ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಎಸ್. ಎಸ್. ಮಲ್ಲಿಕಾರ್ಜುನ್ ಜನ್ಮದಿನ ಪ್ರಯುಕ್ತ ಕೆಟಿಜೆ ನಗರದಲ್ಲಿ ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ

On: September 20, 2025 3:25 PM
Follow Us:
ಎಸ್. ಎಸ್. ಮಲ್ಲಿಕಾರ್ಜುನ್
---Advertisement---

SUDDIKSHANA KANNADA NEWS/ DAVANAGERE/DATE:20_09_2025

ದಾವಣಗೆರೆ: ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ 58ನೇ ಹುಟ್ಟುಹಬ್ಬದ ಪ್ರಯುಕ್ತ ಕೆಟಿಜೆ ನಗರ 27ನೇ ವಾರ್ಡ್ ನಲ್ಲಿ ಮುಖಂಡರು ಹಾಗೂ ಉತ್ತರ ವಲಯ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಶ್ರೀನಿವಾಸ್ ಕಲ್ಪತರು ಅವರ ನೇತೃತ್ವದಲ್ಲಿ ಆಟೋ ನಿಲ್ದಾಣಗಳಲ್ಲಿನ ಆಟೋ ಚಾಲಕರಿಗೆ ಸಮವಸ್ತ್ರ ವಿತರಿಸಲಾಯಿತು.

READ ALSO THIS STORY: ರಕ್ತದಾನ ಅಭಿಯಾನ: ಡಾ. ಪ್ರಭಾ ಮಲ್ಲಿಕಾರ್ಜುನ್ ರಿಂದ ರಕ್ತದಾನ: ಓದಿದ ಕಾಲೇಜಿನಲ್ಲಿ ರಕ್ತದಾನ ಮಾಡಿ ಮಾದರಿಯಾದ ಸಂಸದರು

ಈ ವೇಳೆ ಮಾತನಾಡಿದ ಶ್ರೀನಿವಾಸ್ ಕಲ್ಪತರು ಅವರು, ಎಸ್. ಎಸ್. ಮಲ್ಲಿಕಾರ್ಜುನ್ ಅರವರ ಹುಟ್ಟುಹಬ್ಬದ ಪ್ರಯುಕ್ತ ಲೋಕಸಭಾ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಸಲಹೆ ಮೇರೆಗೆ ಕೇಕ್, ಹಾರ, ಶಾಲು ಸೇರಿದಂತೆ ಇತರೆ ಅನಗತ್ಯಕ್ಕೆ ಖರ್ಚು ಮಾಡದೇ ಅನ್ನ ಸಂತರ್ಪಣೆ ಹಾಗು ಸಾಮಾಜಿಕ ಕಾರ್ಯಕ್ರಮ ಆಯೋಜನೆ ಮಾಡಬೇಕೆಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಆಟೋ ಚಾಲಕರಿಗೆ ಸಮವಸ್ತ್ರ ವಿತರಿಸಲಾಯಿತು
ಎಂದು ತಿಳಿಸಿದರು.

ದೇಶದಲ್ಲಿ ಆಟೋ ಚಾಲಕರು ಕೂಡ ಸಹೋದರರಿದ್ದಂತೆ. ಯಾವಾಗಲೂ ನಮ್ಮ ಹಾಗೂ ಸಮಾಜದ ಜೊತೆಯಲ್ಲಿ ಇರುತ್ತಾರೆ. ಸಾರಿಗೆ ವ್ಯವಸ್ಥೆಯ ಒಂದು ಅವಿಭಾಜ್ಯ ಅಂಗ. ಎಸ್ ಎಸ್ ಮಲ್ಲಿಕಾರ್ಜುನ್ ರವರು ಆಟೋ ಮಾಲೀಕರು ಹಾಗು ಚಾಲಕಾರಿಗಾಗಿ ಆಟೋ ಕಾಲೋನಿ ಎಂದು ನಾಮಕರಣ ಮಾಡಿ ಸಾವಿರಾರು ಆಶ್ರಯ ಮನೆಗಳನ್ನು ನೀಡಿದ ಧೀಮಂತ ನಾಯಕರು ಎಂದು ಬಣ್ಣಿಸಿದರು.

ಕಾರ್ಯಕ್ರಮಕ್ಕೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಮಾತನಾಡಿ ಈ ಒಂದು ವಿಭಿನ್ನ ಕಾರ್ಯಕ್ರಮ ಆಯೋಜಿಸಿರುವ ಶ್ರೀನಿವಾಸ್ ಕಲ್ಪತರು ಅವರ ಯೋಚನೆ ತುಂಬಾ ಚೆನ್ನಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಉತ್ತರ ವಲಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಜಿ. ಶಿವಕುಮಾರ್ ಮಾತನಾಡಿ ನಮ್ಮ ಅಣ್ಣಾ ತಮ್ಮಂದಿರ ಹಾಗೆ ಇರುವ ಆಟೋ ಚಾಲಕರು ನಮ್ಮ ಜೀವನದಲ್ಲಿ ತುಂಬಾ ಅವಶ್ಯಕ. ಅವರು ಇಲ್ಲದೇ ಸಾರಿಗೆ ವ್ಯವಸ್ಥೆ ಇಲ್ಲ. ಹಾಗಾಗಿ ಆಟೋ ಚಾಲಕರು ನಮ್ಮ ದೇಶದ ಒಂದು ಆಸ್ತಿ ಎಂದು ಬಣ್ಣಿಸಿದರು

