ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಯಾರು ಉಪವಾಸ ಇರಲ್ಲ: ಡಾ. ಎಸ್ಸೆಸ್

On: April 16, 2023 11:24 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:16-04-2023

 

ದಾವಣಗೆರೆ: ದಾವಣಗೆರೆ (DAVANAGERE) ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ (CONGRESS) ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶಾಸಕ ಡಾ. ಶಾಮನೂರು ಶಿವಶಂಕರಪ್ಪನವರು 45ನೇ ವಾರ್ಡ್ ನ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದರು.

ಕರೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ 45ನೇ ವಾರ್ಡ್ (45 WARD) ನ ಕರೂರು, ಯರಗುಂಟೆ, ಅಶೋಕ ನಗರ, ಎಸ್.ಎಂ.ಕೃಷ್ಣ ನಗರ ಸೇರಿದಂತೆ ವಿವಿಧ ಭಾಗಗಳಲ್ಲಿ ಮತಯಾಚಿಸಲಾಯಿತು.

ಪ್ರಚಾರದಲ್ಲಿ ಮತದಾರರನ್ನುದ್ದೇಶಿಸಿ ಮಾತನಾಡಿದ ಡಾ. ಶಾಮನೂರು ಶಿವಶಂಕರಪ್ಪನವರು ಕಾಂಗ್ರೆಸ್ (CONGRESS) ಪಕ್ಷ ಅಧಿಕಾರದಲ್ಲಿದ್ದರೆ ಯಾರು ಸಹ ಉಪವಾಸ ಇರಲ್ಲ. ಪ್ರತಿಯೊಬ್ಬರಿಗೂ ಅನ್ನ, ಆಶ್ರಯವನ್ನು ಕಾಂಗ್ರೆಸ್ ಪಕ್ಷ ನೀಡುತ್ತಾ ಬಂದಿದೆ ಎಂದು ತಿಳಿಸಿದರು.

ಕಾಂಗ್ರೆಸ್ (CONGRESS) ಪಕ್ಷ (PARTY) ಅಧಿಕಾರಕ್ಕೆ ಬಂದ ತಕ್ಷಣ ಪ್ರತಿಯೊಬ್ಬರಿಗೂ 10ಕೆ.ಜಿ.ಅಕ್ಕಿ, ಪ್ರತಿ ಕುಟುಂಬದ ಯಜಮಾನಿಗೆ ಪ್ರತಿತಿಂಗಳು 2 ಸಾವಿರ ರೂ., 200 ಯುನಿಟ್‌ವರೆಗೆ ಉಚಿತ ವಿದ್ಯುತ್ ಮತ್ತು ನಿರುದ್ಯೋಗ ಪದವೀಧರರಿಗೆ ಭತ್ಯೆಯನ್ನು ಸಹ ನೀಡಲಾಗುವುದು ಎಂದರು.

ಕಾಂಗ್ರೆಸ್ ಪಕ್ಷ ಎಲ್ಲಾ ವರ್ಗ, ಜಾತಿ-ಧರ್ಮದವರ ಪಕ್ಷವಾಗಿದ್ದು, ಪ್ರತಿ ಹಂತದಲ್ಲೂ ಸೌಲಭ್ಯ ಕಲ್ಪಿಸಲಾಗುತ್ತಿದೆ., ಮತದಾರರು ಇದನ್ನರಿತು ಮತ ನೀಡುವ ವೇಳೆ ಯೋಚಿಸಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ಉದಯ್‌ಕುಮಾರ್, ವಾರ್ಡ್ ಅಧ್ಯಕ್ಷ ಬಾಲಕೃಷ್ಣ, ಹನುಮಂತಪ್ಪ ಕರೂರು, ಎಸ್.ಬಸಪ್ಪ, ಸೀಮೆಎಣ್ಣೆ ಮಲ್ಲೇಶಪ್ಪ, ವೆಂಕಣ್ಣ, ಆನಂದಪ್ಪ, ಎಂ.ಜಿ.ನಾಗೇಂದ್ರ, ನರೇಂದ್ರ, ಅಲೆಕ್ಸಾಂಡರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ನಗರಸಭೆ ಮಾಜಿ ಅಧ್ಯಕ್ಷ ಬಿ.ವೀರಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಯೂಬ್ ಪೈಲ್ವಾನ್, ಬೆಲ್ಲದ ಶಂಕರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ, ನಗರಸಭೆ ಮಾಜಿ ಅಧ್ಯಕ್ಷ ಎಂ.ಮಂಜುನಾಥ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಅನಿತಾಬಾಯಿ ಮಾಲತೇಶ್, ಬ್ಲಾಕ್ ಅಧ್ಯಕ್ಷೆ ಶುಭಮಂಗಳ, ಓಬಿಸಿ ರಾಜ್ಯ ಕಾರ್ಯದರ್ಶಿ ಜಮ್ನಳ್ಳಿ ನಾಗರಾಜ್, ಮುಖಂಡರಾದ ಪೈಲ್ವಾನ್ ಭರಮಪ್ಪ, ಕರೂರು ನರೇಶ್, ರಿಯಾಜ್, ಮುಸ್ತಾಫ, ರಮೇಶ್, ಲೋಕೇಶ್, ಕ್ರಿಕೆಟ್ ಹಾಲಪ್ಪ, ಅಲ್ತಾಮಷ್, ಮಹೇಶ್, ಹರೀಶ್, ಸಿದ್ದು, ವೆಂಕಟೇಶ್, ಕರಿಬಸಪ್ಪ, ಮಧು, ಶಶಿ, ಬಸವರಾಜಪ್ಪ, ಮಜೀದ್, ಬಸಣ್ಣ, ದುರುಗೇಶ್, ಲೋಕಣ್ಣ, ಮಲ್ಲೇಶಪ್ಪ, ಹನುಮಂತಪ್ಪ, ಮುತ್ತು, ಇಟ್ಟಿಗುಡಿ ಆನಂದ್, ಸಾಗರ್ ಎಲ್. ಹೆಚ್. ಮತ್ತಿತರರು ಹಾಜರಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment