ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಭದ್ರ ಬಲದಂಡೆ ನಾಲೆಗೆ ಧಕ್ಕೆ ಮಾಡಿ ಅಚ್ಚುಕಟ್ಟು ರೈತರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಿ ನೀರು ಕೊಡಲಿ: ಡಾ. ಜಿ. ಎಂ. ಸಿದ್ದೇಶ್ವರ

On: September 13, 2025 5:10 PM
Follow Us:
ಭದ್ರ
---Advertisement---

SUDDIKSHANA KANNADA NEWS/ DAVANAGERE/DATE:13_09_2025

ದಾವಣಗೆರೆ: ಭದ್ರ ಬಲದಂಡೆ ನಾಲೆಗೆ ಧಕ್ಕೆ ಮಾಡಿ, ಮುಂದೆ ದಾವಣಗೆರೆ, ಶಿವಮೊಗ್ಗ ಹಾಗೂ ವಿಜಯನಗರ ಜಿಲ್ಲೆಯ ಅಚ್ಚುಕಟ್ಟು ಭಾಗದ ರೈತರಿಗೆ ತೊಂದರೆಯಾಗದಂತೆ ಸರ್ಕಾರ ಎಚ್ಚರ ವಹಿಸಿ ನೀರು ಕೊಡಲಿ. ಹರಿಸಿದ ಪ್ರಮಾಣದಷ್ಟೇ ನೀರನ್ನು ಭದ್ರಾಗೆ ತುಂಬಿಸುವ ಕೆಲಸವೂ ಆಗಲಿ ಎಂದು ಕೇಂದ್ರದ ಮಾಜಿ ಸಚಿವ ಡಾ. ಜಿ. ಎಂ. ಸಿದ್ದೇಶ್ವರ ಆಗ್ರಹಿಸಿದರು.

READ ALSO THIS STORY: ದೇಶಕ್ಕೆ ಅನ್ನ ಕೊಡುವ ರೈತರನ್ನು ಬದುಕಿಸುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ: ಡಿ.ಕೆ.ಶಿವಕುಮಾರ್

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಬಿಆರ್ ಪಿಯಲ್ಲಿನ ರೈತರ ಜೀವನಾಡಿ ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

60 ಕಿ.ಮೀ. ದಾವಣಗೆರೆವರೆಗೆ ಬಲಭಾಗದ ಚಾನಲ್ ಇದ್ದು, 70 ಕಿ.ಮೀ. ಮಲೇಬೆನ್ನೂರಿಗೆ ಇದೆ. ಇದು ಕೊನೆಯ ಭಾಗದ ರೈತರಿಗೆ ನೀರು ಸಿಗುವುದಿಲ್ಲ ಎನ್ನುವ ಕೂಗು ಮೊದಲಿನಿಂದಲೂ ಇದ್ದು, ಈ ರೀತಿಯಾಗಬಾರದು ಎನ್ನುವ ದೃಷ್ಠಿಯಿಂದ ಆಗ ಸಿಎಂ ಆಗಿದ್ದ ಬಿ. ಎಸ್. ಯಡಿಯೂರಪ್ಪನವರು ಭದ್ರನಾಲಾ ಆಧುನೀಕರಣಕ್ಕೆ 923 ಕೋಟಿ ರೂಪಾಯಿ ಅನುದಾನವನ್ನು ನೀಡಿ, ಕೊನೆಯ ಭಾಗದ ರೈತರಿಗೂ ನೀರು ತಲುಪುವ ಕೆಲಸವನ್ನು ಮಾಡಿದ್ದರು. ಆದರೆ ಕೆಲವು ಭಾಗಗಳಲ್ಲಿ ಇನ್ನೂ ಕೂಡ ನೀರು ತಲುಪುತ್ತಿಲ್ಲ. ಈ ಬಾರಿ ಭದ್ರ ಜಲಾಶಯವು ತುಂಬಿ ತುಳುಕುತ್ತಿದ್ದು, ಈಗ ಹರಿದಿದ್ದಕ್ಕಿಂತ ಹೆಚ್ಚು ಹರಿಯುವ ಸೂಚನೆ ಇದೆ ಎಂದು ತಿಳಿಸಿದರು.

ಈ ಭಾಗವಲ್ಲದೆ ದೇಶದ ಅನೇಕ ಕಡೆ ಜಲಪ್ರಳಯವಾಗುತ್ತಿದ್ದು ಅದನ್ನು ನಾವು ಗಮನಿಸಿದ್ದೇವೆ. ದಾವಣಗೆರೆ ಜಿಲ್ಲೆಯೂ ಮಧ್ಯಭಾಗದಲ್ಲಿದ್ದು, ಆ ರೀತಿಯ ಯಾವುದೇ ಅಹಿತಕರ ಘಟನೆಗಳು ಆಗದೇ ಸುಖಕರವಾಗಿರಬಹುದು ಎಂದು ಹೇಳಿದರು,

