ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Shamanuru Shivashankarappa: ನವಮಿ ಕಾರಿವಾಲ್ ಕಾರುಬಾರು ಜೋರು: ಮಹಿಳೆಯರ ಜೊತೆ ಕೋಲಾಟಕ್ಕೆ ರಂಗು ತಂದ ಶಾಮನೂರು ಶಿವಶಂಕರಪ್ಪ

On: October 21, 2023 7:15 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:21-10-2023

ದಾವಣಗೆರೆ: ಅದು ಬಣ್ಣ ಬಣ್ಣದ ರಂಗು. ಮಹಿಳೆಯರು ಜಬರ್ದಸ್ತ್ ಕೋಲಾಟದ ಸೊಬಗು. ನವರಾತ್ರಿ ಹಿನ್ನೆಲೆಯಲ್ಲಿ ರಂಗೇರಿದ್ದ ರೇಣುಕಾ ಮಂದಿರ. ಮಹಿಳೆಯರ ನೃತ್ಯ ಕಣ್ತುಂಬಿಕೊಂಡ ಜನರು. ಕೋಲಾಟ ಆಡಿ ಗಮನ ಸೆಳೆದ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ (Shamanuru Shivashankarappa) ಅವರು.

READ ALSO THIS STORY:

Channagiri: ಕಾಂಗ್ರೆಸ್ ಶಾಸಕನ ವಿರುದ್ಧ ಸ್ವಪಕ್ಷದ ಮುಖಂಡನ ರೋಷಾವೇಶ, ಕೆಲ್ಸ ಮಾಡದಿದ್ದರೆ ರಾಜೀನಾಮೆ ಕೊಡು, 5 ಸಾವಿರ ಮತ ಪಡೆ ನೋಡೋಣ: ಶಿವಗಂಗಾ ಬಸವರಾಜ್ ಗೆ ಹೊದಿಗೆರೆ ರಮೇಶ್ ಸವಾಲು

ಇದು ದಾವಣಗೆರೆ ನಗರದ ರೇಣುಕಾ ಮಂದಿರದಲ್ಲಿ ನಡೆದ ನವಮಿ ಕಾರಿವಾಲ್ 2. 0 ಕಾರ್ಯಕ್ರಮದಲ್ಲಿ ಕಂಡು ಬಂದ ಸೀನ್.

ದಾವಣಗೆರೆಯ ಹ್ಯಾಪಿ ಇವೆಂಟ್ ಮತ್ತು ಜನನಿ ಟ್ರಸ್ಟ್ ವತಿಯಿಂದ ರವಿ ಶಾಮನೂರ್ ಫಿಲಂಸ್ ಹಾಗೂ ಗ್ರೀನ್ ಪಾರ್ಕ್ ಇವರ ಸಹಾಯದೊಂದಿಗೆ ದಾವಣಗೆರೆ ನಗರದ ರೇಣುಕಾ ಮಂದಿರದಲ್ಲಿ ನವಮಿ ಕಾರಿವಾಲ್ 2.0 ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಆಗಮಿಸಿದ ಶಾಮನೂರು ಶಿವಶಂಕರಪ್ಪರನ್ನು ಕಾರ್ಯಕ್ರಮದ ಸಂಘಟಕರು ಆತ್ಮೀಯವಾಗಿ ಬರಮಾಡಿಕೊಂಡರು.

ಈ ವೇಳೆ ಮಹಿಳೆಯರು, ಯುವತಿಯರ ಜೊತೆಗೆ ಕೋಲಾಟಕ್ಕೆ ಸಾಥ್ ನೀಡಿದ ಶಾಮನೂರು ಶಿವಶಂಕರಪ್ಪರು ಕೆಲ ಹೊತ್ತು ಸಂಭ್ರಮಿಸಿದರು. 93 ವರ್ಷದ ಶಾಮನೂರು ಶಿವಶಂಕರಪ್ಪರ ಉತ್ಸಾಹ ಮಹಿಳೆಯರು, ಯುವತಿಯರು ಸೇರಿದಂತೆ ಕಾರ್ಯಕ್ರಮಕ್ಕೆ ಬಂದಿದ್ದವರ ಗಮನ ಸೆಳೆಯಿತು.

ಈ ಸಂದರ್ಭದಲ್ಲಿ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಇಲಾಖೆ ಸಚಿವರೂ ಆದ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನರ ಪತ್ನಿ ಪ್ರಭಾ ಮಲ್ಲಿಕಾರ್ಜುನ್, ವನಿತಾ ಸಮಾಜದ ಲತಿಕಾ ದಿನೇಶ್ ಕೆ. ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಉದ್ಯಮಿಗಳಾದ ಅಥಣಿ ವೀರಣ್ಣ, ಅಣಬೇರು ರಾಜಣ್ಣ ಹಾಗೂ ಆಯೋಜಕರು ಪಾಲ್ಗೊಂಡಿದ್ದರು.

 

 


ಜಾಹೀರಾತು: 

ವಧು ವರ ಮಾಹಿತಿ ಕೇಂದ್ರ

ನಮ್ಮಲ್ಲಿ ಎಲ್ಲಾ ಜಾತಿಯವರು ಹಾಗೂ ಎಲ್ಲಾ ವರ್ಗವದರು ಇದ್ದಾರೆ. ಮೊದಲ ಹಾಗೂ ಎರಡನೇ ಮದುವೆಗೆ ಹಾಗೂ ನಮ್ಮಲ್ಲಿ 2 ಲಕ್ಷ ಪ್ರೊಫೈಲ್ ಇದೆ. ನಿಮ್ಮಲ್ಲಿ ಎಂಥ ಸಮಸ್ಯೆ ಇದ್ದರೂ ಕೇವಲ ಮೂರು ತಿಂಗಳಲ್ಲಿ ಮದುವೆ ಹೊಂದಿಸಿ ಕೊಡುತ್ತೇವೆ ಹಾಗೂ ಅಂತರಜಾತಿ ಮದುವೆ ಹೆಚ್ಚಾಗಿ ಮಾಡಿಸುತ್ತೇವೆ. ಒಮ್ಮೆ ಭೇಟಿ ಕೊಡಿ ಅಥವಾ ಕರೆ ಮಾಡಿ ಮೊಬೈಲ್ ನಂಬರ್: 99455 00051, ವಾಟ್ಸಪ್ ನಂಬರ್ 98443 50220.


 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment