ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಬ್ರಜ್ ಯಾತ್ರೆ ಎಂದರೇನು? ಯಾತ್ರೆ ವೇಳೆ ಸಿರಿಗೆರೆ ತರಳಬಾಳು ಶ್ರೀಗಳ ಆಶೀರ್ವಚನಕ್ಕೆ ಭಾವಪರವಶರಾದ ಯಾತ್ರಾರ್ಥಿಗಳು

On: November 6, 2025 12:49 PM
Follow Us:
ಯಾತ್ರೆ
---Advertisement---

SUDDIKSHANA KANNADA NEWS/DAVANAGERE/DATE:06_11_2025

ಉತ್ತರ ಪ್ರದೇಶ: ಉತ್ತರ ಪ್ರದೇಶದ ಮಥುರಾ ವೃಂದಾವನದ ಶ್ರೀ ಚೈತನ್ಯ ಪ್ರೇಮ ಸಂಸ್ಥಾನದ ಪೂಜ್ಯ ಶ್ರೀವತ್ಸ ಗೋಸ್ವಾಮಿರವರ ನೇತೃತ್ವದಲ್ಲಿ ಆಯೋಜಿಸಿರುವ ಬ್ರಜ್ ಯಾತ್ರೆ -2025 ರ ಕಾರ್ಯಕ್ರಮದಲ್ಲಿ ಯಾತ್ರಾರ್ಥಿಗಳನ್ನು ಉದ್ದೇಶಿಸಿ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಿದರು.

READ ALSO THIS STORY: ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳ 396 ಕೈಗಾರಿಕೆಗಳ ರಾಸಾಯನಿಕಯುಕ್ತ ನೀರು ತುಂಗಾ ನದಿಗೆ: ಜಲಮಾಲಿನ್ಯ ಹೆಚ್ಚಳ!

ಭಕ್ತಿ ಎಂದರೇನು? ಸಂಪತ್ತು ಅಥವಾ ಅಂತಸ್ತು ಇಲ್ಲದಿದ್ದರೂ ಶುದ್ಧಾಂತಃಕರಣದಿಂದ ದೇವರನ್ನು ಸ್ಮರಿಸುವುದೇ ನಿಜವಾದ ಭಕ್ತಿ ಎಂದು ಬಸವಣ್ಣನವರ ವಚನಗಳ ಮೂಲಕ ಶ್ರೀ ಜಗದ್ಗುರುಗಳವರು ವಿವರಿಸಿದರು.

ಭಾರತೀಯ ಸಮಾಜದಲ್ಲಿ ಪ್ರಾಚೀನ ಕಾಲದಿಂದಲೂ ನಡೆದು ಬಂದ ಭಕ್ತಿಪಂಥದ ಸುಳುಹುಗಳು. ಭಕ್ತಿಕನ್ಯೆಯು ದ್ರಾವಿಡ ದೇಶದಲ್ಲಿ ಹುಟ್ಟಿ, ಕರ್ನಾಟಕದಲ್ಲಿ ಬೆಳೆದು, ಮಹಾರಾಷ್ಟ್ರ ಮತ್ತು ಗುಜರಾತ್‌ಗಳಲ್ಲಿ ಸಂಚರಿಸಿ, ವೃಂದಾವನದಲ್ಲಿ ಸುಂದರ ಯುವತಿಯಾಗಿ ರೂಪುಗೊಂಡಳೆಂದು ಪದ್ಮಪುರಾಣದಲ್ಲಿ ವರ್ಣಿಸಲಾಗಿರುವ “ಉತ್ಪನ್ನಾ ದ್ರವಿಡೇ ಸಾಹಂ ವೃದ್ಧಿಂ ಕರ್ನಾಟಕೇ ಗತಾ  |
ಕ್ವಚಿತ್ ಕ್ವಚಿನ್ ಮಹಾರಾಷ್ಟ್ರೇ ಗುರ್ಜರೇ ಜೀರ್ಣತಾಂ ಗತಾ ||
ವೃಂದಾವನಂ ಪುನಃ ಪ್ರಾಪ್ಯ ನವೀನೇವ ಸುರೂಪಿಣೀ ”ಎಂಬ ಶ್ಲೋಕವನ್ನು ವಿವರಿಸಿ ಭಕ್ತಿಯನ್ನು ಕುರಿತು ಹಿಂದಿ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಿದ ಶ್ರೀ ಜಗದ್ಗುರುಗಳವರ ಮಾತುಗಳನ್ನು ಕೇಳಿ ಅಪಾರ ಸಂಖ್ಯೆಯ ಯಾತ್ರಾರ್ಥಿಗಳು ಭಾವಪರವಶರಾದರು.

