SUDDIKSHANA KANNADA NEWS/DAVANAGERE/DATE:08_10_2025
ಶಿವಮೊಗ್ಗ: ಪತ್ನಿ ಮತ್ತು ಮಕ್ಕಳನ್ನು ಪತಿ ಬಿಟ್ಟು ಹೋದ ಘಟನೆ ಶಿವಮೊಗ್ಗ ತಾಲೂಕಿನ ಬೆನವಳ್ಳಿ ಗ್ರಾಮದಲ್ಲಿ ನಡೆದಿದೆ.
READ ALSO THIS STORY: ಕುರುಬರಿಗೆ ಎಸ್ಟಿ ಮೀಸಲಾತಿ ನೀಡಿದರೆ ವಾಲ್ಮೀಕಿ ಸಮಾಜಕ್ಕೆ ಅನ್ಯಾಯವಾಗಲ್ಲ, ಊಹಾಪೋಹಕ್ಕೆ ಕಿವಿಗೊಡಬೇಡಿ: ಕಾಗಿನೆಲೆ ಶ್ರೀಗಳ ಮನವಿ!
ಬೆನವಳ್ಳಿ ಗ್ರಾಮದ ಉಮಾ ಮಹೇಶ್ ಕಾಣೆಯಾದ ವ್ಯಕ್ತಿ. ಕಳೆದ ಜುಲೈ 1 ರಂದು ಮನೆಯಿಂದ ಹೊರ ಹೋದ ಉಮಾ ಮಹೇಶ್ ಇದುವರೆಗೆ ವಾಪಸ್ ಮನೆಗೆ ಬಂದಿಲ್ಲ. ಇದರಿಂದ ಕುಟುಂಬದವರು, ಸಹೋದರರು, ಸ್ನೇಹಿತರು ಆತಂಕಕ್ಕೆ ಈಡಾಗಿದ್ದಾರೆ. ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ವಾಪಸ್ ಬಾರದಿರುವ ಬಗ್ಗೆ ಹಾಗೂ ಪತ್ತೆಯಾಗದಿರುವ ಹಿನ್ನೆಲೆಯಲ್ಲಿ ಹುಡುಕಾಟ ಮುಂದುವರಿದಿದೆ.
ಚಹರೆ: ಹೆಸರು ಉಮಾ ಮಹೇಶ್, ವಯಸ್ಸು 41, ಕಪ್ಪು ಕೂದಲು, ದುಂಡನೆಯ ಮುಖ, ಸಾಧಾರಣ ಮೈಕಟ್ಟು, ಇಂಗ್ಲೀಷ್ ಮತ್ತು ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದಾಗ ಕಪ್ಪು ನೀಲಿ ನೈಟ್ ಪ್ಯಾಂಟ್ ಮತ್ತು ಬ್ರೌನ್ ಶರ್ಟ್ ಧರಿಸಿರುತ್ತಾರೆ.
ಉಮಾ ಮಹೇಶ್ ಬಗ್ಗೆ ಮಾಹಿತಿ ಇದ್ದರೆ, ನೋಡಿದರೆ ಧನಂಜಯ 9916279520, ಕುಮಾರ 9901878986 ನಂಬರ್ ಗೆ ಸಂಪರ್ಕಿಸುವಂತೆ ಕುಟುಂಬದವರು ಕೋರಿದ್ದಾರೆ.