ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

“ಎಲ್. ಬಸವರಾಜ್ ಕಿಡ್ನಾಪ್ ಮಾಡಿ ಜೈಲಿಗೆ ಹೋಗಿದ್ದ ವ್ಯಕ್ತಿಯಿಂದ ವೋಟ್ ಚೋರಿ ಆರೋಪ ಹಾಸ್ಯಾಸ್ಪದ”: ಯಶವಂತರಾವ್ ಜಾಧವ್ ಗುಡುಗು!

On: October 6, 2025 6:35 PM
Follow Us:
ವೋಟ್ ಚೋರಿ
---Advertisement---

SUDDIKSHANA KANNADA NEWS/DAVANAGERE/DATE:06_10_2025

ದಾವಣಗೆರೆ: ಕಾಂಗ್ರೆಸ್ ಪಕ್ಷದ ಮುಖಂಡರು ವೋಟ್ ಚೋರಿ ಎಂಬ ಅಭಿಯಾನ ಕೇಂದ್ರ ಸರ್ಕಾರದ ವಿರುದ್ಧ ನಡೆಸುತ್ತಿರುವುದನ್ನು ನೋಡಿದರೆ ದರೋಡೆಕೋರರೇ ನೀತಿ ಪಾಠ ಹೇಳಿದಂತಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಆರೋಪಿಸಿದರು.

ಈ ಸುದ್ದಿಯನ್ನೂ ಓದಿ: “ಹಿಂದೂಸ್ತಾನದಲ್ಲಿರಬೇಕಾದರೆ ಹಿಂದೂಗಳು ಹೇಳಿದಂಗೆ ಕೇಳಬೇಕು” ಘೋಷಣೆ: ಎಸ್ಪಿಗೆ ಮುಸ್ಲಿಂ ಮುಖಂಡರು ಕೊಟ್ಟ ದೂರಿನಲ್ಲೇನಿದೆ?
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸಿನ ರಾಷ್ಟ್ರೀಯ ನಾಯಕರಿಂದ ಹಿಡಿದು ಜಿಲ್ಲಾ ನಾಯಕರವರೆಗೆ ಈ ದೇಶದಲ್ಲಿ ಮಾಡಬಾರದ್ದನ್ನೆಲ್ಲಾ ಮಾಡಿ ಅಕ್ರಮ ನಡೆಸಿ ಅಧಿಕಾರ ಮಾಡಿದ ಕಾಂಗ್ರೆಸ್ ನವರು ಇಂದು ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಇಂದಿರಾ ಗಾಂಧಿ ವಿರುದ್ಧ ರಾಜ ನಾರಾಯಣ್ 1971ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ರಾಯಬರೇಲಿ ಕ್ಷೇತ್ರದ ಚುನಾವಣೆಯಲ್ಲಿ ಸೋಲು ಕಾಣುತ್ತಾರೆ. ಆದರೆ ರಾಜನಾರಾರಾಯಣ ಸೋಲನ್ನು ಒಪ್ಪಿಕೊಳ್ಳದೆ 24 ಏಪ್ರಿಲ್ 1971ರಲ್ಲಿ ಅಲಹಾಬಾದ್ ಹೈಕೋರ್ಟ್ ನಲ್ಲಿ ಭ್ರಷ್ಟಾಚಾರದ ಕೇಸ್ ದಾಖಲಿಸಿ ಇಂದಿರಾಗಾಂಧಿ ಚುನಾವಣೆಯಲ್ಲಿ ಸರ್ಕಾರಿ ಅಧಿಕಾರಿಗಳ ವಾಹನ ದುರ್ಬಳಕೆ, ಸರ್ಕಾರಿ ಅಧಿಕಾರಿಗಳಿಂದ ಸಂಪನ್ಮೂಲ ಕ್ರೋಢೀಕರಣ, ಮತದಾರರಿಗೆ ಹಣ ಹಂಚಿಕೆ ಸೇರಿ ಚುನಾವಣಾ ವೆಚ್ಚ 35000 ಸಾವಿರಕ್ಕಿಂತ ಅತಿಯಾದ ಹಣ ಖರ್ಚು ಮಾಡಿರುವ ದಾಖಲೆ ಸಮೇತ ಅಲಹಾಬಾದ್ ಹೈಕೋರ್ಟ್ ಗಮನಕ್ಕೆ ತರುತ್ತಾರೆ. ಇವುಗಳನ್ನೆಲ್ಲ ಪರಿಶೀಲಿಸಿ ಇಂದಿರಾ ಗಾಂಧಿಯವರು ತಪ್ಪಿ ತಸ್ಥರು ಎಂದು ತೀರ್ಮಾನಿಸಿ ರಾಯಬರೇಲಿ ಲೋಕಸಭಾ ಸದಸ್ಯತ್ವದಿಂದ ವಜಾ ಮಾಡಿತ್ತು. ಇದು ಕಾಂಗ್ರೆಸ್ಸಿನ ಇತಿಹಾಸ ಎಂದು ಆರೋಪಿಸಿದರು.

