SUDDIKSHANA KANNADA NEWS/ DAVANAGERE/ DATE:26-04-2023
ದಾವಣಗೆರೆ (DAVANAGERE): ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆ (DAVANAGERE)ದಕ್ಷಿಣ ಕ್ಷೇತ್ರದ ಜೆಡಿಎಸ್ (JDS) ಅಭ್ಯರ್ಥಿ ಜೆ.ಅಮಾನುಲ್ಲಾ ಖಾನ್ ಅವರಿಗೆ ಮುಸ್ಲಿಂ ಸಮಾಜದ ತಂಜಿಮ್ ಸಮಿತಿಯ ನಾಲ್ವರು ಸದಸ್ಯರು ಬೆಂಬಲ ಘೋಷಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ಹಾಲಿ ಸದಸ್ಯ ಶಾನವಾಜ್ ಖಾನ್ ದಕ್ಷಿಣ ಕ್ಷೇತ್ರದಲ್ಲಿ ಸುಮಾರು 83,000 ಮುಸ್ಲಿಂ ಮತದಾರರು ಇದ್ದಾರೆ. ಈ ಕ್ಷೇತ್ರದಲ್ಲಿ ಸಮಾಜದ ಒಬ್ಬರು ಆಯ್ಕೆಯಾಗಬೇಕು ಎಂಬುದು ಜನರ ಆಶಯ. ಮುಸ್ಲಿಂ ಮತದಾರ ಈವರಗೂ ಆಯ್ಕೆ ಮಾಡುತ್ತಾ ಬಂದಿರುವ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಂದ ಸಮಾಜಕ್ಕೆ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಅಭಿವೃದ್ಧಿ ಆಗಿಲ್ಲ. ಆಮೀಷ ಮತ್ತು ಸುಳ್ಳು ಆಶ್ವಾಸನೆಗಳಿಗೆ ಕೆಲವರು ಬಲಿಯಾಗಿದ್ದಾರೆ. ಎಸ್. ಎಸ್. (SS) ಅವರಿಗೆ ಬೆಂಬಲ ನೀಡುವುದು ಅವರ ವೈಯಕ್ತಿಕ ನಿರ್ಧಾರ. ಮುಸ್ಲಿಂ ಸಮಾಜದ ತೀರ್ಮಾನ ಆಗಿಲ್ಲ ಎಂದು ಹೇಳಿದರು.
ದಕ್ಷಿಣ (NORTH) ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳಿದ್ದು, ಪರಿಹಾರಕ್ಕೆ ನಿರಂತರವಾಗಿ ಹೊರಾಟ ಮಾಡುತ್ತಾ ಬಂದಿರುವ ಜೆ . ಅಮಾನುಲ್ಲಾ ಖಾನ್ ಅವರಿಗೆ ಜೆಡಿಎಸ್ ಪಕ್ಷ ಅಭ್ಯರ್ಥಿಯೆಂದು ಘೋಷಿಸಿದ ನಂತರ ಸಹ ಅವರು ಕಾಂಗ್ರೆಸ್ (CONGRESS) ಪಕ್ಷದಿಂದ ಮುಸ್ಲಿಂರಿಗೆ ಅವಕಾಶ ನೀಡಿದರೆ ನಾನು ಸ್ಪರ್ಧೆಯಿಂದ ಹಿಂದೆ ಸರಿದು ಮುಸ್ಲಿಂ ಅಭ್ಯರ್ಥಿಗೆ ಬೆಂಬಲಿಸುವುದಾಗಿ ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದರು. ಸಮಾಜಕ್ಕೆ ಇಂತಹ ತ್ಯಾಗ ಮನೋಭಾವ ಉಳ್ಳ ವ್ಯಕ್ತಿ ಅವಶ್ಯಕತೆ ಇದ್ದು ಮುಸ್ಲಿಂ
ಸಮಾಜದ ಮತದಾರರು ಸಂಪೂರ್ಣವಾಗಿ ಬೆಂಬಲಿಸಿದರೆ ಸುಲಭವಾಗಿ ಜಯ ಸಾಧಿಸಬಹುದು ಎಂದರು.
