ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಇಂಡೋ- ಪಾಕ್ Cricket ಪಂದ್ಯಕ್ಕೆ ಮುನ್ನ ಗಾಲಾ ವೈಭವ, ಶಂಕರ್ ಮಹದೇವನ್, ಸುಖ್ವಿಂದರ್ ಸಿಂಗ್, ಅರಿಜಿತ್ ಸಿಂಗ್ ಗಾಯನ: ಶುಭಮನ್ ಗಿಲ್ ಟೀಂ ಇಂಡಿಯಾ ಸೇರ್ಪಡೆ…?

On: October 13, 2023 7:32 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:14-10-2023

ಅಹಮದಾಬಾದ್: 2023ರ ಐಸಿಸಿ ಪುರುಷರ ಕ್ರಿಕೆಟ್ (Cricket) ವಿಶ್ವಕಪ್ ಅಕ್ಟೋಬರ್ 5 ರಂದು ಪ್ರಾರಂಭವಾಗುತ್ತಿದ್ದಂತೆ ವಿಶ್ವದಾದ್ಯಂತ ಕ್ರಿಕೆಟ್ ಪ್ರೇಮಿಗಳು ಉತ್ಸಾಹ ಮುಗಿಲು ಮುಟ್ಟಿದೆ.

Read Also This Story:

Bangalore: ಕಳೆದ 5 ವರ್ಷಗಳಲ್ಲಿ ಯಾವುದೇ ವಿದ್ಯುತ್ ಉತ್ಪಾದನಾ ಸಾಮರ್ಥ್ಯವು ಸೇರ್ಪಡೆಗೊಂಡಿಲ್ಲ… ರಾಜ್ಯದ ಪಾಲಾದ ವಿದ್ಯುತ್ ನವದೆಹಲಿಗೆ ಹಂಚಿಕೆ!

ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ ಬಹು ನಿರೀಕ್ಷಿತ ಪಂದ್ಯವೆಂದರೆ ಅದು ಭಾರತ ಮತ್ತು ಪಾಕಿಸ್ತಾನ ತಂಡದ ನಡುವಿನ ಸೆಣಸಾಟ. ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಭಾರತ ತಂಡ ಎದುರಿಸಲಿದೆ. ಆದರೆ ಪಂದ್ಯದ ಮೊದಲು, ಬಿಸಿಸಿಐ 12.30ಕ್ಕೆ ಗಾಲಾ ಸಮಾರಂಭ ಆಯೋಜಿಸಿದೆ.

ಮಧ್ಯಾಹ್ನ 1. 30ಕ್ಕೆ ಭಾರತ ಮತ್ತು ಪಾಕಿಸ್ತಾನ ತಂಡದ ಪಂದ್ಯ ಆರಂಭವಾಗಲಿದೆ. ಇದಕ್ಕೂ ಮುನ್ನ ಭಾರತದ ಖ್ಯಾತ ಗಾಯಕ ಶಂಕರ್ ಮಹಾದೇವನ್, ಸುಖ್ವಿಂದರ್ ಸಿಂಗ್ ಮತ್ತು ಅರಿಜಿತ್ ಸಿಂಗ್ ಅವರ ಹಾಡುಗಳು ಪ್ರೇಕ್ಷಕರನ್ನು ಕುಣಿದು ಕುಪ್ಪಳಿಸುವಂತೆ ಮಾಡಲಿದೆ.

1 ಲಕ್ಷಕ್ಕೂ ಅಧಿಕ ಪ್ರೇಕ್ಷಕರು ಈ ಪಂದ್ಯವನ್ನು ಕ್ರೀಡಾಂಗಣದಲ್ಲಿ ವೀಕ್ಷಿಸುವ ನಿರೀಕ್ಷೆ ಇದೆ. ಸುಮಾರು ಅರ್ಧಗಂಟೆಗೂ ಹೆಚ್ಚು ಹೊತ್ತು ಹಾಡುಗಳಿಗೆ ಕ್ರಿಕೆಟ್ ಅಭಿಮಾನಿಗಳು ಕುಣಿದು ಕುಪ್ಪಳಿಸಲಿದ್ದಾರೆ.

ಶುಭಮನ್ ಗಿಲ್ ತಂಡಕ್ಕೆ…?

ಇನ್ನು ಗಾಯಗೊಂಡಿದ್ದ ಶುಭಮನ್ ಗಿಲ್ ಪ್ರಾಕ್ಟೀಸ್ ಮಾಡಿದ್ದು, ಭಾರತ ತಂಡದ 11 ಆಟಗಾರರ ತಂಡದಲ್ಲಿ ಸೇರುವ ನಿರೀಕ್ಷೆ ಇದೆ. ಪಾಕಿಸ್ತಾನವು ಶ್ರೀಲಂಕಾ ವಿರುದ್ಧ ಆಡಿದ್ದ ಆಟಗಾರರನ್ನೇ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಯಾವುದೇ ತಂಡ ಆದರೂ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯೂ ಹೆಚ್ಚಿದೆ. ಟಾಸ್ ಗೆದ್ದ ತಂಡವು ರನ್ ಚೇಸ್ ಮಾಡಲು ಮುಂದಾಗುವ ನಿರೀಕ್ಷೆ ಇದೆ. ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ತಮ್ಮ ಮೊದಲ ಎರಡು ಪಂದ್ಯಗಳನ್ನು ಗೆದ್ದ ನಂತರ ಉಭಯ ತಂಡಗಳು ಆತ್ಮವಿಶ್ವಾಸದಿಂದ ಬೀಗುತ್ತಿರುವ ಕಾರಣ ಅಹಮದಾಬಾದ್‌ನಲ್ಲಿ ಭಾರೀ ಪೈಪೋಟಿಯ ನಿರೀಕ್ಷೆ ಇದೆ.

ಒಟ್ಟು 134 ಏಕದಿನ ಪಂದ್ಯಗಳಲ್ಲಿ ಭಾರತ – ಪಾಕಿಸ್ತಾನ ತಂಡವು ಮುಖಾಮುಖಿಯಾಗಿದ್ದು, ಪಾಕಿಸ್ತಾನ ತಂಡವು 73 ಪಂದ್ಯಗಳಲ್ಲಿ ಗೆದ್ದಿದ್ದರೆ, ಭಾರತವು 56 ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ. 5 ಪಂದ್ಯಗಳ ಫಲಿತಾಂಶ ಬಂದಿಲ್ಲ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment