SUDDIKSHANA KANNADA NEWS/ DAVANAGERE/ DATE:15-11-2023
ಮುಂಬೈ: ಇಂದಿಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ತಂಡದ ವಿರುದ್ಧದ ವಿಶ್ವಕಪ್ ಕ್ರಿಕೆಟ್ ಸೆಮಿಫೈನಲ್ ಪಂದ್ಯದಲ್ಲಿ 50ನೇ ಶತಕ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆದರು. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಬಾರಿಸಿದ್ದ 49 ಶತಕಗಳು ಇದುವರೆಗೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ದಾಖಲೆ ದಾಖಲಾಗಿತ್ತು. ಆದ್ರೆ, ವಿಶ್ವಕಪ್ ನ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ವಿರಾಟ ರೂಪದ ಬ್ಯಾಟಿಂಗ್ ಪ್ರದರ್ಶಿಸಿದರು.
ವಿಶ್ವಕಪ್ ಕ್ರಿಕೆಟ್ ನ ಇತಿಹಾಸದ ಏಕದಿನ ಪಂದ್ಯಾವಳಿಯಲ್ಲಿ ಯಾವೊಬ್ಬ ಬ್ಯಾಟ್ಸ್ ಮನ್ 50 ಶತಕಗಳನ್ನು ದಾಖಲಿಸಿಲ್ಲ. ಈ ದಾಖಲೆ ಬರೆದ ವಿರಾಟ್ ಕೊಹ್ಲಿ ಆಟಕ್ಕೆ ಎಲ್ಲರೂ ಎದ್ದು ನಿಂತು ಗೌರವ ಸೂಚಿಸಿದರು.
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಸಹ ಎದ್ದು ನಿಂತು ವಿರಾಟ್ ಕೊಹ್ಲಿ ಪರಾಕ್ರಮ ಗೌರವಿಸಿದರು. ರೋಹಿತ್ ಶರ್ಮಾ ಔಟಾದ ಬಳಿಕ ಬಂದ ವಿರಾಟ್ ಕೊಹ್ಲಿ ಇಂದು 50 ನೇ ಶತಕ ಬಾರಿಸಲಿ ಎಂದು ಕ್ರಿಕೆಟ್ ಪ್ರೇಮಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದರು. ವಿರಾಟ್ ಕೊಹ್ಲಿ 117 ರನ್ ಗಳಿಸಿ ಔಟಾದರು.
ವಿರಾಟ್ ಕೊಹ್ಲಿ ಬ್ಯಾಟ್ ನಲ್ಲಿ 113 ಎಸೆತಗಳಲ್ಲಿ 117 ರನ್ ಬಾರಿಸಿದ ಅವರು, ಇನ್ನು ಆರು ಓವರ್ ಗಳಿರುವಂತೆ ಔಟಾದರು. ಇಡೀ ಕ್ರೀಡಾಂಗಣವೇ ವಿರಾಟ್ ಕೊಹ್ಲಿ ಔಟಾಗುತ್ತಿದ್ದಂತೆ ಎದ್ದು ನಿಂತು ಚಪ್ಪಾಳೆ ಬಾರಿಸಿ ದಾಖಲೆ ವೀರನಿಗೆ ಗೌರವ ಸಲ್ಲಿಸಿದ್ದು ವಿಶೇಷವಾಗಿತ್ತು.
ವಿಶ್ವಕಪ್ 2023 ಸೆಮಿಫೈನಲ್ ನಲ್ಲಿ ವಿರಾಟ್ ಕೊಹ್ಲಿ 50 ನೇ ಏಕದಿನ ಶತಕ ಬಾರಿಸಿದ್ದು ಸಚಿನ್ ತೆಂಡೂಲ್ಕರ್ ಗೆ ಖುಷಿ ಕೊಟ್ಟಿತು.
ವಿರಾಟ್ ಕೊಹ್ಲಿ 50 ಏಕದಿನ ಶತಕಗಳನ್ನು ಗಳಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ, ಅಪ್ರತಿಮ ಸಚಿನ್ ತೆಂಡೂಲ್ಕರ್ ಅವರ 49 ಶತಕಗಳ ದಾಖಲೆಯನ್ನು ಮುರಿದಿದ್ದಾರೆ. ವಿರಾಟ್ ಕೊಹ್ಲಿ ಸಾರ್ವಕಾಲಿಕ ಅತಿ ಹೆಚ್ಚು ಏಕದಿನ ಶತಕಗಳನ್ನು ಬಾರಿಸಿದ್ದ ಭಾರತದ ಸಚಿನ್ ತೆಂಡೂಲ್ಕರ್ ಅವರ ದೀರ್ಘಕಾಲದ ದಾಖಲೆಯನ್ನು ಮುರಿದರು. ವಿರಾಟ್ ಕೊಹ್ಲಿ ಇಂದು ನಡೆಯುತ್ತಿರುವ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್‌ನಲ್ಲಿ 50 ನೇ ಏಕದಿನ ಶತಕವನ್ನು ತಲುಪಿದರು ಮತ್ತು ಸಾರ್ವಕಾಲಿಕ ಅಗ್ರ ಶತಕ ಗಳಿಸಿದ ಆಟಗಾರರಾದರು
ವಿರಾಟ್ ಕೊಹ್ಲಿ ಅವರ 49 ನೇ ODI ಶತಕವು ಅವರ 35 ನೇ ಹುಟ್ಟುಹಬ್ಬದಂದು ಬಂದಿತು, ಅವರು ದಕ್ಷಿಣ ಆಫ್ರಿಕಾದ ಪ್ರಬಲ ಬೌಲಿಂಗ್ ಲೈನ್ ಅಪ್ ವಿರುದ್ಧ ಶತಕ ಬಾರಿಸಿದ್ದರು. ಕೊಹ್ಲಿ ಮಧ್ಯಮ ಓವರ್‌ಗಳ ಮೂಲಕ ಶ್ರೇಯಸ್ ಅಯ್ಯರ್ (77) ರಿಂದ ಉತ್ತಮ ಬೆಂಬಲವನ್ನು ಪಡೆದರು.