SUDDIKSHANA KANNADA NEWS/ DAVANAGERE/ DATE:25-10-2023
ಬೆಂಗಳೂರು (Bangalore): ಯಾರು ನನ್ನನ್ನು ವೇಗವಾಗಿ ತುಂಬಿಸುತ್ತಾರೋ, ಅವರಿಗೆ ನನ್ನ ಈ ಕುರ್ಚಿ ಮೀಸಲು” ಎಂದು ಬಿಜೆಪಿ ವ್ಯಂಗ್ಯವಾಡಿದೆ.
Read Also This Story:

2030ಕ್ಕೆ ಜಪಾನ್ ಹಿಂದಿಕ್ಕಿ ಏಷ್ಯಾದಲ್ಲಿ 2 ನೇ ಅತಿದೊಡ್ಡ ಆರ್ಥಿಕತೆ ಹೊಂದಿದ ರಾಷ್ಟ್ರವಾಗಲಿದೆ ಭಾರತ (India)…! ಅದು ಹೇಗೆ ಗೊತ್ತಾ…?
ಈ ಸಂಬಂಧ ಫೋಟೋವೊಂದನ್ನು ಶೇರ್ ಮಾಡಿರುವ ಬಿಜೆಪಿ ಘಟಕವು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಜೊತೆಗೆ ಕುಳಿತಿರುವ ಫೋಟೋದಲ್ಲಿ ಎಟಿಎಂ ಸರ್ಕಾರದ ಕಲೆಕ್ಷನ್ ಬಾಕ್ಸ್, ಲೂಟಿ ಸರ್ಕಾರ ಎಂದು ಬರೆದು ಲೇವಡಿ ಮಾಡಿದೆ.
ಟ್ವೀಟಾಸ್ತ್ರ ಮುಂದುವರಿಸಿರುವ ಬಿಜೆಪಿಯು ರಾಜ್ಯದಲ್ಲಿ #ATMSarkara ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯಲು ಸಾಧ್ಯವಾದ ಅಂಶಗಳು ಎಂದು ಪಟ್ಟಿ ಮಾಡಿದೆ. ನಕಲಿ ಮತದಾರರ ಪಟ್ಟಿ (ಭೈರತಿ ಸುರೇಶ್ ಆಪ್ತ ಸೆರೆ), ಸುಳ್ಳು ಗ್ಯಾರಂಟಿಗಳ ಪುಕಾರು (ಜನತೆ ಕೈ ಸೇರಿಲ್ಲ ಹಣ), ಕುಕ್ಕರ್ ಇಸ್ತ್ರಿ ಪೆಟ್ಟಿಗೆ, ಹಣ ಹಂಚಿಕೆ (ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ), ಕಿವಿ ಮೇಲೆ ಕಲರ್ ಕಲರ್ ಹೂ (ವಿದ್ಯುತ್, ಕಾವೇರಿ, ರೈತರು), ನಿರಂತರ ಸುಳ್ಳು ಸುದ್ದಿಗಳ ಹರಡುವಿಕೆ
(ಜಾತಿ, ಭ್ರಷ್ಟಾಚಾರ, ತುಷ್ಟೀಕರಣ) ನಾವು ಕಾಂಗ್ರೆಸ್‌ಗೆ ಮತ ಹಾಕಿಲ್ಲ, ಆದರೂ ಹೇಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂತು ಎನ್ನುವ ಜನರ ಪ್ರಶ್ನೆಗೆ ಸಿದ್ದರಾಮ್ಯಯ್ಯ ಅವರ ಆಪ್ತ ಭೈರತಿ ಸುರೇಶ್ ಅವರ ನಕಲಿ ಮತದಾರರ ಪಟ್ಟಿಯೇ ಉತ್ತರ ಎಂದು ಟೀಕಿಸಿದೆ.
ಕಾಂಗ್ರೆಸ್‌ನ ಐದು ತಿಂಗಳ ಆಡಳಿತದಲ್ಲಿ ಬ್ರ್ಯಾಂಡ್ ಬೆಂಗಳೂರಿನ ಅಸಲಿ ಚಿತ್ರಣ ಬೆಳಕಿಗೆ ಬಂದಿದೆ!! ಒಂದೆಡೆ ರಸ್ತೆಯೊಳಗೆ ಗುಂಡಿಯೋ, ಗುಂಡಿಯೊಳಗಡೆ ರಸ್ತೆಯೋ ಎಂಬ ಸ್ಥಿತಿ ಬೆಂಗಳೂರಿಗರದ್ದು!! ಗ್ರೀನ್ ಸಿಟಿ, ಗಾರ್ಡನ್ ಸಿಟಿಯಾಗಿದ್ದ ಬೆಂಗಳೂರು ಗಾರ್ಬೆಜ್ ಸಿಟಿಯಾಗುತ್ತಿದೆ. ಕೇವಲ ರಿಯಲ್ ಎಸ್ಟೇಟ್ ಮಾಫಿಯಾಗಳಿಗೆ, ಗೂಂಡಾಗಳಿಗೆ, ಭಯೋತ್ಪಾದಕರ ಅಡಗುತಾಣಗಳಿಗೆ ಮಾತ್ರ ಬೆಂಗಳೂರು ಸ್ವರ್ಗವಾಗಿದೆ ಹೊರತು ಜನಸಾಮಾನ್ಯರಿಗಲ್ಲ!! ಎಂದು ಆರೋಪಿಸಿದೆ.
ಎದುರು ಪಕ್ಷದ ಅಭ್ಯರ್ಥಿಯನ್ನು ಸೋಲಿಸಿ ತಾನು ಗೆಲ್ಲುವುದು ರಾಜಕೀಯದ ಅವಿಭಾಜ್ಯ ಅಂಗ. ಆದರೆ ತಮ್ಮದೇ ಪಕ್ಷದ ದಲಿತ ಮತ್ತು ಹಿಂದುಳಿದ ನಾಯಕರನ್ನು ಸೋಲಿಸುವುದು ಸಿದ್ದರಾಮಯ್ಯರವರ ವಿಶೇಷ ರಾಜಕೀಯ. ಅನುಮಾನಗಳಿದ್ದರೆ
ಈ ವಿಡಿಯೋ ನೋಡಿ ಪರಿಹರಿಸಿಕೊಳ್ಳಿ ಎಂದು ಲೇವಡಿ ಮಾಡಿದೆ.