SUDDIKSHANA KANNADA NEWS/ DAVANAGERE/ DATE:23-04-2023
ದಾವಣಗೆರೆ: ದಾವಣಗೆರೆ (DAVANAGERE) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ. ರಿಷ್ಯಂತ್ (C. B. RISHYANTH) ಅವರನ್ನು ವರ್ಗಾವಣೆ ಮಾಡಲಾಗಿದೆ. ಚುನಾವಣೆ ಹೊತ್ತಲ್ಲಿ ವರ್ಗಾವಣೆ ಮಾಡಿರುವುದು ಅನುಮಾನಕ್ಕೂ ಕಾರಣವಾಗಿದೆ.
ಕಲ್ಬುರ್ಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಹಾಗೂ ತರಬೇತಿ ಪ್ರಾಂಶುಪಾಲರಾಗಿದ್ದ ಡಾ. ಅರುಣ್ ಅವರನ್ನು ದಾವಣಗೆರೆಯ ನೂತನ ಎಸ್ಪಿಯಾಗಿ ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.
ರಿಷ್ಯಂತ್ ಅವರಿಗೆ ಯಾವುದೇ ಸ್ಥಳ ತೋರಿಸಿಲ್ಲ. ಚುನಾವಣೆ (ELECTION) ಹಿನ್ನೆಲೆಯಲ್ಲಿ ವರ್ಗಾವಣೆ ಮಾಡಲಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ದಾವಣಗೆರೆ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಸಿ. ಬಿ. ರಿಷ್ಯಂತ್ ಅವರು ಮರಳು ಮಾಫಿಯಾ, ಅಕ್ಕಿ ಮಾಫಿಯಾ, ಕಾನೂನು ಮತ್ತು ಸುವ್ಯವಸ್ಥೆ ಕುರಿತಂತೆ ಬಿಗಿಯಾದ ಕ್ರಮ ತೆಗೆದುಕೊಂಡಿದ್ದರು. ಜೊತೆಗೆ ರಿಷ್ಯಂತ್ ಅವರು ಎಸ್ಪಿಯಾಗಿ ಬಂದ ಬಳಿಕ ರೌಡಿ ಚಟುವಟಿಕೆಗಳಿಗೂ ಬ್ರೇಕ್ ಬಿದ್ದಿತ್ತು.
ಜಿಲ್ಲೆಯಲ್ಲಿ ಉತ್ತಮ ಹೆಸರು ಗಳಿಸಿದ್ದ ರಿಷ್ಯಂತ್ ಸಾಕಷ್ಟು ಅಪರಾಧ ಪ್ರಕರಣಗಳು ಭೇದಿಸಿದ್ದರು. ನಕಲಿ ಚಿನ್ನ ಮಾರಾಟ, ವಂಚನೆ, ಸೈಬರ್ ಕ್ರೈಂ, ಅಪರಾಧಿ ಕೃತ್ಯಗಳ ಆರೋಪಿಗಳ ಪತ್ತೆ ಹಚ್ಚುವಲ್ಲಿ ದಿಟ್ಟ ಕ್ರಮ ಕೈಗೊಂಡಿದ್ದರು.
ಭತ್ತ, ಜೋಳ ಖರೀದಿಸಿ ವಂಚಿಸಿದ್ದವರ ಹೆಡೆಮುರಿ ಕಟ್ಟಿ ಹಣ ವಾಪಸ್ ನೀಡುವಂತೆ ಮಾಡುವ ಪ್ರಕರಣ ಭೇದಿಸಿ ರೈತರಿಂದ ಪ್ರಶಂಸೆಗೂ ಪಾತ್ರರಾಗಿದ್ದರು.
ಚುನಾವಣೆ ಹೊತ್ತಲ್ಲಿ ದಿಢೀರ್ ವರ್ಗಾವಣೆ ಮಾಡಿರುವುದು ಅನುಮಾನಕ್ಕೂ ಕಾರಣವಾಗಿದೆ. ಜೊತೆಗೆ ಕಳೆದ ತಿಂಗಳು ಕುಕ್ಕರ್, ಸೀರೆ ಸೇರಿದಂತೆ ಅಡುಗೆ ಉಪಕರಣಗಳನ್ನು ಹಂಚುತ್ತಿದ್ದ ಆರೋಪದ ಮೇಲೆ ಕಾಂಗ್ರೆಸ್ ನ ಹಿರಿಯ ಶಾಸಕ
ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ವಿರುದ್ಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿತ್ತು. ಆಗ ಪತ್ರಿಕಾಗೋಷ್ಠಿಯಲ್ಲಿ ಇಬ್ಬರ ಹೆಸರನ್ನು ಸಿ. ಬಿ. ರಿಷ್ಯಂತ್ ಅವರು
ಹೇಳಿದ್ದರು. ಒಟ್ಟಿನಲ್ಲಿ ದಿಢೀರ್ ವರ್ಗಾವಣೆ ಸಾಕಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಜೊತೆಗೆ ಯಾವುದೇ ಜಾಗ ತೋರಿಸದೇ ಇರುವುದು ಮತ್ತಷ್ಟು ಅನುಮಾನ ಹೆಚ್ಚಾಗಲು ಕಾರಣವಾಗಿದೆ.
ಶಾಸಕ ಮುನಿರತ್ನ ಅವರ ಅಳಿಯ ಆಗಿರುವ ಸಿ. ಬಿ. ರಿಷ್ಯಂತ್ ಅವರಿಗೆ ಈ ಕಾರಣದಿಂದಲೂ ವರ್ಗಾವಣೆ ಮಾಡಿರಬಹುದು ಎಂದು ಹೇಳಲಾಗುತ್ತಿದೆ. ಚುನಾವಣೆ ಹೊತ್ತಲ್ಲಿ ಬಿಜೆಪಿ ಪರ ಕೆಲಸ ಮಾಡುತ್ತಾರೆ ಎಂಬ ಕಾರಣ ನೀಡಿ ವರ್ಗಾವಣೆ
ಮಾಡಿರುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.