ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಒಗ್ಗಟ್ಟಿನ ಮಂತ್ರ ವೇಣುಗೋಪಾಲ್, ಸುರ್ಜೆವಾಲಾ ಫ್ಲೈಟ್ ಹತ್ತುವ ಮುನ್ನವೇ ಒಡೆದು ಹೋಗಿರುತ್ತೆ: ಬಿಜೆಪಿ ಲೇವಡಿ

On: November 2, 2023 4:57 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:02-11-2023

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರದ ಐದು ತಿಂಗಳ ಆಡಳಿತದಲ್ಲಿ ಮಂತ್ರಕ್ಕಿಂತ ಉಗುಳೇ ಜಾಸ್ತಿ. ಕಾಂಗ್ರೆಸ್‌ ಶಾಸಕರು ಸರ್ಕಾರವನ್ನು ಸಮರ್ಥಿಸಿಕೊಂಡದ್ದಕ್ಕಿಂತ, ಅಸಮಾಧಾನ ವ್ಯಕ್ತಪಡಿಸಿದ್ದೇ ಹೆಚ್ಚು.  ಸಚಿವರಾಗಿರುವವರು ರಾಜ್ಯದ ಅಭಿವೃದ್ಧಿಗಿಂತ ತಮ್ಮ ಕುರ್ಚಿ ಎಷ್ಟು ದಿನ ಉಳಿಯಬಹುದು ಎಂದು ಯೋಚಿಸಿ ಲೂಟಿ ಹೊಡೆದಿದ್ದೇ ಹೆಚ್ಚು ಎಂದು ಬಿಜೆಪಿ ಕಿಡಿಕಾರಿದೆ.

ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ತಮಗೆ ವಹಿಸಿದ ಎರಡು ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಕ್ಕಿಂತ ಸಿಎಂ ‌ಸಿದ್ದರಾಮಯ್ಯರವರ ವಿರುದ್ದ ಯಾವ ಎಂ.ಎಲ್.ಎ. ಹಾಗೂ ಎಂ.ಎಲ್.ಸಿ.ಯವರನ್ನು ಎತ್ತಿ ಕಟ್ಟುವುದು ಹೇಗೆ ಎಂಬ ಬಗ್ಗೆ ಯೋಚಿಸಿದ್ದೇ ಜಾಸ್ತಿ. ಇನ್ನು ಸಿಎಂ ಸಿದ್ದರಾಮಯ್ಯ ಅವರು, ತಮಗೆ ಮಗ್ಗುಲ ಮುಳ್ಳಾಗಿರುವ ಡಿಸಿಎಂ ಡಿ. ಕೆ. ಶಿವಕುಮಾರ್‌ ಅವರನ್ನು ರಾಜ್ಯದಲ್ಲಿ ಮತ್ತು ಹೈಕಮಾಂಡ್‌ ವಲಯದಲ್ಲಿ ಹೇಗೆ ದುರ್ಬಲಗೊಳಿಸುವುದು ಎಂಬುದರಲ್ಲೇ ತಲ್ಲೀನ ಎಂದು ರಾಜ್ಯ ಬಿಜೆಪಿ ಘಟಕ ಟ್ವೀಟ್ ಮೂಲಕ ಆರೋಪಿಸಿದೆ.

ಇಷ್ಟೆಲ್ಲಾ ಅಪಭ್ರಂಶಗಳನ್ನು ಇಟ್ಟುಕೊಂಡು ಸಹ ಕಾಂಗ್ರೆಸ್‌ ತಾನು ನುಡಿದಂತೆ ನಡೆಯುತ್ತಿದ್ದೇನೆ ಎಂದು ಮಣಗಟ್ಟಲೆ ಜಾಹೀರಾತು ನೀಡುತ್ತಿರುವುದು ನಾಚಿಕೆಯ ಪರಮಾವಧಿ. ಇದೆಲ್ಲದರ ನಡುವೆ ಅತ್ಯಂತ ವಿಚಿತ್ರಕಾರಿ ಸಂಗತಿ ಎಂದರೆ ತಿಂಗಳಿಗೊಮ್ಮೆ ಕಲೆಕ್ಷನ್‌ಗೆ ಬರುವ ಕಲೆಕ್ಷನ್‌ ಏಜೆಂಟರುಗಳಾದ ಸುರ್ಜೇವಾಲಾ ಮತ್ತು ಕೆ. ಸಿ. ವೇಣುಗೋಪಾಲ್ ಅವರು, ಪ್ರತಿ ಬಾರಿ ಬಂದಾಗ ಜಪಿಸುವ ಒಗ್ಗಟ್ಟಿನ ಮಂತ್ರ ಅವರು ಬೆಂಗಳೂರಿನಿಂದ ಫ್ಲೈಟ್‌ ಹತ್ತುವ ಮುನ್ನವೇ ಒಡೆದು ಹೋಗಿರುತ್ತದೆ ಎಂದು ಲೇವಡಿ ಮಾಡಿದೆ.

