SUDDIKSHANA KANNADA NEWS/ DAVANAGERE/ DATE:14-10-2023
ಅಹಮದಾಬಾದ್: ಇಂದು ಸೂಪರ್ ಶನಿವಾರ. ವಿಶ್ವಕಪ್ ಕ್ರಿಕೆಟ್ (Cricket) ಪಂದ್ಯಾವಳಿಯಲ್ಲಿ ಇಡೀ ಜಗತ್ತು ಭಾರತ ಮತ್ತು ಪಾಕಿಸ್ತಾನ ತಂಡದ ನಡುವಿನ ಪಂದ್ಯದ ಮೇಲೆ ಚಿತ್ತ ನೆಟ್ಟಿದೆ. ಸಂಪ್ರಾದಾಯಿಕ ಎದುರಾಳಿ ಪಾಕಿಸ್ತಾನ ತಂಡದ ವಿರುದ್ಧ ಭಾರತ ಗೆಲ್ಲುವ ವಿಶ್ವಾಸದಲ್ಲಿದ್ದರೆ, ಪಾಕಿಸ್ತಾನ ಕೂಡ ಇದೇ ವಿಶ್ವಾಸ ಹೊಂದಿದೆ. ಹಾಗಾಗಿ, ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಕ್ರಿಕೆಟ್ ಜಗತ್ತಿನ ಎರಡು ದೈತ್ಯ ತಂಡಗಳ ನಡುವೆ ಸೆಣಸಾಟ ನಡೆಯಲಿದೆ.
Read Also This Story:
ದಾವಣಗೆರೆ (Davanagere)ಯ ಬಸವರಾಜಪೇಟೆ ಗಣೇಶ ಗದ್ದಲ ವಿಚಾರ, ಎರಡೂ ಕಡೆ ಪರಿಶೀಲಿಸಿ ಕಾನೂನು ಕ್ರಮ, ಲಾಠಿ ಚಾರ್ಜ್ ಆಗಿಲ್ಲ: ಎಸ್ಪಿ ಉಮಾ ಪ್ರಶಾಂತ್ ಸ್ಪಷ್ಟನೆ
ವಿಶ್ವಕಪ್ ಕ್ರಿಕೆಟ್ ನಲ್ಲಿ ಅತ್ಯಂತ ಕುತೂಹಲದಿಂದ ಕಾಯುತ್ತಿರುವ ಪಂದ್ಯ. ಭಾರತದ ಕೋಟ್ಯಂತರ ಅಭಿಮಾನಿಗಳು ಟೀಂ ಇಂಡಿಯಾ ಗೆಲುವಿಗೆ ಪ್ರಾರ್ಥಿಸುತ್ತಿದ್ದಾರೆ. ಪಾಕಿಸ್ತಾನ ಬಗ್ಗುಪಡಿದು ಭಾರತ ತಂಡವು ಮುಂದಿನ ಹಂತಕ್ಕೆ ಹೋಗಲಿ ಎಂಬ ಹಾರೈಕೆ ಬರುತ್ತಿದೆ. ವಿಶ್ವಕಪ್ ಕ್ರಿಕೆಟ್ ನಲ್ಲಿ ಅತ್ಯಂತ ಕುತೂಹಲಕಾರಿ ಪಂದ್ಯ ಇದು.
ಭಾರತ ತಂಡವು ಚೆನ್ನೈನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡದ ವಿರುದ್ಧ ಸಂಘಟಿತ ಹೋರಾಟ ನಡೆಸಿ ಆರು ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿತು. ವಿಜಯದೊಂದಿಗೆ ವಿಶ್ವಕಪ್ ನಲ್ಲಿ ಶುಭಾರಂಭ ಮಾಡಿದ ರೋಹಿತ್ ಶರ್ಮಾ ನೇತೃತ್ವದ
ಭಾರತ ಕ್ರಿಕೆಟ್ ತಂಡವು ಅಫ್ಘಾನಿಸ್ತಾನದ ವಿರುದ್ಧ ಭರ್ಜರಿ ಜಯ ದಾಖಲಿಸಿತು. ರೋಹಿತ್ ಶರ್ಮಾ 131 ರನ್ ಬಾರಿಸುವ ಮೂಲಕ ತಂಡದ ಗೆಲುವಿಗೆ ಪಾತ್ರರಾಗಿದ್ದರು. ಮೊಹಮ್ಮದ್ ರಿಜ್ವಾನ್ ಅವರ ಅಮೋಘ ಶತಕದಿಂದ ಪಾಕಿಸ್ತಾನ ತಂಡವು ನೆದರ್ಲ್ಯಾಂಡ್ಸ್ ವಿರುದ್ಧ 81 ರನ್ ಗಳ ಭಾರೀ ಜಯ ದಾಖಲಿಸಿ ಶುಭಾರಂಭ ಮಾಡಿತು.
ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಪಾಕಿಸ್ತಾನ ದಾಖಲೆಯ ರನ್ ಗಳನ್ನು ಬೆನ್ನತ್ತುವ ಮೂಲಕ ಬಲಿಷ್ಠವಾಗಿದೆ ಎಂದು ಸಾಬೀತುಪಡಿಸಿದೆ. ಇಂದಿನ ಪಂದ್ಯಕ್ಕೆ ಎಲ್ಲರೂ ಕುತೂಹಲದಿಂದ ನೋಡುತ್ತಿದ್ದು, ಈ ಪಂದ್ಯ ವೀಕ್ಷಿಸಲು ಕಾತರರಿಂದ
ಕಾಯುತ್ತಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ತಂಡವು ವಿಶ್ವಕಪ್ ನಲ್ಲಿ ಸೋಲು ಕಂಡಿಲ್ಲ. ಒಂದು ತಂಡ ಗೆದ್ದೇ ಗೆಲ್ಲುತ್ತೆ. ಮತ್ತೊಂದು ತಂಡ ಸೋಲಲೇ ಬೇಕು. ಭಾರತ ಮತ್ತು ಪಾಕಿಸ್ತಾನ ತಂಡ ಯಾವಾಗ ಸೆಣಸಾಟ ನಡೆಸಿದರೂ ರೋಚಕವಾಗಿರುತ್ತದೆ. ಎರಡೂ
ತಂಡಗಳ ಆಟಗಾರರು ಸುಲಭವಾಗಿ ಸೋಲೊಪ್ಪಿಕೊಳ್ಳುವುದಿಲ್ಲ. ಭಾರತ ತಂಡವು ಬಲಿಷ್ಠವಾಗಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶಾನ್ ಸೇರಿದಂತೆ ಬ್ಯಾಟಿಂಗ್ ಬಲ ಹೊಂದಿದೆ. ಪಾಕಿಸ್ತಾನ ತಂಡವು ದಾಖಲೆ ರನ್ ಚೇಜ್ ಮಾಡಿ ಬಲಿಷ್ಠವಾಗಿದೆ ಎಂದು ಸಾಬೀತುಪಡಿಸಿದೆ.