ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಆರ್ ಎಸ್ ಎಸ್ ಶಾಶ್ವತ ನಿಷೇಧ ಸಾಧ್ಯವೇ ಇಲ್ಲ: ಸಿ. ಟಿ. ರವಿ ಸವಾಲು!

On: October 23, 2025 6:14 PM
Follow Us:
ಸಿ. ಟಿ. ರವಿ
---Advertisement---

ದಾವಣಗೆರೆ: ರಾಷ್ಟ್ರೀಯ ಸ್ವಯಂ ಸೇವಕಸಂಘ ನಿಷೇಧಿಸಲು ಯಾರಿಂದಲೂ ಸಾಧ್ಯವಿಲ್ಲ. ಶಾಶ್ವತವಾಗಿ ಆರ್ ಎಸ್ ಎಸ್ ಬ್ಯಾನ್ ಯಾರ ಕೈಯಲ್ಲೂ ಆಗದು ಎಂದು ವಿಧಾನ ಪರಿಷತ್ ಸದಸ್ಯ ಸಿ. ಟಿ. ರವಿ ಹೇಳಿದ್ದಾರೆ.

READ ALSO THIS STORY: ಸ್ವಾತಂತ್ರ್ಯ ಹೋರಾಟಗಾರರ ಹೆಸರಿಡಲಿ: ದಿನೇಶ್ ಕೆ. ಶೆಟ್ಟಿಗೆ ಯಶವಂತರಾವ್ ಜಾಧವ್ ಸವಾಲು

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಭಾವನೆಯನ್ನು ಬೆಳೆಸುವ ಕೆಲಸವನ್ನು ‌ಸಂಘ ಮಾಡುತ್ತಿದೆ. ಕೆಲವರಿಗೆ ತಪ್ಪು ಅಭಿಪ್ರಾಯ ಇದೆ. ಅದನ್ನು ಮನವರಿಕೆ ಮಾಡುವ ಕೆಲಸ ನಾವು ಮಾಡುತ್ತೇವೆ. ಆದರೆ ಪೂರ್ವಾಗ್ರಹ ಪೀಡಿತರ ಮನಸ್ಥಿತಿ ಬದಲಿಸಲು ಆಗದು. ಅದ್ದರಿಂದ ಅಂತವರ ಬಗ್ಗೆ ಸಂಘ ತಲೆಕೆಡಸಿಕೊಳ್ಳದೆ ತನ್ನ ಕೆಲಸ ಮಾಡುತ್ತಾ ಹೋಗುತ್ತದೆ ಎಂದು ಹೇಳಿದರು.

ಕಾಂಗ್ರೆಸ್ ನವರು ಪ್ರಜಾಪ್ರಭುತ್ವವನ್ನೇ ಜೈಲಿಗೆ ಹಾಕಿದವರು. ತುರ್ತು ಪರಿಸ್ಥಿತಿ ಏರಿ ಸಂವಿಧಾನವನ್ನು ಐಸಿಯುನಲ್ಲಿ ಇಟ್ಟವರು. ಆದ್ದರಿಂದ ಕಾಂಗ್ರೆಸ್ ನ ಹಳೇ ಚಾಳಿ ಆಗಾಗ್ಗೆ ಮರುಕಳಿಸುತ್ತಿರುತ್ತದೆ. ಪ್ರಜಾಪ್ರಭುತ್ವದಲ್ಲಿ ನಮ್ಮ ಮಾಲೀಕರು ಪ್ರಜೆಗಳು. ನಮ್ಮ ಉತ್ತರಾಧಿಕಾರಿಗಳು ಯಾರು ಆಗಬೇಕು ಎಂದು ಜನರು ನಿರ್ಧಾರ ಮಾಡಬೇಕಿದೆ. ಪ್ರಜೆಗಳು ಆಶೀರ್ವಾದ ಮಾಡಿದವರಿಗೆ ವಾರಸುದಾರಿಕೆ ಸಿಗುತ್ತದೆ. ನಮ್ಮ ಅಪ್ಪನ ಆಸ್ತಿ ಪಾಲು ಮಾಡಿದಾಗ ವಾರಸುದಾರಿಕೆ ಬರುತ್ತದೆ. ಆದರೆ ರಾಜಕೀಯದಲ್ಲಿ ಉತ್ತರಾಧಿಕಾರಿ ನೇಮಕ ಹೇಗೆ ಮಾಡ್ತೀರಾ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯನವರ ಆಸ್ತಿಗೆ ಯತೀಂದ್ರ ಸಿದ್ದರಾಮಯ್ಯ ಉತ್ತರಾಧಿಕಾರಿ ಆಗಬಹುದು. ಆದರೆ ರಾಜಕೀಯ ವಾರಸುದಾರಿಗೆ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ನೀಡಬೇಕು ಎಂದು ಹೇಳಿದರು.

ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿಗೆ ಕರೆ ತರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿ. ಟಿ. ರವಿ ಅವರು, ಕೆಲವೊಂದು ವಿಚಾರಗಳನ್ನು ಕಾಲವೇ ನಿರ್ಣಯ ಮಾಡುತ್ತದೆ. ಕಾಲ ಬರುವರೆಗೂ ಕಾಯಬೇಕಿದೆ. ಇದು ಯಾವುದನ್ನು ಹೇಳುವ ಕಾಲ ಅಲ್ಲ ಎಂದು ಹೇಳಿದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment