SUDDIKSHANA KANNADA NEWS/ DAVANAGERE/ DATE:13-10-2023
ದಾವಣಗೆರೆ (Davanagere): ಬಸವರಾಜಪೇಟೆಯ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಅಡ್ಡಿಪಡಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿ ಮುಖಂಡರು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಬಡಾವಣೆ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ ಘಟನೆ ನಡೆದಿದೆ. ಜಯದೇವ ವೃತ್ತದಲ್ಲಿ ಜಮಾವಣೆಗೊಂಡ ಮುಖಂಡರು, ಕಾರ್ಯಕರ್ತರು, ಬಡಾವಣೆ ಠಾಣೆಗೆ ಆಗಮಿಸಿ ಧರಣಿ ಕುಳಿತರು.
READ ALSO THIS STORY:
ಹಿಂದೂ ಮಹಾಗಣಪತಿ ವಿಸರ್ಜನೆಗೆ ಲಕ್ಷಾಂತರ ಜನರು: ದಾವಣಗೆರೆ (Davanagere) ಜಿಲ್ಲಾ ಪೊಲೀಸ್ ಇಲಾಖೆ ಕೊಟ್ಟಿರುವ ಕಟ್ಟುನಿಟ್ಟಿನ ಸೂಚನೆಗಳೇನು… ಎಚ್ಚರಿಕೆಗಳೇನು..?
ಈ ವೇಳೆ ಸ್ಥಳಕ್ಕೆ ಎಸ್ಪಿ ಉಮಾ ಪ್ರಶಾಂತ್ ಅವರು ಬರಬೇಕೆಂದು ಪಟ್ಟು ಹಿಡಿದರು. ಇಲ್ಲದಿದ್ದರೆ ಮೆರವಣಿಗೆ ತಡೆದ ಸ್ಥಳಕ್ಕೆ ಹೋಗುತ್ತೇವೆ ಎಂಬ ಎಚ್ಚರಿಕೆ ನೀಡಲಾಯಿತು. ಸ್ಥಳಕ್ಕೆ ಆಗಮಿಸಿ ಉಮಾ ಪ್ರಶಾಂತ್ ಅವರಿಗೆ ಹಿಂದೂ ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ಬಿಜೆಪಿ ಮುಖಂಡರು ಘಟನೆ ಬಗ್ಗೆ ಮಾಹಿತಿ ನೀಡಿದರು. ಮಾತ್ರವಲ್ಲ, ಬಡಾವಣೆ ಠಾಣೆ ಮುಂದೆ ಬೇಕೇ ಬೇಕೆ ನ್ಯಾಯ ಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಈ ವೇಳೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರಲ್ಲದೇ, ಕಾಂಗ್ರೆಸ್ ಸರ್ಕಾರ ಮುಸ್ಲಿಂರನ್ನ ಓಲೈಕೆ ಮಾಡುತ್ತಿದೆ ಎಂದು ಆರೋಪಿಸಿದರು. ಕೆಲ ಗೂಂಡಾಗಳು ನೈತಿಕ ಪೊಲೀಸ್ ಗಿರಿ ಮಾಡುತ್ತಿದ್ದಾರೆ
ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೇ, ಮೆರವಣಿಗೆ ವೇಳೆ ಡಿಜೆ ಹಾಕದಂತೆ ಅಡ್ಡಿಪಡಿಸಿದ್ದಾರೆ. ಘಟನೆ ವೇಳೆ ಪೊಲೀಸರು ಅವರ ಬೆಂಬಲಿಗರಂತೆ ವರ್ತನೆ ಮಾಡಿದ್ದಾರೆ. ಪೊಲೀಸ್ ಇನ್ ಸ್ಪೆಕ್ಟರ್ ಅಮಾನತಿಗೆ ಒತ್ತಾಯಿಸಿದರು. ಈ ವೇಳೆ ಪೊಲೀಸರು ಹಿಂದೂ ಕಾರ್ಯಕರ್ತರು, ಗಣೇಶ ಮೂರ್ತಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ದೂರಿದರು.
ನಿನ್ನ ರಾತ್ರಿ ನಗರದ ಬಸವರಾಜ ಪೇಟೆಯಲ್ಲಿ ಈ ಘಟನೆ ನಡೆದಿದೆ. ಗಣಪತಿ ವಿಸರ್ಜನೆ ವೇಳೆ ಡಿಜೆ ಹಾಕಿದ್ದಕ್ಕೆ ಅನ್ಯ ಕೋಮಿನವರು ವಿರೋಧ ವ್ಯಕ್ತಪಡಿಸಿದ್ದರು. ಈ ವೇಳೆ ಬಸವರಾಜ ಪೇಟೆಯಲ್ಲಿ ಹಿಂದು ಮತ್ತು ಅನ್ಯ ಕೋಮಿನ ಜನರ
ಮಧ್ಯೆ ಗಲಾಟೆ ನಡೆದಿತ್ತು ಗಲಾಟೆಯಲ್ಲಿ ಹಿಂದು ಯುವಕರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹಿಂದು ಸಂಘಟನೆಗಳು ಆರೋಪಿಸಿದ್ದು, ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ಹಿಂದು ಮುಖಂಡರು ಹಾಗೂ ಕಾರ್ಯಕರ್ತರು
ಪ್ರತಿಭಟಿಸಿದರು.