2018 ರ ಚುನಾವಣೆಯಲ್ಲಿ ಉತ್ತರ ಕ್ಷೇತ್ರದಲ್ಲಿ ಶೇಕಡ 95 ರಷ್ಟು ಎಸ್.ಎಸ್.ಮಲ್ಲಿಕಾರ್ಜುನರಿಗೆ ಮತಗಳನ್ನು ನೀಡಿದರೂ ಸಹ ಅವರು ಸೋಲನ್ನು ಅನುಭವಿಸಿದರು . ರಾಜಕೀಯದಲ್ಲಿ ಸೋಲು ಗೆಲುವು ಸಹಜ. ಹಾಗಂತ ಅಧಿಕ ಮತಗಳನ್ನು
ಹೊಂದಿರುವ ಮುಸ್ಲಿಂ ಸಮಾಜ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡು ಅನೇಕ ಅವಕಾಶಗಳಿಂದ ವಂಚಿತಗೊಂಡಿದೆ. ಈ ಭಾಗದಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿದ್ದು, ಒಂದು ಆಸ್ಪತ್ರೆ, ಪದವಿ ಕಾಲೇಜು ಸೇರಿದಂತೆ ಯಾವುದೇ ಕೈಗಾರಿಕೆ ತರುವ
ಪ್ರಯತ್ನ ಮಾಡಿಲ್ಲ ಎಂದು ಆರೋಪಿಸಿದರು.
ಅಮಾನುಲ್ಲಾ ಖಾನ್ ಮಾತನಾಡಿ, ಶಾಸಕರೇ ಅಧ್ಯಕ್ಷರಾಗಿರುವ ಅಶ್ರಯ ಸಮಿತಿಯಲ್ಲಿ ಬಡಾವಣೆಗಳನ್ನು ನಿರ್ಮಿಸಲಾಗಿದೆ. ಸಾವರಾರು ನಿವೇಶನಗಳನ್ನು ಅವೈಜ್ಞಾನಿಕಾವಾಗಿ ಹಂಚಿಕೆ ಮಾಡಿದ್ದು ಈ ಭಾಗದ ರಿಂಗ್ ರಸ್ತೆಯ ಹೆಗ್ಡೆ ನಗರದ ಬಡವರಿಗೆ ಶಾಶ್ವತ ಸೂರು ಕಲ್ಪಿಸಿ ಸ್ಥಳಾಂತರ ಮಾಡಲು ಇಚ್ಛೆಶಕ್ತಿ ತೋರಿಸಿಲ್ಲ. ಶಾಸಕ ಡಾ. ಶಾಮನೂರು ಶಿವಶಂಕರಪ್ಪನರಿಗೆ 30 ವರ್ಷಗಳಿಂದ ಬೆಂಬಲಿಸಿಕೊಂಡು ಬಂದಿದ್ದೇವೆ. ಈ ಬಾರಿ ಕ್ಷೇತ್ರಕ್ಕೆ ಒಬ್ಬ ಯುವ ಉತ್ಸಾಹಿ ಶಾಸಕನನ್ನು ಆಯ್ಕೆ ಮಾಡಲು ಮುಸ್ಲಿಂ ಮತದಾರರು ನಿರ್ಧರಿಸಿದ್ದಾರೆ ಎಂದರು.
ಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಹೆಚ್. ಶಫೀವುಲ್ಲಾ, ಟೈಲ್ಸ್ ಜಬಿವುಲ್ಲಾ, ಮೌಲಾನಾ ಅಬ್ದುಲ್ ಮುನಾಬ್ ಸಾಬ್, ಶಾಹೀದ್ ಖಾನ್, ಜಲೀದ್ ಅಹ್ಮದ್ ಖಾನ್, ಸೈಯ್ಯದು ಇಮ್ತಿಯಾಜ್, ಸಾದಿಕ್ ಮತ್ತಿತರರು ಹಾಜರಿದ್ದರು.