ಕಾರ್ಯಕ್ರಮದಲ್ಲಿ ಚೈತನ್ಯ ಪ್ರೇಮ ಸಂಸ್ಥಾನದ ಪೂಜ್ಯ ಶ್ರೀವತ್ಸ ಗೋಸ್ವಾಮಿರವರು, ಸಂಸ್ಥಾನದ ಅಧಿಕಾರಿ ವರ್ಗ, ಯಾತ್ರಾರ್ಥಿ ಪ್ರಮುಖರು, ಅಪಾರ ಸಂಖ್ಯೆಯ ಯಾತ್ರಾರ್ಥಿಗಳು ಉಪಸ್ಥಿತರಿದ್ದರು.

ಬ್ರಜ್ ಯಾತ್ರೆ ಎಂದರೇನು…?

ಬ್ರಜ್ ಯಾತ್ರೆ ಆಧ್ಯಾತ್ಮಿಕ ಯಾತ್ರೆಯಾಗಿದೆ. ಇದನ್ನು ಬ್ರಜ್ ಚೌರಾಸಿ ಕೋಸ್ ಯಾತ್ರೆ ಎಂದೂ ಕರೆಯಲಾಗುತ್ತದೆ, ಈ ಯಾತ್ರೆಯಲ್ಲಿ ಮಥುರಾ, ವೃಂದಾವನ, ಗೋವರ್ಧನ ಬೆಟ್ಟ, ನಂದಗಾಂವ್, ಬರ್ಸಾನಾ ಮತ್ತು ಗೋಕುಲ್‌ನಂತಹ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಲಾಗುತ್ತದೆ. ಯಾತ್ರಾ ಮಾರ್ಗವು ಮಥುರಾ, ವೃಂದಾವನ ಮತ್ತು ಅದರ ಗಡಿ ರಾಜ್ಯಗಳಾದ ರಾಜಸ್ಥಾನ ಮತ್ತು ಹರಿಯಾಣದ ಮೂಲಕ ಹಾದುಹೋಗುತ್ತದೆ. ಈ ಪರಿಕ್ರಮದ ಒಟ್ಟು ದೂರ 252 ಕಿ.ಮೀ (84 ಕೋಸ್) ಆಗಿದ್ದು, ಅಲ್ಲಿ ಯಾತ್ರಿಕರಿಗೆ 25 ವಿಶ್ರಾಂತಿ ಸ್ಥಳಗಳನ್ನು ನಿಗದಿಪಡಿಸಲಾಗಿದೆ.

ಈ ಮಾರ್ಗದಲ್ಲಿ ಸುಮಾರು 1300 ಹಳ್ಳಿಗಳು, 1100 ಕೊಳಗಳು/ಕುಂಡಗಳು, 36 ಕಾಡುಗಳು ಮತ್ತು ಅನೇಕ ಪರ್ವತಗಳಿವೆ. ಕೃಷ್ಣನಿಗೆ ಸಂಬಂಧಿಸಿದ ಸ್ಥಳಗಳು ಮಾತ್ರವಲ್ಲದೆ ದೇವಾಲಯಗಳು ಮತ್ತು ಅನೇಕ ದೇವರುಗಳು ಮತ್ತು ದೇವತೆಗಳಿಗೆ ಸಂಬಂಧಿಸಿದ ಸ್ಥಳಗಳು ಹಾಗೂ ಯಮುನಾ ನದಿಗೆ ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ.

