್ಟ ಹಾಕುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗೋಣ ಎಂದು ವೀರೇಶ್ ಅವರು ಕರೆ ನೀಡಿದ್ದಾರೆ.