ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಸ್ಮಾರ್ಟ್ ರೋಡ್ ವೀಕ್ಷಿಸಿದ ಸಚಿವರು ಖುಷ್: ನುಡಿದಂತೆ ನಡೆಯುತ್ತೇವೆ, ಕೊಟ್ಟ ಭರವಸೆ ಈಡೇರಿಸುವುದು ನಮ್ಮ ಬದ್ಧತೆ ಎಂದ್ರು ಎಸ್. ಎಸ್. ಮಲ್ಲಿಕಾರ್ಜುನ್

On: September 23, 2025 4:45 PM
Follow Us:
ಎಸ್. ಎಸ್. ಮಲ್ಲಿಕಾರ್ಜುನ್
---Advertisement---

SUDDIKSHANA KANNADA NEWS/ DAVANAGERE/DATE:23_09_2025

ದಾವಣಗೆರೆ: ನಗರದ ಎಂಸಿಸಿ ಬಿ ಬ್ಲಾಕ್ ಗುಂಡಿ ಸ್ಕೂಲ್ ರಸ್ತೆಯಲ್ಲಿ ನಿರ್ಮಿಸಲಾಗಿರುವ ಸ್ಮಾರ್ಟ್ ರೋಡ್ ಗೆ ಚಾಲನೆ ನೀಡಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ತೋಟಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಸಾರ್ವಜನಿಕ ಸೇವೆಗೆ ಲೋಕಾರ್ಪಣೆ ಮಾಡಿದರು. ಈ ವೇಳೆ ಸ್ಮಾರ್ಟ್ ರಸ್ತೆ ನೋಡಿ ಸಂತಸ ವ್ಯಕ್ತಪಡಿಸಿದರು.

READ ALSO THIS STORY: ಏನೂ ಕೆಲಸ ಮಾಡದ ಮಾಜಿ ಸಂಸದರ ಚೇಲಾಗಳ ಮಾತುಗಳಿಗೆ ತಲೆಕೆಡಿಸಿಕೊಳ್ಳಲ್ಲ: ಸಿದ್ದೇಶ್ವರ ವಿರುದ್ಧ ಎಸ್. ಎಸ್. ಮಲ್ಲಿಕಾರ್ಜುನ್ ಗುಟುರು!

ಬಳಿಕ ಮಾತನಾಡಿದ ಸಚಿವರು, ಸ್ಮಾರ್ಟ್ ರಸ್ತೆ ನೋಡುತ್ತಿದ್ದರೆ ಸಿಂಗಾಪುರಕ್ಕೆ ಬಂದಂತ ಅನುಭವವಾಗುತ್ತಿದೆ. ಅಷ್ಟೊಂದು ಸುಂದರವಾಗಿ ರಸ್ತೆ ಕಾಣುತ್ತಿದೆ. ದಾವಣಗೆರೆಯ ಪ್ರಮುಖ ವಾರ್ಡ್ ನಲ್ಲಿ ಇಂಥ ಸ್ಮಾರ್ಟ್ ರಸ್ತೆ
ನಿರ್ಮಾಣ ಆಗಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.

ನಾವು ಕೇವಲ ಭರವಸೆ ಕೊಡುತ್ತಾ ಹೋಗುವುದಿಲ್ಲ. ನಾವು ನುಡಿದಂತೆ ನಡೆಯುತ್ತೇವೆ, ಹೇಳಿದ್ದನ್ನು ಮಾಡಿಯೇ ಮಾಡುತ್ತೇವೆ. ಬೇರೆಯವರ ರೀತಿ ಕೇವಲ ಬಾಯಿ ಮಾತಿನಲ್ಲಿ ಹೇಳುವುದಿಲ್ಲ. ಕಾರ್ಯರೂಪಕ್ಕೆ ತಂದು ಜನರಿಗೆ
ಅನುಕೂಲ ಮಾಡಿಕೊಡುತ್ತೇವೆ. ಇದು ನಮ್ಮ ಬದ್ಧತೆ. ಮಾದರಿ ದಾವಣಗೆರೆ ಜಿಲ್ಲೆಯನ್ನಾಗಿಸುವ ಗುರಿ ಹೊಂದಿದ್ದೇನೆ. ಈ ನಿಟ್ಟಿನಲ್ಲಿ ಕೆಲಸಗಳು ಪ್ರಾರಂಭವಾಗಿವೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಮುಗಿಸುತ್ತೇವೆ. ನಮಗೆ ಜನರಿಗೆ ಒಳ್ಳೆಯದಾಗಬೇಕು ಅಷ್ಟೇ ಎಂದು ಹೇಳಿದರು.

ಸಚಿವನಾದ ಬಳಿಕ ಜಿಲ್ಲೆಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ತಂದಿದ್ದೇವೆ. ಈ ಹಿಂದೆ ಆಡಳಿತ ನಡೆಸಿದ ಬಿಜೆಪಿಯವರು ದಾವಣಗೆರೆಯನ್ನೇ ಹಾಳು ಮಾಡಿದರು. ಅದನ್ನು ಸರಿಪಡಿಸಲು ಸಾಕಷ್ಟು ಕಾಲಾವಕಾಶ ಬೇಕು.
ಹಾಳು ಮಾಡಿದ್ದನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ. ನಾವೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಆಸಕ್ತಿ ವಹಿಸಿದ್ದೇವೆ ಎಂದು ತಿಳಿಸಿದರು.

ನಗರ ಪ್ರದೇಶ ಮಾತ್ರವಲ್ಲ, ಜಿಲ್ಲೆಯಲ್ಲಿನ ಹಾಳಾದ ರಸ್ತೆಗಳು, ಹೆದ್ದಾರಿ ಅಭಿವೃದ್ಧಿ, ಐಟಿಬಿಟಿ ಸೇರಿದಂತೆ ಇನ್ನಿತರ ಯೋಜನೆಗಳ ಕನಸಿದೆ. ಸಾಕಾರಗೊಳಿಸಲು ಎಲ್ಲಾ ರೀತಿಯ ಶ್ರಮ ವಹಿಸಲಾಗುತ್ತಿದೆ. ಜನಸೇವೆಯೇ ಜನಾರ್ದನ ಸೇವೆಯಂತೆ ನಾವು ಕೆಲಸ ಮಾಡುತ್ತೇವೆ. ಜನರು ಕೆಲಸಗಳನ್ನು ಗುರುತಿಸಬೇಕು. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ ಎಂದು ಎಸ್. ಎಸ್. ಮಲ್ಲಿಕಾರ್ಜುನ್ ಅವರು ಮನವಿ ಮಾಡಿದರು.

ಈ ವೇಳೆ ಮಾತನಾಡಿದ ಪಾಲಿಕೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಗಡಿಗುಡಾಳ್ ಮಂಜುನಾಥ್ ಅವರು, ದಾವಣಗೆರೆ ನಗರ ಮತ್ತು ಜಿಲ್ಲೆಯು ಇಷ್ಟೊಂದು ಅಭಿವೃದ್ಧಿ ಕಾಣಲು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಅವಿರತ ಪ್ರಯತ್ನ ಮತ್ತು ಶ್ರಮವೇ ಕಾರಣ. ಅಭಿವೃದ್ಧಿ ವಿಚಾರಕ್ಕೆ ಬಂದರೆ ಮಲ್ಲಣ್ಣ ಅವರು ಎಂದಿಗೂ ರಾಜಿ ಆಗುವುದಿಲ್ಲ. ಕುಂದುವಾಡ ಕೆರೆ, ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದ ಗ್ಲಾಸ್ ಹೌಸ್, ನೀರಾವರಿ ಯೋಜನೆಗಳು, ರಸ್ತೆಗಳ ಕಾಂಕ್ರಿಟೀಕರಣ, ನಗರಕ್ಕೆ ಕುಡಿಯುವ ನೀರಿನ ಪೂರೈಕೆ ಸೇರಿದಂತೆ ನೂರಾರು ಯೋಜನೆಗಳನ್ನು ಕೊಟ್ಟ ನಾಯಕರು. ಅವರು ನಮ್ಮ ಮೇಲಿಟ್ಟಿರುವ ಪ್ರೀತಿ, ವಿಶ್ವಾಸಕ್ಕೆ ಬೆಲೆಯನ್ನೇ ಕಟ್ಟಲು ಸಾಧ್ಯವಿಲ್ಲ. ಇಂಥ ನಾಯಕರು ನಮಗೆ ಸಿಕ್ಕಿರುವುದು ಅದೃಷ್ಟ ಎಂದು ಹೇಳಿದರು.

ಮೂರು ಬಾರಿ ಸಚಿವರಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿರುವ ಮಲ್ಲಿಕಾರ್ಜುನ್ ಅವರು, ತಮಗೆ ವಹಿಸಿದ ಇಲಾಖೆಗಳಲ್ಲಿಯೂ ಪಾರದರ್ಶಕ, ಸುಧಾರಿತ ಕ್ರಮಗಳಿಂದ ರಾಜ್ಯದ ಗಮನ ಸೆಳೆದಿದ್ದಾರೆ. ಸಿಎಂ ಸಿದ್ದರಾಮಯ್ಯರ ಅವರ ಬಳಿ ಎಲ್ಲಾ ಶಾಸಕರ ಕರೆದೊಯ್ದು ಹೆಚ್ಚಿನ ಅನುದಾನ ತರುವಲ್ಲಿ ಶ್ರಮ ವಹಿಸಿದ್ದಾರೆ. ಮುಂಬರುವ ದಿನಗಳಲ್ಲಿ ದಾವಣಗೆರೆಯು ಮತ್ತಷ್ಟು ಅಭಿವೃದ್ಧಿ ಹೊಂದುವುದರಲ್ಲಿ ಅನುಮಾನವೇ ಇಲ್ಲ. ಮಲ್ಲಣ್ಣ ಅವರ ಮೇಲೆ ನಿಮ್ಮ ಪ್ರೀತಿ, ವಿಶ್ವಾಸ ಹಾಗೂ ಆಶೀರ್ವಾದ ಸದಾ ಇರಲಿ ಎಂದು ತಿಳಿಸಿದರು.

ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಯ ಜಂಟಿ ಸಹಯೋಗದೊಂದಿಗೆ ದಾವಣಗೆರೆ ಸ್ಮಾರ್ಟ್ ಸಿಟಿಯು ಅಪ್ಲಿಕೇಷನ್ ಎಂಬ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆಗಾಗಿ ದಾವಣಗೆರೆ ಸ್ಮಾರ್ಟ್ ಹೆಲ್ಪ್ ಅಪ್ಲಿಕೇಶನ್ ಅನ್ನು ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಬಿಡುಗಡೆಗೊಳಿಸಿದರು. ಈ ವೇಳೆ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ, ಈ ವೇಳೆ ಮಹಾನಗರ ಪಾಲಿಕೆಯ ಆಯುಕ್ತೆ ರೇಣುಕಾ, ಪೊಲೀಸ್ ಅಧಿಕಾರಿಗಳು, ಎಂಸಿಸಿ ಬಿ ಬ್ಲಾಕ್ ನ ಹಿರಿಯ ನಾಗರಿಕರು,ಮುಖಂಡರು, ಮಹಿಳೆಯರು ಸೇರಿದಂತೆ ನೂರಾರು ಜನರು ಹಾಜರಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment