SUDDIKSHANA KANNADA NEWS/ DAVANAGERE/DATE:23_09_2025
ದಾವಣಗೆರೆ: ಮಹಿಳೆಯೊಬ್ಬರು ಕಳೆದುಕೊಂಡಿದ್ದ ಚಿನ್ನದ ಒಡವೆಗಳನ್ನು ಮರಳಿಸುವಲ್ಲಿ 112 ಪೊಲೀಸ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
READ ALSO THIS STORY: ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್: ಖಾಸಗಿ ಸಂಸ್ಥೆಯಲ್ಲಿನ ವಿವಿಧ ಹುದ್ದೆಗಳಿಗೆ ನೇರ ಆಯ್ಕೆ ಸಂದರ್ಶನ
ದಾವಣಗೆರೆಯ ಅಕ್ಷತಾ ಎಂಬುವವರು ಸುಮಾರು ಮೂರು ತಿಂಗಳ ಹಿಂದೆ 55 ವರ್ಷ ಮಹಿಳೆ ಜೋಗಮ್ಮ ಮನೆಗೆ ಬಂದಾಗ ಅವರಿಗೆ ಊಟ ಮಾಡಿಸಿ, ಸತ್ಕರಿಸಿ ಒಂದು ಸೀರೆಯನ್ನು ನೀಡಿ ಕಳುಹಿಸಿದ್ದರು,
ಮಾರನೇ ದಿನ ಮನೆಯಲ್ಲಿದ್ದ 22 ಗ್ರಾಂ ಬಂಗಾರದ ಒಡವೆ ಕಾಣಲಿಲ್ಲ. ಒಡವೆಯನ್ನು ಹುಡುಕಿದಾಗ ಜೋಗಮ್ಮಳಿಗೆ ನೀಡಿದ ಸೀರೆಯಲ್ಲಿ ಒಡವೆಯನ್ನು ಇಟ್ಟಿದ್ದು ತಿಳಿದುಬಂದಿದೆ.
ನಿನ್ನೆ ಸಂಜೆ ಅದೇ ಜೋಗಮ್ಮ ತಮ್ಮ ಮನೆಯ ಹತ್ತಿರದ ಬೀದಿಯಲ್ಲಿ ಕಂಡುಬಂದಾಗ ಒಡವೆ ಬಗ್ಗೆ ವಿಚಾರಿಸಿದ್ದಾರೆ. ಜೋಗಮ್ಮ ಒಡವೆ ಯಾವುದೂ ನನ್ನ ಹತ್ತಿರ ಇಲ್ಲವೆಂದು ತಿಳಿಸಿದ್ದಾಗ 112ಗೆ ಕರೆ ಮಾಡಿ ಪೊಲೀಸ್ ಸೇವೆಯನ್ನು ಕೇಳಿದ್ದಾರೆ.
ಹೊಯ್ಸಳದಲ್ಲಿ ಕರ್ತವ್ಯನಿರತ ಆಧಿಕಾರಿಗಳು ಘಟನಾ ಸ್ಥಳಕ್ಕೆ ಬೇಟಿ ನೀಡಿದ್ದು ಜೋಗಮ್ಮಳಿಗೆ ವಿಚಾರಿಸಿ ತಿಳಿಹೇಳಿದಾಗ ಜೋಗಮ್ಮಳು ತಮ್ಮ ಮನೆಯಲ್ಲಿಯೇ ಒಡವೆ ಹಾಗೂ ಸೀರೆ ಇರುವುದಾಗಿಯೂ ಒಡವೆಯನ್ನು ತರಿಸಿಕೊಡುವುದಾಗಿ ಒಪ್ಪಿಕೊಂಡಿದ್ದಾರೆ. ಒಡವೆಯನ್ನು ತರಿಸಿದ ನಂತರ ವಿದ್ಯಾನಗರ ಠಾಣೆಯ ಅಧಿಕಾರಿಗಳ ಸಮಕ್ಷಮದಲ್ಲಿ ಒಡವೆಯನ್ನು ಅಕ್ಷತಾ ಅವರಿಗೆ ನೀಡಿದರು.
ಒಡವೆಗಳನ್ನು ವಾರಾಸುದಾರರಿಗೆ ಹಸ್ತಾಂತರಿಸುವಲ್ಲಿ ಯಶಸ್ವಿಯಾದ 112ಹೊಯ್ಸಳ ವಾಹನ ಕರ್ತವ್ಯ ಅಧಿಕಾರಿಗಳಾದ ತಿಪ್ಪೇಸ್ವಾಮಿ, ಉಮೇಶ್ ಹಾಗೂ ಮಹಿಳಾ ಅಧಿಕಾರಿಗಳನ್ನು ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.