SUDDIKSHANA KANNADA NEWS\ DAVANAGERE\ DATE:13-11-2023
ದೀಪಾವಳಿ ಹಬ್ಬದಂದು ಏರಿಕೆ ಕಂಡಿದ್ದ
ಭಾರತೀಯ ಷೇರುಪೇಟೆ ಇಂದು ಇಳಿಕೆ ಕಂಡಿದೆ. ಆರಂಭದಿಂದಲೂ ಕುಸಿತ ಕಂಡ ಸೂಚ್ಯಂಕಗಳು ದಿನದ ವಹಿವಾಟಿನ ಮಧ್ಯೆ ತೀವ್ರತರವಾದ ಮಾರಾಟದ ಒತ್ತಡಕ್ಕೆ ಒಳಗಾಯಿತು. ಅಂತಿಮವಾಗಿ ಮುಕ್ತಾಯದ ವೇಳೆಗೆ ಸಂವೇದಿ ಸೂಚ್ಯಂಕಗಳು ಇಳಿಕೆ ದಾಖಲಿಸಿವೆ.
ದಿನದ ಅಂತ್ಯಕ್ಕೆ ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ (ಎನ್ಎಸ್ಇ) ನಿಫ್ಟಿ -82.00 (-0.42%)
ಅಂಕ ಇಳಿಕೆ ಕಂಡು 19,443.55 ರಲ್ಲಿ ಮತ್ತು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ -325.58 (-0.49%) ಅಂಕ ಇಳಿಕೆ ಕಂಡ 64,933.87 ರಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿದವು.
*ಏರಿಕೆ ಕಂಡ ಷೇರುಗಳು*
ಇಂದು ನಿಫ್ಟಿಯಲ್ಲಿ Coal India, Eicher Motors, Hindalco, M&M, BPCL ಷೇರುಗಳು ಜಿಗಿತ ಕಂಡವು.
*ಇಳಿಕೆ ಕಂಡ ಷೇರುಗಳು*
ನಿಫ್ಟಿಯಲ್ಲಿ SBI Life Insura, Bajaj Finance, Infosys, Apollo Hospital, Tech Mahindra ಷೇರುಗಳು ನಕಾರಾತ್ಮಕ ವಹಿವಾಟು ನಡೆಸಿದವು.
*ಕರೆನ್ಸಿ ವಹಿವಾಟು*
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 83.32 ಕ್ಕೆ ತನ್ನ ವಹಿವಾಟು ಕೊನೆಗೊಳಿಸಿದೆ.
*FII ಮತ್ತು DII ನಗದು ವಹಿವಾಟು ವಿವರ*
ಇಂದಿನ ಮಾರುಕಟ್ಟೆಯ ಅಂತ್ಯದಲ್ಲಿ ‘ವಿದೇಶಿ ಸಾಂಸ್ಥಿಕ ಹೂಡಿಕೆದಾರರು” (FII) : ರೂ.-1,244.44ಕೋಟಿ ನಿವ್ವಳ ಮಾರಾಟ ಮಾಡಿದರೆ , ‘ದೇಶೀಯ ಸಾಂಸ್ಥಿಕ ಹೂಡಿಕೆದಾರರು’ (DII) ರೂ.830.40 ಕೋಟಿ ನಿವ್ವಳ ಖರೀದಿ ಮಾಡಿದ್ದಾರೆ.