ಮಹಾನಗರ ಪಾಲಿಕೆ ಮಾಜಿ ವಿರೋಧ ಪಕ್ಷದ ನಾಯಕ ಡಿ. ಎನ್. ಜಗದೀಶ್ ಮಾತನಾಡಿ, ಇನ್ನು ಮುಂದಿನ ದಿನಗಳಲ್ಲಿ ಅಪಘಾತವಾದಾಗ, ಹಾವು ಕಚ್ಚಿದಾಗ, ಹಾರ್ಟ್ ಅಟ್ಟ್ಯಾಕ್ ಆದಾಗ ತುರ್ತು ಚಿಕಿತ್ಸೆ ಹೇಗೆ ನೀಡಬೇಕೆಂದು ನಮ್ಮ ವಾರ್ಡ್ ನಲ್ಲಿ ತರಬೇತಿಯನ್ನು ನೀಡುವ ಒಂದು ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದು ಹೇಳಿದರು.

ಕನ್ನಡಪರ ಹೋರಾಟಗಾರ ನಾಗೇಂದ್ರಪ್ಪ ಬಂಡಿಕರ, ವಾರ್ಡ್ ಅಧ್ಯಕ್ಷ ಗೊಣ್ಣೆಪ್ಪ, ಎಸ್. ಮಾನು, ಅಜಯ್, ಚೈತನ್ಯ ಕುಮಾರ, ಯೋಗೇಶ್, ಪ್ರದೀಪ್ ಸುಲೇಮಾನ್, ಅಕ್ಬರ್, ನಾಗರಾಜ್, ಪರಶುರಾಮ್, ಧರ್ಮರಾಜ್, ಭಾಸ್ಕರ್, ರಾಂಪಾ, ಬಸವರಾಜ್, ಶಂಕರ್, ಬಸವರಾಜ್, ದುಗ್ಗಪ್ಪ, ತಿಪ್ಪೇಶ್, ಗಿಡ್ಡಪ್ಪ ಹಾಗೂ ಆಟೋ ಚಾಲಕರು ಹಾಜರಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ರಾಶಿ

ಬುಧವಾರದ ರಾಶಿ ಭವಿಷ್ಯ 15 ಅಕ್ಟೋಬರ್ 2025: ಈ ರಾಶಿಯವರ ಯಾವುದೇ ಕೆಲಸ ಪ್ರಯತ್ನಿಸಿದರೂ ಕೈಗೂಡುತ್ತಿಲ್ಲ ಯಾಕೆ?

ಯುವತಿ

ದುರ್ಗಾಪುರ ಯುವತಿ ಮೇಲೆ ಅ*ತ್ಯಾಚಾರಕ್ಕೆ ಸಾಥ್ ಕೊಟ್ಟಿದ್ದ ಸಹಪಾಠಿ ಸೆರೆ: ಬಂಧಿತರ ಸಂಖ್ಯೆ 6ಕ್ಕೇರಿಕೆ, ಸ್ಫೋಟಕ ಮಾಹಿತಿ ಬಯಲಿಗೆ!

ಚನ್ನಗಿರಿ

ಚನ್ನಗಿರಿ ಪಟ್ಟಣ ಸಮೀಪದ ಜೆ. ಹೆಚ್. ಪಟೇಲ್ ನಗರದಲ್ಲಿ ರಾತ್ರಿ ವೇಳೆ ಎಸ್ಪಿ ಭೇಟಿ: ಮನೆ ಗೋಡೆ ಮೇಲೆ ಉಮಾ ಪ್ರಶಾಂತ್ ಸ್ಟಿಕ್ಕರ್ ಅಂಟಿಸಿದ್ಯಾಕೆ?

ಧರ್ಮಸ್ಥಳ

ಕಾಂಗ್ರೆಸ್ ಜೊತೆ ಶಾಮೀಲಾಗಿಲ್ಲವಾದರೆ ಬಿಜೆಪಿ ಕಚೇರಿಗೆ ಬಂದು ಧರ್ಮಸ್ಥಳದ ಮಂಜುನಾಥ ಸ್ವಾಮಿ ಮೇಲೆ ಆಣೆ ಮಾಡಿ: ಕೃಷ್ಣಮೂರ್ತಿ ಪವಾರ್ ಪಂಥಾಹ್ವಾನ

ವ್ಯಾಪಾರಿ

ಬೀದಿ ಬದಿ ವ್ಯಾಪಾರಿಗಳಿಗೆ ಗುಡ್ ನ್ಯೂಸ್: ಆತ್ಮ ನಿರ್ಭರ್ ಯೋಜನೆಯಡಿ ವಿವಿಧ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ವಿದ್ಯಾರ್ಥಿ

ಇಂಜಿನಿಯರಿಂಗ್ ಮತ್ತು ತಾಂತ್ರಿಕ ಕೋರ್ಸ್ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ: ಕೃತಕ ಬುದ್ದಿಮತ್ತೆ ಭವಿಷ್ಯದ ಕಾರ್ಯಪಡೆ ಕಾರ್ಯಾಗಾರ

Leave a Comment