SUDDIKSHANA KANNADA NEWS/ DAVANAGERE/ DATE:23-04-2023
ದಾವಣಗೆರೆ(DAVANAGERE): ಕುರುಬ ಸಮಾಜದ ಯುವ ಮುಖಂಡ, ಯುವಕರೊಟ್ಟಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಕುಂದುವಾಡದ ಮುಖಂಡ ಕರಿಗಾರ್ ಮಂಜುನಾಥ್ (KARIGAR MANJUNATH)ಅವರಿಗೆ ಜೆಡಿಎಸ್ (JDS) ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ಕೊಡದೇ ಕೈಕೊಟ್ಟಿದೆ. ಆಕಾಂಕ್ಷಿಯಾಗಿದ್ದ ಕರಿಗಾರ್ ಮಂಜುನಾಥ್ ಅವರು, ನೂರಾರು ಬೆಂಬಲಿಗರು, ಯುವಕರ ಜೊತೆಗೆ ನಗರದ ಜಿಎಂಐಟಿ ಗೆಸ್ಟ್ ಹೌಸ್ (GMIT GUEST HOUSE)ನಲ್ಲಿ ಬಿಜೆಪಿ (BJP) ಸೇರ್ಪಡೆಯಾದರು.

ಜೆಡಿಎಸ್ (JDS) ಪಕ್ಷದಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದ ಕರಿಗಾರ್ ಮಂಜುನಾಥ್ ಸಂಘಟನೆಯನ್ನೂ ಮಾಡಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನಿಂದ ಕಣಕ್ಕಿಳಿದು ಪೈಪೋಟಿ ನೀಡುವ ನಿರೀಕ್ಷೆ ಹೊಂದಿದ್ದರು. ಆದ್ರೆ ಕೊನೆ ಗಳಿಗೆಯಲ್ಲಿ ಟಿಕೆಟ್ ಮಿಸ್ ಆಯ್ತು. ಈ ಹಿನ್ನೆಲೆಯಲ್ಲಿ ಸಂಸದ ಜಿ. ಎಂ. ಸಿದ್ದೇಶ್ವರ, ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲೋಕಿಕೆರೆ ನಾಗರಾಜ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪರು ಸೇರಿದಂತೆ ಇತರೆ ಮುಖಂಡರ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ(BJP)ಗೆ ಬಂದರು.
ಈ ವೇಳೆ ಮಾತನಾಡಿದ ಕುಂದುವಾಡದ ಯುವ ಮುಖಂಡ ಕರಿಗಾರ್ ಮಂಜುನಾಥ್, ಅಧಿಕೃತವಾಗಿ ಇಂದು ಬಿಜೆಪಿ ಸೇರಿದ್ದೇನೆ. ಹಲವು ವರ್ಷಗಳಿಂದ ಜೆಡಿಎಸ್ ಪಕ್ಷಕ್ಕಾಗಿ ದುಡಿದಿದ್ದೇನೆ. ಆದ್ರೆ, ಕೆಲವರ ಕುತಂತ್ರದಿಂದ ಟಿಕೆಟ್ (TICKET) ಕೈ ತಪ್ಪಿದೆ. ಈ ಕಾರಣಕ್ಕಾಗಿ ನನ್ನ ಬೆಂಬಲಿಗರು ಹಾಗೂ ಯುವಕರ ಜೊತೆ ಬಿಜೆಪಿಗೆ ಸೇರಿದ್ದೇನೆ. ದಾವಣಗೆರೆ ಉತ್ತರ (NORTH) ಹಾಗೂ ದಕ್ಷಿಣ (SOUTH) ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತೇನೆ ಎಂದು ತಿಳಿಸಿದರು.
ಸಂಸದ ಜಿ. ಎಂ ಸಿದ್ದೇಶ್ವರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ (NARENDRA MODI), ಬಿ. ಎಸ್. ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ಅವರ ಆಡಳಿತ ಮೆಚ್ಚಿ ಇಂದು ಭಾರತೀಯ ಜನತಾ ಪಾರ್ಟಿಗೆ ಅನೇಕ ಯುವಕರು ಸೇರ್ಪಡೆ ಆಗುತ್ತಿದ್ದಾರೆ.
ಯುವ ಮುಖಂಡ ಕರಿಗಾರ್ ಮಂಜುನಾಥ್ ಅವರು ಬಿಜೆಪಿಗೆ ಬಂದಿರುವುದು ಶಕ್ತಿ ತಂದಿದೆ.ಮಂಜುನಾಥ್ ಉತ್ತಮ ನಾಯಕತ್ವ ಹೊಂದಿದ್ದು, ಅವರ ಬೆಂಬಲಿಗರು ಸಹ ಸೇರ್ಪಡೆಯಾಗಿರುವುದು ಸಂತೋಷದ ವಿಷಯ. ಈ ಸೇರ್ಪಡೆಯಿಂದ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಅನುಕೂಲ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.
ದಾವಣಗೆರೆ ಉತ್ತರ ಬಿಜೆಪಿ ಅಭ್ಯರ್ಥಿ ಲೋಕಿಕೆರೆ ನಾಗರಾಜ್, ದೂಡಾ ಮಾಜಿ ಅಧ್ಯಕ್ಷರಾದ ದೇವರಮನೆ ಶಿವಕುಮಾರ್, ರಾಜನಹಳ್ಳಿ ಶಿವಕುಮಾರ್, ಮುಖಂಡರಾದ ಬಿ. ಎಂ. ಸತೀಶ್, ಶ್ರೀನಿವಾಸ್ ದಾಸಕರಿಯಪ್ಪ, ಮಾಜಿ ಮೇಯರ್ ಹೆಚ್. ಎನ್. ಗುರುನಾಥ್, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್. ಜಿ. ಗಣೇಶಪ್ಪ, ಸಂಗನಗೌಡ್ರು, ಬಿ. ಎಸ್. ಜಗದೀಶ್, ಮಹಾನಗರ ಪಾಲಿಕೆ ಸದಸ್ಯ ಪ್ರಸನ್ನಕುಮಾರ್, ಅಣ್ಣಪ್ಪ, ಮಹೇಶಪ್ಪ, ನವೀನ್ ಸೇರಿದಂತೆ ಮತ್ತಿತರರು ಈ ವೇಳೆ ಹಾಜರಿದ್ದರು.