SUDDIKSHANA KANNADA NEWS/DAVANAGERE/DATE:23_10_2025
ಬೆಂಗಳೂರು, ವೈಟ್ ಫೀಲ್ದ್ : ಪಶ್ಚಿಮ ಬಂಗಾಳದ 41 ವರ್ಷದ ವ್ಯಕ್ತಿಯೊಬ್ಬರಿಗೆ ಕೇವಲ 3 ವರ್ಷಗಳ ಡಯಾಬಿಟೀಸ್‌ನಿಂದ ಮೂತ್ರಪಿಂಡ ವೈಫಲ್ಯ ಉಂಟಾಯಿತು. ಪತಿಯ ಬದುಕು ಉಳಿಸಲು ಪತ್ನಿಯೇ ತನ್ನ ಮೂತ್ರಪಿಂಡವನ್ನು ದಾನ ಮಾಡಿದ್ದು, ಮೆಡಿಕವರ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಕಿಡ್ನಿ ಟ್ರಾನ್ಸ್‌ಪ್ಲಾಂಟ್ ನಡೆಸಿ ಅವರ ಜೀವ ಉಳಿಸಿದರು.
READ ALSO THIS STORY: ರಾಜಕೀಯದ ಸಂಧ್ಯಾಕಾಲದಲ್ಲಿ ಸಿದ್ದರಾಮಯ್ಯ: ಮುಂದಿನ ಸಂಭಾವ್ಯ ಉತ್ತರಾಧಿಕಾರಿಯ ಹೆಸರು ಮಗನಿಂದ ಘೋಷಿಸಿದ್ರಾ ಸಿಎಂ?
ಸಾಮಾನ್ಯವಾಗಿ ಡಯಾಬಿಟೀಸ್ ಹಾಗೂ ರಕ್ತದೊತ್ತಡದಿಂದ ಮೂತ್ರಪಿಂಡ ಹಾನಿ 10–15 ವರ್ಷಗಳ ಬಳಿಕವಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಕೇವಲ 3 ವರ್ಷಗಳಲ್ಲಿ ಡಯಾಬಿಟಿಕ್ ಕಿಡ್ನಿ ಡಿಸೀಸ್ ದೃಢಪಟ್ಟಿತು. ಕಳೆದ 2 ತಿಂಗಳುಗಳಿಂದ ರೋಗಿ ವಾರಕ್ಕೆ 3 ಬಾರಿ ಡಯಾಲಿಸಿಸ್ ಮಾಡಿಸಿಕೊಂಡಿದ್ದರು.
ಮೆಡಿಕವರ್ ಆಸ್ಪತ್ರೆಯ ನುರಿತ ವೈದ್ಯರ ತಂಡ ಕಿಡ್ನಿ ಕಸಿಯನ್ನು ಯಶಸ್ವಿಯಾಗಿ ಪೂರೈಸಿದರು . ಮೂತ್ರ ಪಿಂಡ ಶಾಸ್ತ್ರಜ್ಞ ಡಾ .ಹರೀಶಾ ಬಾಬು ನೇತೃತ್ವದಲ್ಲಿ ಮೂತ್ರ ಶಾಸ್ತ್ರಜ್ಞ ಡಾ ದಿಲೀಪ್ ಹಾಗೂ ಡಾ ಪ್ರಮೋದ್ ನೇತ್ರತ್ವದಲ್ಲಿ ಕಡ್ನಿ ಕಿಸಿಯನ್ನು ಮಾಡಲಾಯಿತು. ನಂತರ ತಕ್ಷಣವೇ ಮೂತ್ರ ವಿಸರ್ಜನೆ ಪ್ರಾರಂಭವಾಗಿ,ರೋಗಿಯಲ್ಲಿ ಚೇತರಿಕೆ ಕಂಡು ಬಂದಿದೆ .
ಈ ಪ್ರಕರಣದ ಬಗ್ಗೆ ಮೆಡಿಕವರ್ ಆಸ್ಪತ್ರೆಯ ಹಿರಿಯ ನೇಫ್ರಾಲಜಿಸ್ಟ್ ಡಾ. ಹರೀಶಾ ಬಾಬು ಹೇಳಿದರು:
“ಡಯಾಬಿಟೀಸ್‌ನಿಂದಾಗಿ ಸಾಮಾನ್ಯವಾಗಿ 10 ವರ್ಷಗಳ ನಂತರವೇ ಕಿಡ್ನಿ ಹಾನಿ ಉಂಟಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಕೇವಲ 3 ವರ್ಷಗಳಲ್ಲೇ ಮೂತ್ರಪಿಂಡ ವೈಫಲ್ಯ ಉಂಟಾಗಿದೆ. ಇದು ಪ್ರಾರಂಭಿಕ ಹಂತದಲ್ಲೇ ತಪಾಸಣೆ ಮತ್ತು ಚಿಕಿತ್ಸೆಯ ಮಹತ್ವವನ್ನು ತೋರಿಸುತ್ತದೆ. ನಿಯಮಿತ ತಪಾಸಣೆ, ಜೀವನ ಶೈಲಿಯ ಬದಲಾವಣೆಗಳು ಕಿಡ್ನಿ ಹಾನಿಯನ್ನು ತಡೆಯಬಹುದು.”
ಈ ಯಶಸ್ವಿ ಶಸ್ತ್ರಚಿಕಿತ್ಸೆ ಪತಿಯ ಬದುಕಿಗಾಗಿ ತ್ಯಾಗ ಮಾಡಿದ ಪತ್ನಿಯ ಪ್ರೀತಿ ಮತ್ತು ವೈದ್ಯಕೀಯ ವಿಜ್ಞಾನದ ಶಕ್ತಿಗೆ ಸಾಕ್ಷಿಯಾಗಿದೆ.