ಎಸ್ಪಿ ಹೇಳಿದ್ದೇನು…?
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದಕ್ಕೆ ನಾವಿದ್ದೇವೆ. ಅವರು ಹೇಳಿದ್ದನ್ನೂ ಕೇಳಿದ್ದೇನೆ. ನೀವು ಹೇಳಿದ್ದನ್ನೂ ಕೇಳಿದ್ದೇನೆ. ಪರಿಶೀಲಿಸಿ ಕ್ರಮ ಜರುಗಿಸುತ್ತೇವೆ. ಯಾರೇ ಕಾನೂನು ಕೈಗೆತ್ತಿಕೊಳ್ಳಲು ಮುಂದಾದರೆ ಸಹಿಸುವ ಪ್ರಶ್ನೆಯೇ
ಇಲ್ಲ. ಕಾನೂನು ಮತ್ತು ಸುವ್ಯವಸ್ಥೆ ಮುಖ್ಯ. ಶಾಂತಿಯುತ ಹಬ್ಬ ಆಚರಣೆ ಆಗಬೇಕು. ಈದ್ ಮಿಲಾದ್ ಹಾಗೂ ಗಣೇಶ ಮೂರ್ತಿ ಮೆರವಣಿಗೆಗಳು ಸಂಭ್ರಮದಿಂದ ಶಾಂತಿಯಿಂದ ನಡೆಯಬೇಕು ಎಂಬುದು ನಮ್ಮ ಅಭಿಲಾಕ್ಷೆ. ಯಾವ ಲೋಪ
ಆಗದಂತೆ ಎಚ್ಚರ ವಹಿಸಲಾಗುವುದು. ಬಸವರಾಜಪೇಟೆಯಲ್ಲಿ ಸಣ್ಣ ಗಲಾಟೆ ಆಗಿದೆ. ಈಗ ತಾನೇ ಬಸವರಾಜಪೇಟೆಯ ಅನ್ಯಕೋಮಿನ ಮುಖಂಡರ ಜೊತೆ ಮಾತನಾಡಿದ್ದೇನೆ. ನೀವು ಮಾಡಿದ ಆರೋಪವನ್ನೂ ಪರಿಶೀಲನೆ ಮಾಡೋಣ ಎಂದು
ಎಸ್ಪಿ ಉಮಾ ಪ್ರಶಾಂತ್ ತಿಳಿಸಿದರು.
ಕಾನೂನು ಮತ್ತು ಸುವ್ಯಸವ್ಥೆ ಕಂಟ್ರೋಲ್ ಮಾಡೋದು ನಾವು. ಬೇರೆ ಯಾರೋ ಹೇಳುವುದಲ್ಲ. ನಮ್ಮವರು ಹೇಳಿದ್ದು ಕೇಳಿದ್ದೆ. ಈಗ ಎರಡೂ ಕಡೆಯ ವಾದ – ಪ್ರತಿವಾದ ಆಲಿಸಿದ್ದೇನೆ. ತಪ್ಪಿತಸ್ಥರನ್ನು ಬಿಡುವ ಪ್ರಶ್ನೆಯೇ ಇಲ್ಲ. ಎಲ್ಲಾ ರೀತಿಯ
ಕ್ರಮ ಜರುಗಿಸುತ್ತೇವೆ. ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಈ ವೇಳೆ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಮಹಾನಗರ ಪಾಲಿಕೆ ಮಾಜಿ ಮೇಯರ್ ಗಳಾದ ಎಸ್. ಟಿ. ವೀರೇಶ್, ಅಜಯ್ ಕುಮಾರ್, ಗಾಯತ್ರಿ ಬಾಯಿ ಖಂಡೋಜಿರಾವ್, ಶ್ರೀನಿವಾಸ್ ಭಟ್, ಶಿವನಗೌಡ ಪಾಟೀಲ್, ಹೆಚ್. ಪಿ. ವಿಶ್ವಾಸ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಹಿಂದೂ ಸಂಘಟನೆಯ ಮುಖಂಡರು, ಕಾರ್ಯಕರ್ತರು, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.