SUDDIKSHANA KANNADA NEWS/ DAVANAGERE/ DATE:11-04-2023
ದಾವಣಗೆರೆ (DAVANAGERE) : ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿ (BJP)ಇನ್ನು ತನ್ನ ಮೊದಲ ಪಟ್ಟಿ ಪ್ರಕಟಿಸಲು ಹೆಣಗಾಡುತ್ತಿದೆ. ನವದೆಹಲಿಯಲ್ಲಿ ಸಭೆ (MEETING) ಮೇಲೆ ಸಭೆಗಳು ನಡೆಯುತ್ತಿವೆ. ಇನ್ನು ಯಾರಿಗೆ ಟಿಕೆಟ್ (TICKET) ಸಿಗುತ್ತದೆ ಎಂಬುದು ಎಲ್ಲರಲ್ಲೂ ಕುತೂಹಲ ಕೆರಳಿಸಿದೆ. ಆದ್ರೆ, ದಾವಣಗೆರೆ ಜಿಲ್ಲೆ ಹೊನ್ನಾಳಿ ಬಿಜೆಪಿ (BJP) ಶಾಸಕ ಎಂ. ಪಿ. ರೇಣುಕಾಚಾರ್ಯ (M. P. RENUKACHARYA) ಮಾತ್ರ ಟಿಕೆಟ್ (TICKET) ಘೋಷಣೆಯಾಗದಿದ್ದರೂ ನಾಮಪತ್ರ ಸಲ್ಲಿಸುವ ದಿನ ಹೇಳಿದ್ದಾರೆ. ಜನರಿಗೂ ಆ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ಮನವಿ ಮಾಡುತ್ತಿದ್ದಾರೆ.
ಟಿಕೆಟ್ (TICKET) ಸಿಕ್ಕೇ ಸಿಗುತ್ತೆ ಎಂಬ ಅಚಲ ವಿಶ್ವಾಸ ರೇಣುಕಾಚಾರ್ಯ (RENUKACHARYA) ಅವರದ್ದಾಗಿದೆ. ಸಂಭಾವ್ಯರ ಪಟ್ಟಿಯಲ್ಲಿ ರೇಣುಕಾಚಾರ್ಯರ ಹೆಸರಿದೆ. ಆದ್ರೆ, ಬೇರೆ ಯಾವ ಶಾಸಕರಾಗಲೀ, ಆಕಾಂಕ್ಷಿಗಳಾಗಲೀ ತಾನು ನಾಮಪತ್ರ ಸಲ್ಲಿಸುವ ದಿನ ಹೇಳಿಲ್ಲ. ರೇಣುಕಾಚಾರ್ಯ ಹೊನ್ನಾಳಿ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಏಪ್ರಿಲ್ 20ರಂದು ಹೊನ್ನಾಳಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದೇನೆ. ನಾಲ್ಕನೇ ಬಾರಿ ಶಾಸಕರಾಗಲು ಆಶೀರ್ವದಿಸಿ. ಹೆಚ್ಚಿನ ಸಂಖ್ಯೆಯಲ್ಲಿ ಆ ದಿನದಂದು ಎಲ್ಲರೂ ಬರಬೇಕು ಎಂದು ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ಆಹ್ವಾನ ನೀಡತೊಡಗಿದ್ದಾರೆ.
ದೆಹಲಿಯಲ್ಲಿ ಇನ್ನು ಯಾರಿಗೆ ಟಿಕೆಟ್ (TICKET) ಎಂಬ ಘೋಷಣೆ ಆಗಿಲ್ಲ. ಆದರೂ ಮೊದಲೇ ನಾಮಪತ್ರ ಸಲ್ಲಿಕೆ ದಿನ ಘೋಷಣೆ ಮಾಡಿರುವುದು ಚರ್ಚೆಗೂ ಕಾರಣವಾಗಿದೆ. ಮಾಸಡಿ ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿ ನೀಡಿ ಜನರಿಗೆ ಆಹ್ವಾನ ನೀಡಿದ್ದಾರೆ. ಟಿಕೆಟ್ ಘೋಷಣೆ ಆಗದಿದ್ದರೂಎಂಪಿಆರ್ ನಡೆ ತೀವ್ರ ಕುತೂಹಲ ಕೆರಳಿಸಿದೆ. ಹೊನ್ನಾಳಿಯಲ್ಲಿ ತನ್ನನ್ನು ಬಿಟ್ಟರೆ ಬೇರೆ ಯಾರಿಗೂ ಟಿಕೆಟ್ ಕೊಡುವುದಿಲ್ಲ ಎಂಬ ಅದಮ್ಯ ವಿಶ್ವಾಸ ರೇಣುಕಾಚಾರ್ಯಅವರಲ್ಲಿ ಇದ್ದಂತೆ ಕಾಣುತ್ತಿದೆ.
ಬೇರೆ ಆಕಾಂಕ್ಷಿಗಳು ಇಲ್ಲದ ಕಾರಣ ಬಿಜೆಪಿ (BJP) ತನಗೆ ಟಿಕೆಟ್ ಕೊಡುವುದು ಖಚಿತ ಎಂಬಂತೆ ಮಾತನಾಡುತ್ತಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಬರುವಂತೆ ಕುಂದೂರು, ಸಾಸ್ವೆಹಳ್ಳಿ, ಅರಕೆರೆ, ಗೋವಿನಕೋವಿ ಸೇರಿ ಹಲವು ಗ್ರಾಮಗಳಲ್ಲಿ ಸಂಚಾರ ಮಾಡಿ ಪ್ರಚಾರ ಮಾಡುತ್ತಿದ್ದಾರೆ.
ಭ್ರಷ್ಟಾಚಾರ ಆರೋಪ, ಸೆಕ್ಸ್ (SEX) ಹಗರಣದಲ್ಲಿ ಸಿಕ್ಕಿ ಬಿದ್ದವರು ಮತ್ತು ವಿವಾದಾತ್ಮಕ ಶಾಸಕರಿಗೆ ಟಿಕೆಟ್ ನಿರಾಕರಣೆಯಾಗುವ ಸಾಧ್ಯತೆಯ ವದಂತಿ ಇರುವಾಗಲೇ ರೇಣುಕಾಚಾರ್ಯರ ನಡೆ ಸಾಕಷ್ಟು ಕುತೂಹಲಕ್ಕೂ ಕಾರಣವಾಗಿದೆ.
ಕಳೆದ ಕೆಲ ದಿನಗಳ ಹಿಂದೆಯಷ್ಟೇ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಾಸಕರಿಗೆ ಹಿನ್ನೆಡೆಯಾಗಿತ್ತು. ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಕಳೆದ ಏಳು ವರ್ಷಗಳ ಹಿಂದೆ ಪ್ರಕರಣ ದಾಖಲಾಗಿತ್ತು. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದ ಆರೋಪ ರೇಣುಕಾಚಾರ್ಯರ ಮೇಲಿತ್ತು ಕೆಲ ವಿಚಾರಗಳಲ್ಲಿ ವಿವಾದಕ್ಕೆ ಒಳಗಾಗಿದ್ದ ಶಾಸಕ ರೇಣುಕಾಚಾರ್ಯರಿಗೆ ಟಿಕೆಟ್ (TICKET) ಘೋಷಣೆಯಾಗುವುದು ತನಗೆ ಎಂಬ ವಿಶ್ವಾಸಕ್ಕೆ ಧಕ್ಕೆ ಆಗದಿರಲಿ ಎಂದು ರೇಣುಕಾಚಾರ್ಯ ಅಭಿಮಾನಿಗಳು, ಮುಖಂಡರು ಹೇಳುತ್ತಿದ್ದಾರೆ.
ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದ್ದರು ಎಂಬಂತೆ ರೇಣುಕಾಚಾರ್ಯ ತನಗೆ ಟಿಕೆಟ್ (TICKET) ಎಂಬಂತ ರೀತಿಯಲ್ಲಿ ವರ್ತಿಸುತ್ತಿರುವುದು ಸಂಘ ಪರಿವಾರದ ನಾಯಕರಿಗೆ ಸ್ವಲ್ಪ ಇರಿಸು ಮುರಿಸು ತಂದಿರುವುದಂತೂ ನಿಜ. ಘಟಾನುಘಟಿ ನಾಯಕರೇ ಸುಮ್ಮನಿದ್ದಾರೆ. ರೇಣುಕಾಚಾರ್ಯ ಅವರು ಟಿಕೆಟ್ ಘೋಷಣೆಯಾಗದಿದ್ದರೂ ನಡೆದುಕೊಂಡಿರುವ ರೀತಿ ಎಲ್ಲರ ಹುಬ್ಬೇರುವಂತೆ ಮಾಡಿದೆ.