ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಅರವಳಿಕೆ ಮದ್ದು ನೀಡಿ ಪುಂಡಾನೆ ಸೆರೆ: ನೆಮ್ಮದಿಯ ನಿಟ್ಟುಸಿರು ಬಿಟ್ಟ ಜನರು.. ಒಂಟಿ ಸಲಗ ಸೆರೆ ಕಾರ್ಯಾಚರಣೆ ಹೇಗಿತ್ತು ಗೊತ್ತಾ…?

On: April 11, 2023 9:47 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:11-04-2023

ದಾವಣಗೆರೆ (DAVANAGERE): ಚನ್ನಗಿರಿ (CHANNAGIRI) ಸೇರಿದಂತೆ ವಿವಿಧೆಡೆ ಜನರ ನಿದ್ದೆಕೆಡಿಸಿದ್ದ ಸಲಗ ಕೊನೆಗೂ ಸೆರೆಯಾಗಿದೆ. ಹೊನ್ನಾಳಿ – ನ್ಯಾಮತಿ ಅವಳಿ ತಾಲೂಕಿನ ಜೀನಹಳ್ಳಿ – ಕೆಂಚಿಕೊಪ್ಪ ಬಳಿ ಅರವಳಿಕೆ ನೀಡಿ ಪುಂಡಾನೆ ಸೆರೆ ಹಿಡಿಯಲಾಗಿದೆ.

ಕಳೆದ ನಾಲ್ಕು ದಿನಗಳಿಂದಲೂ ಆನೆ ಹಿಡಿಯಲು ಅರಣ್ಯ (FOREST) ಇಲಾಖೆ ಕಾರ್ಯಾಚರಣೆ ಕೈಗೊಂಡಿತ್ತು. ಮಾತ್ರವಲ್ಲ, ಸಂತೇಬೆನ್ನೂರಿನ 16 ವರ್ಷದ ಬಾಲಕಿಯನ್ನು ಸೊಂಡಿಲಿನಿಂದ ಎತ್ತಿ ಬಿಡಾಡಿ ಕೊಂದು ಹಾಕಿತ್ತು. ಊರೊಳಗೆ ದಾಂಧಲೆ ನಡೆಸಿತ್ತು. ಸುಮಾರು ಆರು ಮಂದಿ ಮೇಲೆ ದಾಳಿ ನಡೆಸಿದ್ದ ಪುಂಡಾನೆ ಕೊನೆಗೂ ಸಿಕ್ಕಿ ಬಿದ್ದಿದ್ದು, ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಚನ್ನಗಿರಿ ತಾಲ್ಲೂಕಿನ ಸೂಳೆಕೆರೆ, ಸಂತೇಬೆನ್ನೂರು, ಹೊನ್ನಾಳಿ (HONNALI) ಸೇರಿದಂತೆ ಹಲವು ಗ್ರಾಮಗಳಲ್ಲಿ ಓಡಾಡುತ್ತಿದ್ದ ಆನೆ ಸೆರೆಗೆ ಆನೆ ಕ್ಯಾಂಪಿನ ವೈದ್ಯಾಧಿಕಾರಿ ಡಾ. ವಿನಯ್ ಅವರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಆದ್ರೆ, ಅರವಳಿಕೆ ಮದ್ದು ನೀಡಲು ಹೋಗಿದ್ದಾಗ ವಿನಯ್ ಮೇಲೆ ದಾಳಿ ನಡೆಸಿತ್ತು. ಸೊಂಟದ ಮೇಲೆ ಕಾಲಿಟ್ಟಿದ್ದ ಆನೆಯು ಮಾರಣಾಂತಿಕ ದಾಳಿ ನಡೆಸಿತ್ತು. ನಂತರ ಸ್ಥಳದಲ್ಲಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಯು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ (HOSPITAL) ಗೆ ವೈದ್ಯರನ್ನು ಕರೆದುಕೊಂಡು ಹೋಗಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಹೆಣ್ಣಾನೆ ಆಕರ್ಷಣೆ ಆಪರೇಷನ್:

ಸೂಳೆಕೆರೆ, ಸಂತೇಬೆನ್ನೂರು ಸೇರಿದಂತೆ ಕೆಲ ಗ್ರಾಮಗಳಲ್ಲಿ ಸಂಚರಿಸಿದ್ದ ಆನೆಯು ಜನರ ಮೇಲೆ ದಾಳಿ ನಡೆಸುತ್ತಿದ್ದದ್ದು ಆತಂಕಕ್ಕೆ ಕಾರಣವಾಗಿತ್ತು. ತಾಯಿ ಮಗಳ ಮೇಲೆ ದಾಳಿ ಮಾಡಿದಾಗಲಂತೂ ಆತಂಕ ಹೆಚ್ಚಾಯಿತು. ಈ ಕಾರಣದಿಂದ
ಜನರು ಮನೆಯಿಂದ ಹೊರಗೆ ಬರಲು ಹಾಗೂ ತೋಟ, ಜಮೀನುಗಳಿಗೆ ಹೋಗಲು ಹೆದರುವಂಥ ಸ್ಥಿತಿ ನಿರ್ಮಾಣವಾಗಿತ್ತು. ಒಂದೆಡೆ ಕಾರ್ಯಾಚರಣೆ (OPERATION)ಮತ್ತೊಂದೆಡೆ ಆನೆ ದಾಳಿ ಆತಂಕ ಹೆಚ್ಚಾಗುವಂತೆ ಮಾಡಿತ್ತು. ಆದ್ರೆ, ಕೊನೆಗೂ ನ್ಯಾಮತಿ ಬಳಿಯ ಜೀನಹಳ್ಳಿ – ಕೆಂಚಿಕೊಪ್ಪ ಸಮೀಪದಲ್ಲಿ ಸೆರೆ ಸಿಕ್ಕಿದೆ.

ಆನೆ ಪತ್ತೆ ಹಚ್ಚಲು ಸೂಳೆಕೆರೆ ಪರಿಸರದಲ್ಲಿ ಡ್ರೋಣ್ (DRONE) ಸಹ ಬಳಕೆ ಮಾಡಲಾಯಿತು. ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗುತ್ತಿದ್ದ ಆನೆ ಸೆರೆ ಹಿಡಿಯಲು ಗಜದಳದೊಂದಿಗೆ ನೂರಾರು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಆದ್ರೂ ಸೆರೆ ಹಿಡಿಯಲು ಸಾಧ್ಯವಾಗಿರಲಿಲ್ಲ. ಆ ಬಳಿಕ ಒಂಟಿ ಸಲಗದ ಪತ್ತೆಗೆ ಹೆಣ್ಣಾನೆ ಮೂಲಕ ಆಕರ್ಷಿಸಿ ಸೆರೆಹಿಡಿಯುವ ತಂತ್ರ ಮಾಡಲಾಯಿತು.

ಶಿವಮೊಗ್ಗ (SHIVAMOGGA)ದ ಸಕ್ರೆಬೈಲ್ ನ ಆನೆ ಶಿಬಿರದಲ್ಲಿದ್ದ ಭಾನುಮತಿ ಹೆಸರಿನ ಹೆಣ್ಣಾನೆ ಕರೆದುಕೊಂಡು ಬರಲಾಯಿತು. ಸಲಗಕ್ಕೆ ಭಾನುಮತಿ ಆನೆಯ ಆಕರ್ಷಣೆ ತೋರಿ ಹಿಡಿಯಲು ಖೆಡ್ಡಾ ತೋಡಲಾಯಿತು. ಡ್ರೋಣ್ ಸೇರಿದಂತೆ ಕಳೆದ ಸೋಮವಾರ ಎಲ್ಲಿಯೂ ಪತ್ತೆಯಾಗದ ಕಾರಣ ರಣತಂತ್ರ ಬದಲಿಸಲು ನಿರ್ಧರಿಸಲಾಯಿತು. ಆನೆಗಳು ಒಂದು ರಾತ್ರಿ ಸುಮಾರು 30 ಕಿಲೋಮೀಟರ್ ವರೆಗೆ ನಡೆಯುತ್ತವೆ. ಆದ್ರೆ, ಡ್ರೋಣ್ ಸಾಮರ್ಥ್ಯ ಇರೋದು ಜಾಸ್ತಿ ಎಂದರೆ ಐದು ಕಿಲೋ ಮೀಟರ್. ತೋಟಗಳಿಗೆ ನುಗ್ಗಿದರೆ ಇಲ್ಲವೇ ಊರೊಳಗೆ ದಾಳಿ ಇಟ್ಟರೆ ಕೂಡಲೇ ಮಾಹಿತಿ ನೀಡುವಂತೆ ಜನರಿಗೆ ಮಾಹಿತಿ ನೀಡಲಾಗಿತ್ತು.

ಎರಡು ತಂಡಗಳು:

ಆನೆ ಸೆರೆಗೆ ಪ್ರತ್ಯೇಕ ಎರಡು ತಂಡಗಳನ್ನು ರಚಿಸಲಾಗಿತ್ತು. ಸೂಳೆಕೆರೆ, ಹೊಸಹಳ್ಳಿ ತಾಂಡಾ, ಕೆಂಚಗಾರನಹಳ್ಳಿ, ಹೊಸಹಳ್ಳಿ, ದಾಗಿನಕಟ್ಟೆ, ಬಸವಾಪಟ್ಟಣ, ಬೆನಕಹಳ್ಳಿ, ಕೊಮಾರನಹಳ್ಳಿ, ಮಲ್ಲಿಗೇನಹಳ್ಳಿ, ಗಾಣದಕಟ್ಟೆ, ಲಿಂಗದಹಳ್ಳಿ ಗ್ರಾಮ ಸೇರಿದಂತೆ
ಹಲವು ಗ್ರಾಮಗಳಲ್ಲಿ ಆನೆ ಕಂಡರೆ ಮಾಹಿತಿ ನೀಡುವಂತೆ ಡಂಗುರ ಸಾರಲಾಗಿತ್ತು. ಇಂದು ಜೀನಹಳ್ಳಿ – ಕೆಂಚಿಕೊಪ್ಪ ಬಳಿ ಆನೆ ಸಂಚಾರ ಮಾಡುತ್ತಿದ್ದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಯ ಗಮನಕ್ಕೆ ತಂದರು. ಕೂಡಲೇ ಆಗಮಿಸಿದ ತಂಡವು ಆನೆಗೆ ಅರವಳಿಕೆ ಮದ್ದು ನೀಡಿ ಸೆರೆ ಹಿಡಿಯಲಾಯಿತು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment