SUDDIKSHANA KANNADA NEWS/ DAVANAGERE/ DATE:07-04-2023
ದಾವಣಗೆರೆ: ದಾವಣಗೆರೆ ಉತ್ತರ (DAVANAGERE NORTH)ಮತ್ತು ದಾವಣಗೆರೆ ದಕ್ಷಿಣ (DAVANAGERE SOUTH) ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸುವಂತೆ ಮಾಡಲು ರಣತಂತ್ರ ರೂಪಿಸಿರುವ ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ರ ಪತ್ನಿಡಾ. ಪ್ರಭಾ ಮಲ್ಲಿಕಾರ್ಜುನ್ (PRABHA MALLIKARJUN)ಅವರು ಕಾಂಗ್ರೆಸ್ (CONGRESS) ನತ್ತ ಮಹಿಳೆಯರ ಚಿತ್ತ ಹರಿಸುವಂತೆ ಮಾಡುವಂತೆ ಕಾಂಗ್ರೆಸ್ (CONGRESS) ಮಹಿಳಾ ನಾಯಕಿಯರಿಗೆ ಸಲಹೆ ನೀಡಿದ್ದಾರೆ.

ಪ್ರಭಾ ಮಲ್ಲಿಕಾರ್ಜುನ (PRABHA MALLIKARJUN)ರವರ ದಾವಣಗೆರೆ ಉತ್ತರ (DAVANAGERE NORTH)ಹಾಗೂ ದಾವಣಗೆರೆ ದಕ್ಷಿಣ (DAVANAGERE SOUTH) ವಿಧಾನಸಭಾ ಕ್ಷೇತ್ರದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಿದರು, ಚುನಾವಣೆಯಲ್ಲಿ ಮಹಿಳೆರ ಪಾತ್ರ ಬಹಳ ಮುಖ್ಯ. ಗ್ಯಾಸ್ ಸಿಲಿಂಡರ್, ಅಗತ್ಯ ವಸ್ತುಗಳ ಬೆಲೆ ಏರಿಕೆ, ಮಹಿಳೆಯರು ಬೆಲೆ ಏರಿಕೆಯಿಂದ ಅನುಭವಿಸುತ್ತಿರುವ ಕುರಿತಂತೆ ಸವಿಸ್ತರವಾಗಿ ತಿಳಿಸಿ. ಎಸ್. ಎಸ್. ಮಲ್ಲಿಕಾರ್ಜುನ್ ಹಾಗೂ ಶಾಮನೂರು ಶಿವಶಂಕರಪ್ಪರು ಕ್ಷೇತ್ರಗಳಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಕಾಂಗ್ರೆಸ್ ಪಕ್ಷ ನೀಡಿರುವ ಆಡಳಿತದ ಕುರಿತಂತೆ ತಿಳಿ ಹೇಳಿ. ಈ ಮೂಲಕ ಕಾಂಗ್ರೆಸ್ ಗೆ ಮತ ಹಾಕುವಂತೆ ಮನವೊಲಿಸುವ ಕಾರ್ಯವನ್ನು ಮಾಡಿ ಎಂದು ಪ್ರಭಾ ಮಲ್ಲಿಕಾರ್ಜುನ್ ಅವರು ಹೇಳಿದರು.

ತಮ್ಮ ತಮ್ಮ ಬೂತ್ ಗಳಲ್ಲಿ ಹೊಸ ಮಹಿಳಾ ಮತದಾರರನ್ನು ಭೇಟಿಯಾಗಿ ಅವರಿಗೆ ಎಸ್.ಎಸ್. ಹಾಗೂ ಎಸ್ ಎಸ್ ಎಂ ರವರ ಅಭಿವೃದ್ಧಿ ಕಾರ್ಯಗಳನ್ನು ತಿಳಿಸುವ ಮೂಲಕ ಅವರಿಗೆ ಮತದಾನ ಮಾಡಲು ಪ್ರೇರೇಪಿಸಬೇಕು.. ಮತದಾನದ ದಿನ ತಾವುಗಳೇ ತಮ್ಮ ಬೂತ್ ಗಳ ಮಹಿಳಾ ಮತದಾರರನ್ನು ಕರೆದುಕೊಂಡು ಬಂದು ಮತದಾನ ಮಾಡಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಬಾಯಿ ಮಾಲತೇಶ್, ರಾಜೇಶ್ವರಿ, ಶುಭಮಂಗಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.