ದಾವಣಗೆರೆ ಜಿಲ್ಲೆಯಲ್ಲಿ 1998ರ ನಗರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಕುತಂತ್ರದಿಂದ ಬಿಜೆಪಿ ನಗರಸಭಾ ಸದಸ್ಯರೂ ಆದ ಪ್ರತಿಷ್ಠಿತ ಮನೆತನದ ಎಲ್. ಬಸವರಾಜ್ ಅವರನ್ನು ಕಿಡ್ನಾಪ್ ಮಾಡಿ ಮತ್ತು ಜೈಲು ಶಿಕ್ಷೆ
ಅನುಭವಿಸಿದ ವೈಕ್ತಿಯೇ ವೋಟ್ ಚೋರಿ ಎಂಬ ಅಭಿಯಾನದ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ್ದು ಹಾಸ್ಯಾಸ್ಪದ ಎಂದು ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ವಿರುದ್ಧ ದೂರಿದರು.

ದಾವಣಗೆರೆ ಜಿಲ್ಲಾ ಉಸ್ತುವಾರಿ ಮಂತ್ರಿ ಎಸ್ ಎಸ್ ಮಲ್ಲಿಕಾರ್ಜುನ್ 1998ರ ಲೋಕಸಭಾ ಚುನಾವಣೆಯಲ್ಲಿ ಅಕ್ರಮಗಳ ಸರಮಾಲೆಯಲ್ಲಿ ಸೃಷ್ಟಿ ಮಾಡಿ ದಾವಣಗೆರೆ ನಗರಕ್ಕೆ ಬೆಂಗಳೂರಿಂದ ಕಾಲ ಪತ್ತರ್ ಎಂಬ ರೌಡಿ ಗ್ಯಾಂಗನ್ನು ಕರಿಸಿ
ದಾವಣಗೆರೆ ಚುನಾವಣೆ ದಿವಸ ಗಲಭೆ ಸೃಷ್ಟಿ ಮಾಡಲು ರೌಡಿಯನ್ನು ಕರೆಸಿದ ವ್ಯಕ್ತಿ ಇಂದು ನಮಗೆ ನೀತಿ ಪಾಠ ಹೇಳುತ್ತಿದ್ದಾರೆ. ಈ ದೇಶದ ಸಂವಿಧಾನವನ್ನೇ ಗಾಳಿಗೆ ತೂರಿ ಈ ಈ ದೇಶದ ಮೇಲೆ ತುರ್ತು ಪರಿಸ್ಥಿತಿಯನ್ನು ಏರಿ ಈ ದೇಶದ ಎಲ್ಲ ಮಹಾನಾಯಕರ ತುರ್ತುಪರಿಸ್ಥಿತಿ ವಿರುದ್ಧ ಹೋರಾಟ ಮಾಡಿದ ಮಹಾನ್ ನಾಯಕರಗಳನ್ನು ಜೈಲಿಗೆ ಹಾಕಿ ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷದ ಅಧಿನಾಯಕಿಯ ಮೊಮ್ಮಗ ಇಂದು ಸಂವಿಧಾನದ ಬಗ್ಗೆ ಮಾತನಾಡುತ್ತಾರೆ. ಇದು ಕಾಂಗ್ರೆಸ್ ಪಕ್ಷದ ಇತಿಹಾಸ. ಇಂತಹ ಕಾಂಗ್ರೆಸ್ ಪಕ್ಷದ ಇತಿಹಾಸವುಳ್ಳ ಜನ ಇಂದು ವೋಟ್ ಚೋರಿ ಎಂಬ ಅಭಿಯಾನವನ್ನು ನಡೆಸುತ್ತಿರುವುದು ನಮ್ಮ ದೇಶದ ದುರಂತವೇ ಸರಿ ಎಂದು ಹೇಳಿದರು.

ಹಿಂದೆ ಏನೆಲ್ಲ ನಡೆದಿದೆ? ಈ ದೇಶದಲ್ಲಿ ಅಕ್ರಮಗಳ ಪಿತಾಮಹರು ಜವಾಹರ್ ಲಾಲ್ ನೆಹರು ಮತ್ತು ಇಂದಿರಾಗಾಂಧಿ. ಎಸ್ಎಸ್ ಮಲ್ಲಿಕಾರ್ಜುನ್ ಅವರು ಇಂಥ ಪಕ್ಷದ ಇತಿಹಾಸ ಹೊಂದಿ ಸಹಿ ಸಂಗ್ರಹ ಮಾಡುತ್ತಿರುವುದು ಈ ದೇಶದ ಮತ್ತು ದಾವಣಗೆರೆಯ ಜನತೆಗೆ ಮಾಡುತ್ತಿರುವ ಅಪಮಾನ. ನೀವು ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಮಾಡಿರುವ ಎಲ್ಲಾ ಅಕ್ರಮಗಳ ಬಗ್ಗೆ ದೇಶ ಮತ್ತು ದಾವಣಗೆರೆ ಜನತೆ ಬಗ್ಗೆ ಕ್ಷಮೆ ಕೇಳಿ ನೀವು ಮಾಡಿರುವ ಪಾಪಕ್ಕೆ ಪ್ರಾಯಶ್ಚಿತ ಮಾಡಿಕೊಳ್ಳಿ. ಆನಂತರ ಮೋದಿಯವರ ಬಗ್ಗೆ ಟೀಕೆ ಮಾಡುವರಂತೆ ಎಂದು ಹೇಳಿದರು,

ಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಅಣಬೇರು ಜೀವನಮೂರ್ತಿ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಮಹಾನಗರ ಪಾಲಿಕೆಯ ನಾಮನಿರ್ದೇಶಿತ ಮಾಜಿ ಸದಸ್ಯ ಶಿವನಗೌಡ ಪಾಟೀಲ್, ಟಿಂಕರ್ ಮಂಜಣ್ಣ ಮತ್ತಿತರರು ಹಾಜರಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

Leave a Comment