ಯೋಗರಾಜ್

ಇದು ಡಿಜಿಟಲ್ ಯುಗ. ಕೈ ಬೆರಳಿನಲ್ಲೇ ಸುದ್ದಿಗಳು ಜನರಿಗೆ ತಲುಪಬೇಕು ಎಂಬುದು ನಮ್ಮ ಸದುದ್ದೇಶ. ಈಗಾಗಲೇ ಲಕ್ಷಾಂತರ ಓದುಗರನ್ನೊಳಗೊಂಡ ಈ ಡಿಜಿಟಲ್ ಮಾಧ್ಯಮ ಜನಮನ ಗೆದ್ದಿದೆ. ಡೈಲಿಹಂಟ್ ನಲ್ಲಿಯೂ ಜನರ ಕೈಬೆರಳಿನಲ್ಲೇ ಸಿಗುತ್ತದೆ. ದಾವಣಗೆರೆ, ಕೃಷಿ, ಉದ್ಯೋಗ, ವಾಣಿಜ್ಯ, ಅಪರಾಧ ಜಗತ್ತಿನ, ರಾಷ್ಟ್ರ, ಅಂತಾರಾಷ್ಟ್ರೀಯ ಸೇರಿದಂತೆ ಓದುಗರಿಗೆ ಬೇಕಾದ ಮಾಹಿತಿ ಒದಗಿಸಲಾಗುತ್ತಿದೆ. ಭಾರೀ ಮಟ್ಟದಲ್ಲಿ ಪ್ರತಿಕ್ರಿಯೆಯೂ ಬಂದಿದೆ, ಬರುತ್ತಲೇ ಇದೆ. ಓದುಗರು ನೀಡಿದ ಪ್ರೋತ್ಸಾಹ, ತೋರಿದ ಪ್ರೀತಿ, ನೀಡುತ್ತಿರುವ ಮಾರ್ಗದರ್ಶನವೇ ಈ ಮಾಧ್ಯಮ ಇಷ್ಟೊಂದು ಪ್ರಮಾಣದಲ್ಲಿ ಬೆಳೆಯಲು ಸಾಧ್ಯವಾಗಿದೆ. ದಾವಣಗೆರೆಯಲ್ಲಿ ನಂಬರ್ ಒನ್ ನ್ಯೂಸ್ ಪೋರ್ಟಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಎಷ್ಟೋ ಮಂದಿ ನ್ಯೂಸ್ ಪ್ರಕಟಿಸುವಂತೆ ಹೇಳುತ್ತಲೇ ಇದ್ದಾರೆ. ದಾವಣಗೆರೆ ಜಿಲ್ಲೆ ಮಾತ್ರವಲ್ಲ, ಬೇರೆ ಜಿಲ್ಲೆಗಳಿಂದಲೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಸ್ಥಳೀಯ ಸಮಸ್ಯೆಗಳು, ಜನರಿಗೆ ಮತ್ತಷ್ಟು ಹತ್ತಿರವಾಗುವ ಸದುದ್ದೇಶದಿಂದ ಸುದ್ದಿಗಳನ್ನು ಪ್ರಕಟಿಸಲಾಗುವುದು. ವೈಯಕ್ತಿಕ ವಿಚಾರ, ಆಸ್ತಿ ವಿಚಾರ, ಗಂಡ ಹೆಂಡತಿ ಸಮಸ್ಯೆಯಂಥ ಸುದ್ದಿಗಳನ್ನ ಬಿತ್ತರಿಸಲಾಗುವುದಿಲ್ಲ. ನಿಜವಾದ ಸಮಸ್ಯೆಗಳಿದ್ದರೆ ಖಂಡಿತವಾಗಿಯೂ ಪ್ರಕಟಿಸಲಾಗುವುದು. ಹಾಗಾಗಿ, ಹೊಸ ವೇದಿಕೆ ಕಲ್ಪಿಸಿಕೊಡಲಾಗುತ್ತಿದೆ. ವಾಟ್ಸಪ್ ನಂಬರ್: 96869-97836, ಇ-ಮೇಲ್ ವಿಳಾಸ: suddikshana.com ಈ ವಿಳಾಸಕ್ಕೆ ಕಳುಹಿಸಿಕೊಡಿ. ಅರ್ಹವಿದ್ದ ಸುದ್ದಿಗಳನ್ನು ಖಂಡಿತವಾಗಿಯೂ ಪ್ರಕಟಿಸಲಾಗುತ್ತದೆ. ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment