SUDDIKSHANA KANNADA NEWS/ DAVANAGERE/DATE:21_09_2025
ದಾವಣಗೆರೆ: ಹೊನ್ನಾಳಿ ಹಿರೇಕಲ್ಮಠ ಮಠದ ಸುಭದ್ರ ಎಂಬ 32 ವರ್ಷದ ಆನೆಯನ್ನು ಉಡುಪಿ ಶ್ರೀ ಕೃಷ್ಣ ಮಠದ ಆಡಳಿತ ಮಂಡಳಿಯು ವಶಪಡಿಸಿಕೊಳ್ಳಲು ಬಂದಾಗ ಹೊನ್ನಾಳಿ ತಾಲೂಕಿನ ಸಹಸ್ರಾರು ಭಕ್ತರು ಶ್ರೀ ಮಠಕ್ಕೆ ಧಾವಿಸಿ, ನಮ್ಮ ಶ್ರೀಮಠದ ಸುಭದ್ರೆ ಆನೆಯನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದು ಪಟ್ಟುಹಿಡಿದರು.
READ ALSO THIS STORY: ದೇವಸ್ಥಾನ, ಹಬ್ಬಕ್ಕೆ ದೇಣಿಗೆ ಕೇಳುವಂತೆ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಅನುದಾನ ಪಡೆಯಿರಿ: ಜಿ. ಬಿ. ವಿನಯ್ ಕುಮಾರ್ ಸಲಹೆ
ಈ ವೇಳೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಸೇರಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಮಾತನಾಡಿ ಸಂಘರ್ಷ ಬೇಡ ಸಾಮರಸ್ಯದಿಂದ ಎಲ್ಲರೂ ನಡೆದುಕೊಳ್ಳೋಣ ಎಂದು ತಿಳಿಸಿದರು.
ನಂತರ ವೇದಿಕೆಯ ಮೇಲೆಯೇ ಅರಣ್ಯ ಸಚಿವರಾದ ಈಶ್ವರ್ ಕಂಡ್ರೆ ಅವರಿಗೆ ತಕ್ಷಣಕ್ಕೆ ದೂರವಾಣಿ ಮೂಲಕ ಸಂಪರ್ಕಿಸಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿಕೊಂಡು ಸುಭದ್ರೆಯನ್ನು ಹೊನ್ನಾಳಿ ಮಠದಲ್ಲಿ ಉಳಿಸುವಂತೆ ಕೇಳಿದಾಗ ಸಚಿವರು ಸಹಮತ ವ್ಯಕ್ತಪಡಿಸಿದರು. ಶ್ರೀ ಮಠದ ಶ್ರೀಗಳ ಅಪೇಕ್ಷೆ ಮತ್ತು ಸಾವಿರಾರು ಭಕ್ತರ ಭಕ್ತಿಯ ಅಪೇಕ್ಷೆ ಮೇರೆಗೆ ಆನೆಯೂ ಈಗ ಹೊನ್ನಾಳಿ ಮಠದಲ್ಲಿ ಉಳಿವಂತೆ ಆಗಿದೆ ಎಂದರು.