ಈ ಸಂಧರ್ಭದಲ್ಲಿ ವಿಧಾನ ಪರಿಷತ್ ವಿಪಕ್ಷದ ಮುಖ್ಯಸಚೇತಕರಾದ ಎನ್. ರವಿಕುಮಾರ್, ವಿಧಾನಪರಿಷತ್ ಸದಸ್ಯರಾದ ಕೆ.ಎಸ್. ನವೀನ್, ಮಾಜಿ ಶಾಸಕ ಹೆಚ್.ಪಿ. ರಾಜೇಶ್, ಮುಖಂಡರಾದ ಗಾಯಿತ್ರಿ ಸಿದ್ದೇಶ್ವರ, ದೂಡಾ ಮಾಜಿ ಅಧ್ಯಕ್ಷರಾದ ಅಧ್ಯಕ್ಷರಾದ ಯಶವಂತ್‌ರಾವ್ ಜಾಧವ್, ಎ.ವೈ. ಪ್ರಕಾಶ್, ಎಸ್.ಎಂ. ವೀರೇಶ್ ಹನಗವಾಡಿ, ಅಣಬೇರು ಜೀವನಮೂರ್ತಿ, ಯುವಮುಖಂಡರಾದ ಜಿ.ಎಸ್. ಅನಿತ್, ಬಿ.ಎಸ್. ಜಗದೀಶ್, ರಾಜ್ಯ ಎಸ್.ಟಿ. ಮೋರ್ಚಾ ಉಪಾಧ್ಯಕ್ಷರಾದ ಶ್ರೀನಿವಾಸ್ ದಾಸಕರಿಯಪ್ಪ, ಶಾಂತರಾಜ ಪಾಟೀಲ್, ಎ.ಬಿ. ಹನುಮಂತಪ್ಪ, ಚನ್ನಪ್ಪ, ಹರಿಹರ ಗ್ರಾಮಾಂತರ ಅಧ್ಯಕ್ಷ ಲಿಂಗರಾಜ್ ಹಿಂಡಸಘಟ್ಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಐರಣಿ ಅಣ್ಣೇಶ್, ಮಾಜಿ ಜಿ.ಪಂ. ಅಧ್ಯಕ್ಷರಾದ ದೀಪಾ ಜಗದೀಶ್, ಆರುಂಡಿ ನಾಗರಾಜ್, ಚನ್ನಪ್ಪ, ಮಾಜಿ ಮೇಯರ್ ವಸಂತ್‌ಕುಮಾರ್, ಮಾಯಕೊಂಡ ಜಿ.ಎಸ್. ಶ್ಯಾಮ್, ಬಿ.ಟಿ. ಸಿದ್ದಪ್ಪ, ರಮೇಶ್, ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ರೇಖಾ ಗಂಡುಗಾಳೆ, ಗೌರಮ್ಮ ಗೀರೀಶ್, ಉಮಾ ಪ್ರಕಾಶ್, ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳು, ಮಾಜಿ ಜಿ.ಪಂ. ಸದಸ್ಯರುಗಳು ಸೇರಿದಂತೆ ಸಹಕಾರಿ ಧುರೀಣರು ಮತ್ತು ಆನೇಕ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಯುವತಿ

ದುರ್ಗಾಪುರ ಯುವತಿ ಮೇಲೆ ಅ*ತ್ಯಾಚಾರಕ್ಕೆ ಸಾಥ್ ಕೊಟ್ಟಿದ್ದ ಸಹಪಾಠಿ ಸೆರೆ: ಬಂಧಿತರ ಸಂಖ್ಯೆ 6ಕ್ಕೇರಿಕೆ, ಸ್ಫೋಟಕ ಮಾಹಿತಿ ಬಯಲಿಗೆ!

ಚನ್ನಗಿರಿ

ಚನ್ನಗಿರಿ ಪಟ್ಟಣ ಸಮೀಪದ ಜೆ. ಹೆಚ್. ಪಟೇಲ್ ನಗರದಲ್ಲಿ ರಾತ್ರಿ ವೇಳೆ ಎಸ್ಪಿ ಭೇಟಿ: ಮನೆ ಗೋಡೆ ಮೇಲೆ ಉಮಾ ಪ್ರಶಾಂತ್ ಸ್ಟಿಕ್ಕರ್ ಅಂಟಿಸಿದ್ಯಾಕೆ?

ಧರ್ಮಸ್ಥಳ

ಕಾಂಗ್ರೆಸ್ ಜೊತೆ ಶಾಮೀಲಾಗಿಲ್ಲವಾದರೆ ಬಿಜೆಪಿ ಕಚೇರಿಗೆ ಬಂದು ಧರ್ಮಸ್ಥಳದ ಮಂಜುನಾಥ ಸ್ವಾಮಿ ಮೇಲೆ ಆಣೆ ಮಾಡಿ: ಕೃಷ್ಣಮೂರ್ತಿ ಪವಾರ್ ಪಂಥಾಹ್ವಾನ

ವ್ಯಾಪಾರಿ

ಬೀದಿ ಬದಿ ವ್ಯಾಪಾರಿಗಳಿಗೆ ಗುಡ್ ನ್ಯೂಸ್: ಆತ್ಮ ನಿರ್ಭರ್ ಯೋಜನೆಯಡಿ ವಿವಿಧ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ವಿದ್ಯಾರ್ಥಿ

ಇಂಜಿನಿಯರಿಂಗ್ ಮತ್ತು ತಾಂತ್ರಿಕ ಕೋರ್ಸ್ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ: ಕೃತಕ ಬುದ್ದಿಮತ್ತೆ ಭವಿಷ್ಯದ ಕಾರ್ಯಪಡೆ ಕಾರ್ಯಾಗಾರ

ತ್ಯಾಜ್ಯ

ನರಕ ಚರ್ತುದರ್ಶಿಯಂದು ಕಸ ಹೊರಗೆ ಎಸೆಯಬೇಡಿ, ಪ್ರತ್ಯೇಕವಾಗಿ ತ್ಯಾಜ್ಯ ಸಂಗ್ರಹಣಾ ವಾಹನಗಳಿಗೆ ನೀಡಿ

Leave a Comment