ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಇದು ವ್ಯಾಪಕ ಆಕ್ರೋಶಕ್ಕೂ ಕಾರಣವಾಗಿದೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಶತಮಾನೋತ್ಸವ ಆಚರಿಸಿಕೊಂಡಿದೆ ಆರ್ಎಸ್ಎಸ್. ಸಂವಿಧಾನದಲ್ಲಿ ಈ ಸಂಘಟನೆ ನಿಷೇಧ ಸಾಧ್ಯವೇ ಇಲ್ಲ. ಅದರಲ್ಲಿಯೂ ರಾಜ್ಯ ಸರ್ಕಾರಗಳಿಗೆ ಈ ಅಧಿಕಾರ ಇಲ್ಲ. ಕೇಂದ್ರ ಸರ್ಕಾರದ ಅಧೀನದಲ್ಲಿರುತ್ತದೆ.
ಈ ಸುದ್ದಿಯನ್ನೂ ಓದಿ: ಬೆಳಕಿನ ಹಬ್ಬದ ವೇಳೆಯಲ್ಲೂ ಬರಲಲ್ಲ ಬೆಳಕು, ಕತ್ತಲಲ್ಲಿ ಶಾಸಕ ಕೆ. ಸಿ. ವೀರೇಂದ್ರ ಪಪ್ಪಿ: ಚಿತ್ರದುರ್ಗ ಕಾಂಗ್ರೆಸ್ ಶಾಸಕನಿಗೆ ಶಾಕ್ ಮೇಲೆ ಶಾಕ್!
ಆರ್ ಎಸ್ ಎಸ್ ಇಂದು ಬೃಹದಾಕಾರವಾಗಿ ಬೆಳೆದಿರುವ ದೇಶದ ದೊಡ್ಡ ಸಂಘಟನೆ. ಈ ಸಂಘವನ್ನು ನಿಷೇಧ ಮಾಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಚಟುವಟಿಕೆಗಳನ್ನು ಹತ್ತಿಕ್ಕಲು ರಾಜ್ಯ ಸರ್ಕಾರ ಮುಂದಾಗಿರುವುದು ಬಿಜೆಪಿ, ಹಿಂದೂಪರ ಸಂಘಟನೆಗಳನ್ನು ಕೆರಳಿಸಿದೆ. ಸರ್ಕಾರಿ ಜಾಗ, ಮುಜರಾಯಿ ಇಲಾಖೆಗೆ ಒಳಪಟ್ಟ ಸ್ಥಳಗಳಲ್ಲಿ ಬೈಠಕ್ ಸೇರಿದಂತೆ ಸರ್ಕಾರಿ ತಾಣಗಳಲ್ಲಿ ಆರ್ ಎಸ್ ಎಸ್ ಕಾರ್ಯಕ್ರಮಗಳಿಗೆ ನಿಷೇಧ ಹೇರುವ ನಿರ್ಧಾರವನ್ನು ಸಚಿವ ಸಂಪುಟದಲ್ಲಿ ನಿರ್ಣಯಿಸಲು ಹವಣಿಸುತ್ತಿದೆ.
ಆರ್ ಎಸ್ ಎಸ್ ಬಗ್ಗೆ ಒಂದಿಷ್ಟು…
ಆರ್ಎಸ್ಎಸ್ ಇಂದು ವಿಶ್ವದ ಅತ್ಯಂತ ದೊಡ್ಡ ಸ್ವಯಂಸೇವಕರ ಸಂಘ. ಕೋಟ್ಯಂತರ ಕಾರ್ಯಕರ್ತರು, ಸಾವಿರಾರು ಶಾಖೆಗಳು ಹಾಗೂ ವಿದೇಶಗಳಲ್ಲಿಯೂ ತನ್ನ ಚಟುವಟಿಕೆಗಳನ್ನು ವಿಸ್ತರಿಸಿಕೊಂಡಿದೆ. ಬಿಜೆಪಿ ಅದರ ರಾಜಕೀಯ ಕ್ಷೇತ್ರದಲ್ಲಿ ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾಗಿದೆ.
ಅಂಕಿಅಂಶಗಳು:
- ಆರ್ ಎಸ್ ಎಸ್ – ವಿಶ್ವದ ಅತ್ಯಂತ ದೊಡ್ಡ ಸ್ವಯಂ ಸೇವಕರ ಸಂಘ
- ಬಿಜೆಪಿ – ವಿಶ್ವದ ಅತ್ಯಂತ ದೊಡ್ಡ ರಾಜಕೀಯ ಪಕ್ಷ
- ವಿದೇಶದಲ್ಲಿ ಹೆಸರು – ಹಿಂದೂ ಸ್ವಯಂ ಸೇವಕ ಸಂಘ
- ಮುಖ್ಯ ಕಛೇರಿ – ನಾಗಪುರ, ಮಹಾರಾಷ್ಟ್ರ
- ಸ್ಥಾಪನೆ -1925.
- 100 ವರ್ಷದ ಹಿಂದೆ
ಸಂಘದ ಸಂಖ್ಯಾತ್ಮಕ ಮಾಹಿತಿಗಳು ಅಂದಾಜು ಇಂತಿವೆ.
- 1. ಒಟ್ಟು ಇರುವ ದೇಶಗಳು – 156
- 2. ಶಾಖೆಗಳು ಇರುವ ದೇಶಗಳು – 39
- 3. ದೇಶದ ಹೊರಗೆ ಇರುವ ಶಾಖೆಗಳು – 3289
- 4. ಅಧಿಕೃತ ಸ್ವಯಂ ಸೇವಕರು – 80 ಲಕ್ಷ
- 5. ಮುಖ್ಯ ಪ್ರಚಾರಕರು – 6000
- 6. ಆರ್ ಎಸ್ ಎಸ್ ಶಾಲೆಗಳು – 30,000
- 7. ಶಿಕ್ಷಕರು – 3 ಲಕ್ಷಕ್ಕೂ ಹೆಚ್ಚು
- 8. ಓದುವ ವಿಧ್ಯಾರ್ಥಿಗಳು – 50 ಲಕ್ಷಕ್ಕೂ ಹೆಚ್ಚು
- 9. ಶಾಖೆಯಲ್ಲಿ ಪಾಲ್ಗೊಳ್ಳುವವರು – 15–20 ಲಕ್ಷ
- 10. ನಡೆಯುವ ಒಟ್ಟು ಶಾಖೆಗಳು – 60,000
- 11. ವಾರ ವಾರ ನಡೆಯುವ ಶಾಖೆಗಳು – 14,000
- 12. ತಿಂಗಳಿಗೊಮ್ಮೆ ನಡೆಯುವ ಶಾಖೆಗಳು – 7000
- 13. ಅಂಗಸಂಸ್ಥೆಗಳು – 37
- 14. ಯೋಜನೆಗಳು – 1.65 ಲಕ್ಷಕ್ಕೂ ಹೆಚ್ಚು
- 15. ಎಬಿವಿಪಿ ಕಾರ್ಯಕರ್ತರು – 5 ಲಕ್ಷಕ್ಕೂ ಹೆಚ್ಚು
- 16. ಬಿಜೆಪಿ ಸದಸ್ಯರು – 15 ಕೋಟಿ
- 17. ಪ್ರಕಟಣೆಗಳು – 500 ಕ್ಕೂ ಹೆಚ್ಚು
- 18. ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು – 20 ಲಕ್ಷ
- 19. ಬಜರಂಗದಳ ಕಾರ್ಯಕರ್ತರು – 50 ಲಕ್ಷ
- 20. ಮಾಜಿ ಸೈನಿಕರ ಪರಿಷತ್ – 1 ಲಕ್ಷ
- 21. ಆರ್ಎಸ್ಎಸ್ ಸ್ವಯಂ ಸೇವಕ ತರಬೇತಿ ಕೇಂದ್ರಗಳು – 120ಕ್ಕೂ ಹೆಚ್ಚು
- 22. ಪ್ರಾಂತೀಯ ಕೇಂದ್ರಗಳು – 44 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ
- 23. ಸೇವಾ ಯೋಜನೆಗಳು (ಸಮಾಜ ಸೇವೆ) – 2 ಲಕ್ಷಕ್ಕೂ ಹೆಚ್ಚು
- 24. ವೈದ್ಯಕೀಯ ಶಿಬಿರಗಳು – 10,000ಕ್ಕೂ ಹೆಚ್ಚು
- 25. ವಿದ್ಯಾರ್ಥಿ ವಸತಿನಿಲಯಗಳು – 2,500ಕ್ಕೂ ಹೆಚ್ಚು
- 26. ಮಹಿಳಾ ವಿಭಾಗ (ರಾಷ್ಟ್ರೀಯ ಸೇವಿಕಾ ಸಮಿತಿ) – 10 ಲಕ್ಷಕ್ಕೂ ಹೆಚ್ಚು ಸದಸ್ಯರು
- 27. ದೈನಂದಿನ ಪ್ರಾರ್ಥನೆ ಶಿಬಿರಗಳು – 50,000ಕ್ಕೂ ಹೆಚ್ಚು ಸ್ಥಳಗಳಲ್ಲಿ
- 28. ಗ್ರಾಮಾಭಿವೃದ್ಧಿ ಕಾರ್ಯಕ್ರಮಗಳು – 20,000ಕ್ಕೂ ಹೆಚ್ಚು ಗ್ರಾಮಗಳಲ್ಲಿ
- 29. ವಿದೇಶದ ಶಾಖೆಗಳು (ಹಿಂದು ಸ್ವಯಂಸೇವಕ ಸಂಘ) – 50ಕ್ಕೂ ಹೆಚ್ಚು ದೇಶಗಳಲ್ಲಿ
- 30. ಪ್ರಕಾಶನ ಕೇಂದ್ರಗಳು (ಸಪ್ತಾಹಿಕ / ಮಾಸಿಕ) – 500+ ಪತ್ರಿಕೆಗಳು
- 31. ಸಾಮಾಜಿಕ ಸೇವಾ ಟ್ರಸ್ಟ್ಗಳು – 1,000ಕ್ಕೂ ಹೆಚ್ಚು ನೋಂದಾಯಿತ ಸಂಸ್ಥೆಗಳು
- 32. ಯುವ ತರಬೇತಿ ಶಿಬಿರಗಳು – ವರ್ಷಕ್ಕೆ 5,000ಕ್ಕೂ ಹೆಚ್ಚು
- 33. ಪರಿಸರ ಸಂರಕ್ಷಣಾ ಯೋಜನೆಗಳು – 25,000ಕ್ಕೂ ಹೆಚ್ಚು
- 34. ಶಿಕ್ಷಣ ಯೋಜನೆಗಳು – 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಒಳಗೊಂಡ
- 35. ಸೇವಾ ಭಾರತಿ ಯೋಜನೆಗಳು – 1 ಲಕ್ಷಕ್ಕೂ ಹೆಚ್ಚು ಪ್ರದೇಶಗಳಲ್ಲಿ ಸಕ್ರಿಯ
- 36. ವಿದ್ಯಾ ಭಾರತಿ ಶಾಲಾ ಜಾಲ – 13,000ಕ್ಕೂ ಹೆಚ್ಚು ಶಾಲೆಗಳು
- 37. ವಾನವಾಸಿ ಕಲ್ಯಾಣ ಆಶ್ರಮ – 50ಕ್ಕೂ ಹೆಚ್ಚು ಜನಾಂಗೀಯ ಪ್ರದೇಶಗಳಲ್ಲಿ ಕಾರ್ಯನಿರ್ವಹಣೆ
- 38. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) – 1.2 ಕೋಟಿ ವಿದ್ಯಾರ್ಥಿ ಸದಸ್ಯರು
- 39. ಭಾರತೀಯ ಮಜ್ದೂರ್ ಸಂಘ (BMS) – ವಿಶ್ವದ 2ನೇ ದೊಡ್ಡ ಕಾರ್ಮಿಕ ಸಂಘಟನೆ
- 40. ವಿಶ್ವ ಹಿಂದೂ ಪರಿಷತ್ (VHP) – 30ಕ್ಕೂ ಹೆಚ್ಚು ದೇಶಗಳಲ್ಲಿ ಶಾಖೆಗಳು
- 41. ಸಂಸ್ಕೃತ ಭಾರತೀ – ಸಂಸ್ಕೃತ ಪ್ರಸಾರಕ್ಕಾಗಿ 5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು
- 42. ಸೇವಾ ದರ್ಶನ ಯೋಜನೆ – 2.5 ಲಕ್ಷಕ್ಕೂ ಹೆಚ್ಚು ಸಕ್ರಿಯ ಸೇವಾ ಉಪಕ್ರಮಗಳು
- 43. ಸಂಘ ಶಿಖ್ಷಾ ವರ್ಗ ತರಬೇತಿ ಶಿಬಿರಗಳು – ವರ್ಷಕ್ಕೆ 2,000ಕ್ಕೂ ಹೆಚ್ಚು
- 44. ಕೃಷಿ ವಿಜ್ಞಾನ ಕೇಂದ್ರಗಳು – ರೈತರ ಶಿಕ್ಷಣಕ್ಕಾಗಿ ಕಾರ್ಯನಿರ್ವಹಣೆ
- 45. ಆರೋಗ್ಯ ಭಾರತ ಅಭಿಯಾನ – ಗ್ರಾಮೀಣ ಆರೋಗ್ಯ ಅಭಿವೃದ್ಧಿ ಯೋಜನೆ
ದೇಶದಲ್ಲಿ ಯಾವುದೇ ರೀತಿಯ ಪ್ರಕೃತಿಯ ವಿಕೋಪದ ಸಂದರ್ಭದಲ್ಲಿ ಮೊದಲು ಸೇವಾ ಕಾರ್ಯಗಳು ನಿಸ್ವಾರ್ಥವಾಗಿ ಹಗಲಿರುಳು ಸೇವಾ ಕಾರ್ಯಗಳನ್ನು ಮಾಡುವುದೇ RSS .
ಇವುಗಳ ಮೂಲಕ ಆರ್ಎಸ್ಎಸ್ ವಿಶ್ವದ ಅತ್ಯಂತ ಶಕ್ತಿಶಾಲಿ, ಸಂಘಟಿತ ಹಾಗೂ ನಿರಂತರ ಸೇವಾ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.
ಕಾಂಗ್ರೆಸ್ಸಿಗರಿಗೆ, ಅವರ ಪಕ್ಷಕ್ಕಿಂತಲೂ ದೊಡ್ಡದಾದ ಇಂತಹ ವಿಶ್ವದ ಅತೀ ದೊಡ್ಡ ಸ್ವಯಂಸೇವಕ ಸಂಸ್ಥೆಯನ್ನು ನಿಷೇಧಿಸುವ ಸಾಮರ್ಥ್ಯವಾದರೂ ಇದೆಯೇ? ಎಂದು ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ಪ್ರಶ್ನಿಸಿವೆ.