ದೆಹಲಿಯ ಸುರ್ಜೆವಾಲಾ ಮತ್ತು ವೇಣುಗೋಪಾಲ್‌ ಅವರು ತಿಂಗಳಿಗೊಮ್ಮೆ ಶಾಲೆಗಳಲ್ಲಿ ನಡೆಯುವ ಪೇರೆಂಟ್ಸ್‌ ಮೀಟಿಂಗ್‌ ರೀತಿ ರಾಜ್ಯಕ್ಕೆ ಬಂದು ಹೋಗುವುದು ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಮಾಡಿರುವ ಕಲೆಕ್ಷನ್ ಮೊತ್ತವನ್ನು ಹೈ ಕಮಾಂಡ್‌ಗೆ ತಲುಪಿಸಲು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಕುರ್ಚಿ ಕಿತ್ತಾಟ ಅವರಿಗೂ ಕಸಿವಿಸಿಯನ್ನುಂಟು ಮಾಡಿದ್ದು ಮಾತ್ರ ಸುಳ್ಳಲ್ಲ ಎಂದು ಹೇಳಿದೆ.

ಅಷ್ಟಕ್ಕೂ ದೆಹಲಿಯ ಸುರ್ಜೆವಾಲಾ ಮತ್ತು ವೇಣುಗೋಪಾಲ್‌ ಅವರಿಗೆ ಕರ್ನಾಟಕದ ಪ್ರಗತಿಯ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಆದರೆ ಅವರು ಕಾಂಗ್ರೆಸ್‌ ಸರ್ಕಾರದ ಒಳಜಗಳಗಳಿಗೆ ತೇಪೆ ಹಚ್ಚುತ್ತಿರುವುದು ತಮಗೆ ಮಂತ್ಲಿ ಬರುತ್ತಿರುವ ಕಲೆಕ್ಷನ್‌ಗೆ ಯಾವುದೇ ಅಡ್ಡಿಯಾಗಬಾರದೆಂಬ ದುರಾಲೋಚನೆಯಷ್ಟೇ ಎಂದು ವ್ಯಂಗ್ಯವಾಡಿದೆ.

ಯಾರಾದರೂ ಮಂತ್ರಿಗಳಾಗಲಿ, ಯಾರಾದರೂ ಉಪ ಮುಖ್ಯಮಂತ್ರಿಗಳಾಗಲಿ, ತಮ್ಮ ಒಳಹರಿವು ಯಾವ ಕಾರಣಕ್ಕೂ ನಿಲ್ಲಬಾರದೆಂಬ ದುರಾಸೆ ಕಲೆಕ್ಷನ್‌ ಏಜೆಂಟರದ್ದು.ಸರ್ಕಾರದ ಪ್ರಗತಿಯ ಬಗೆಯಾಗಲಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಗೆಯಾಗಲಿ, ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಬಗೆಯಾಗಲಿ ಇದುವರೆಗೂ ಕಲೆಕ್ಷನ್‌ ಏಜೆಂಟರು ಬಾಯ್ಬಿಟ್ಟಿಲ್ಲ. ಅವರದ್ದು ಕೇವಲ ಕೊಡಿ, ಇನ್ನಷ್ಟು ಕೊಡಿ, ಮತ್ತಷ್ಟು ಕೊಡಿ, ಬಹಳಷ್ಟು ಕೊಡಿ ಎಂಬ ಮನಸ್ಥಿತಿ ಎಂದು ಆರೋಪಿಸಿದೆ.

ಇದೆಲ್ಲದರ ನಡುವೆ ಬಸವಳಿಯುತ್ತಿರುವುದು ಮಾತ್ರ ಕರ್ನಾಟಕ ಹಾಗೂ ಕನ್ನಡಿಗರು. ರಾಜ್ಯದೆಲ್ಲೆಡೆ ಬರ ಆವರಿಸಿದೆ, ಅರಾಜಕತೆ ತಾಂಡವವಾಡುತ್ತಿದೆ. ಶಾಂತಿಯ ಬೀಡಾಗಿದ್ದ ಕರ್ನಾಟಕವನ್ನು ಕಾಂಗ್ರೆಸ್‌ ಐದು ತಿಂಗಳಲ್ಲಿ ಜಿಹಾದಿಗಳ ಸ್ವರ್ಗವನ್ನಾಗಿಸಿದೆ. ಕನ್ನಡಿಗರ ಶ್ರಮದ ತೆರಿಗೆ ಹಣ ಭ್ರಷ್ಟಾಚಾರದ ರೂಪದಲ್ಲಿ ಪಂಚ ರಾಜ್ಯಗಳ ಚುನಾವಣೆಯ ಕಾಂಗ್ರೆಸ್‌ ಫಂಡ್‌ ಆಗಿ ಬದಲಾಗುತ್ತಿದೆ ಎಂದು ಆರೋಪಿಸಿದೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment