ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Davanagere: ಸಂಸದ ಸಿದ್ದೇಶ್ವರ ವಿರುದ್ಧ ಸಿಡಿದೆದ್ದ ರೇಣುಕಾಚಾರ್ಯ: ಆ ಮಾತು ಹೇಳಬಾರದಿತ್ತು ಎಂದಿದ್ಯಾಕೆ ಎಂಪಿಆರ್….?

On: October 24, 2023 2:31 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:24-10-2023

ದಾವಣಗೆರೆ (Davanagere): ಯಾರೇ ಗೆದ್ದಿದ್ದರೂ ಕಾರ್ಯಕರ್ತರು, ಮುಖಂಡರ ಶ್ರಮದಿಂದ ಗೆದ್ದಿದ್ದೇವೆ. ಕಾರ್ಯಕರ್ತರು ದುಡಿದಿಲ್ವಾ. ಇರುವವರು ಇರಬಹುದು, ಹೋಗುವವರು ಹೋಗಬಹುದು ಎಂದು ಹೇಳುವ ಮೂಲಕ ಇವರೇ ಪಕ್ಷ ಬಿಡಲಿ ಎನ್ನುತ್ತಿದ್ದಾರೆ. ವಯಸ್ಸಿನಲ್ಲಿ ಹಿರಿಯರು. ಗೌರವ ನೀಡುತ್ತೇನೆ. ರಾಜಕಾರಣಕ್ಕೆ ಅವರಿಗಿಂತ ಮುಂಚೆ ಬಂದಿದ್ದೇನೆ. ಬಿಜೆಪಿಗೆ ನಾನು ಸೀನಿಯರ್ ಎಂದು ಹೇಳುವ ಮೂಲಕ ಸಂಸದ ಡಾ. ಜಿ. ಎಂ. ಸಿದ್ದೇಶ್ವರ್ ವಿರುದ್ಧ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಸಿಡಿದೆದ್ದಿದ್ದಾರೆ.

Read Also This Story:

ದಸರಾದಲ್ಲಿ ಚಿನ್ನ (Gold) ಖರೀದಿಗೆ ಗ್ರಾಹಕರು ಒಲವು ತೋರುವುದೇಕೆ..? ಹೂಡಿಕೆ ಮಾಡಲು ಇರುವ ಉತ್ತಮ ಮಾರ್ಗ ಯಾವುದು? ಡಿಜಿಟಲ್ ಗೋಲ್ಡ್ ಎಂದರೇನು…?

ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಹಾದಿ ಬೀದಿಯಲ್ಲಿ ಹೋಗುವವರು ಮಾತನಾಡಿದರೆ ನಾನು ಉತ್ತರ ಕೊಡಬೇಕಾ? ಮುಖಂಡರು, ಕಾರ್ಯಕರ್ತರು ಇಲ್ಲದೇ ಯಾರೂ ಏನು ಮಾಡಲು ಆಗಲ್ಲ. ಏಳು
ಚುನಾವಣೆಗಳನ್ನು ಮಾಡಿದ್ದೇನೆ. ಬಿಜೆಪಿಗೆ ನಿನ್ನೆ ಮೊನ್ನೆ ಬಂದನಲ್ಲ. 90ರ ದಶಕದಲ್ಲಿ ಅಯೋಧ್ಯೆಯ ರಾಮಮಂದಿರ ಕಟ್ಟುವ ಹೋರಾಟದಲ್ಲಿ ಸಹಸ್ರಾರು ಯುವಕರ ತಂಡದ ಜೊತೆ ನಾನು ಪಾಲ್ಗೊಂಡಿದ್ದೆ. ಜೈಲಿಗೆ ಹೋಗಿದ್ದೇನೆ. ನೂರಾರು ಬಾರಿ ಹೋರಾಟ ಮಾಡಿದ್ದೇನೆ. ಸಿದ್ದೇಶ್ವರ ಅವರ ಚುನಾವಣೆ ಹಾಗೂ ಅವರ ತಂದೆ ಮಲ್ಲಿಕಾರ್ಜುನಪ್ಪರ  ಚುನಾವಣೆಯಲ್ಲಿಯೂ ಕೆಲಸ ಮಾಡಿದ್ದೇನೆ ಎಂದು ಹೇಳುವ ಮೂಲಕ ಟಾಂಗ್ ನೀಡಿದರು.

ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರ ನೇಮಕ ಸಂಬಂಧ ವರಿಷ್ಠರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಗೊತ್ತಿಲ್ಲ. ಶೋಭಾ ಕರಂದ್ಲಾಜೆ ಅವರು ಅಧ್ಯಕ್ಷರಾಗುತ್ತಾರೆ ಎಂಬ ಊಹಾಪೋಹ ಕೇಳಿ ಬರುತ್ತಿದೆ. ಹೀಗಾಗಿ ಕೇಂದ್ರ ನಾಯಕರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ನೋಡೋಣ. ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿಸುವುದು ಯಾಕೆ ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಹೇಳಿದರು.

ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಜ್ಯಧ್ಯಕ್ಷರ ಘೋಷಣೆ ಮಾಡಿದ ಮೇಲೆ ಪ್ರತಿಕ್ರಿಯಿಸುತ್ತೇನೆ. ವರಿಷ್ಠರ ತೀರ್ಮಾನ ಕಾದು ನೋಡುತ್ತೇನೆ. ನಾನು ಯಾರ ಪರ – ವಿರೋಧ ಇಲ್ಲ. ವಿಶ್ವ ಮೆಚ್ಚಿದ ನಾಯಕ ನರೇಂದ್ರ ಮೋದಿ ಅವರು
ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ಆಸೆ ನನ್ನದು ಎಂದರು.

ರಾಜ್ಯದಲ್ಲಿ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಹಾಗೂ ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಚುನಾವಣೆಯಾಗಿದೆ. ಕರ್ನಾಟಕದಲ್ಲಿ ಹೆಮ್ಮರವಾಗಿ ಬಿಜೆಪಿ ಬೆಳೆಯಲು ಯಡಿಯೂರಪ್ಪರು ಕಾರಣ. ಮತಗಳನ್ನಾಗಿ ಪರಿವರ್ತಿಸಲು ಯಡಿಯೂರಪ್ಪರಂಥ ಪ್ರಭಾವಿ ನಾಯಕ, ಜಾತ್ಯಾತೀತ ನಾಯಕರಂಥವರು ಬೇಕು ಎಂದು ಹೇಳಿದರು.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನಾದೇಶ ಮುಖ್ಯ. ನಾವೇನೂ ಸರ್ಕಾರ ಬೀಳಿಸುತ್ತೇವೆ ಎಂದೇಳಿಲ್ಲ. ಒಳ್ಳೆಯ ಕೆಲಸ ಮಾಡಲಿ. ಇಲ್ಲದಿದ್ದರೆ ಹೋರಾಟ ಮಾಡುತ್ತೇನೆ ಎಂದು ರೇಣುಕಾಚಾರ್ಯ ಹೇಳಿದರು.

ಪಕ್ಷ ಸಂಘಟನೆ ಮಾಡಿದರೂ ಟಿಕೆಟ್ ಕೊಡಲಿಲ್ಲ ಎಂದು ಅನೇಕರು ನನ್ನ ಬಳಿ ಹೇಳಿದ್ದಾರೆ. ಯಡಿಯೂರಪ್ಪರನ್ನು ನಿರ್ಲಕ್ಷ್ಯ ವಹಿಸಿದರು. ಹಾಗಾಗಿ, ಬಿಜೆಪಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲಬೇಕಾಯಿತು. ವೀರಶೈವ ಲಿಂಗಾಯತರಷ್ಟೇ ಅಲ್ಲ, ಎಲ್ಲಾ ಸಮುದಾಯಕ್ಕೆ ನ್ಯಾಯ ಕೊಡುವ ಕೆಲಸ ಮಾಡಿದ್ದಾರೆ. 2 ಎ ಮೀಸಲಾತಿ ನೀಡಲು ಯಡಿಯೂರಪ್ಪ ವಿರೋಧ ವ್ಯಕ್ತಪಡಿಸಿರಲಿಲ್ಲ ಎಂದು ತಿಳಿಸಿದರು.

ಯಡಿ.ಯೂರಪ್ಪರಂಥ ನಾಯಕರಿಗೆ ಪ್ರವಾಸ ಮಾಡಲು ಬಿಡುತ್ತಿಲ್ಲ. ಇದು ತಪ್ಪಲ್ವಾ. ಯಡಿಯೂರಪ್ಪ ಬೇಕು ಎಂದು ಜನರು ಹೇಳುತ್ತಿದ್ದಾರೆ. ಯಾವ ಸಂದರ್ಭದಲ್ಲಿಯೂ ಸುಮ್ಮನಿಲ್ಲ. ನವದೆಹಲಿಗೆ ಹೋಗಿ ಯಡಿಯೂರಪ್ಪ ಅವರನ್ನು
ಬದಲಾವಣೆ ಮಾಡುವುದು ಬೇಡ ಎಂದು ಹೈಕಮಾಂಡ್ ಗೆ ಹೇಳಿದ್ದೆವು. ಆದರೂ ಕೆಳಗಿಳಿಸಿದರು. ಇದೇ ಸೋಲಿಗೆ ಕಾರಣವಾಯಿತು ಎಂದು ವಿಶ್ಲೇಷಿಸಿದರು.

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment