ದಾವಣಗೆರೆ: ಪ್ರಸಕ್ತ ಸಾಲಿಗೆ ಆಯವ್ಯಯ ಭಾಷಣದ ಕಂಡಿಕೆ ಸಂಖ್ಯೆ-221 ರಲ್ಲಿ ಘೋಷಿಸಿರುವಂತೆ ಅಲ್ಪಸಂಖ್ಯಾತರ ವಿವಿಧ ವಸತಿ ಶಾಲೆ ಹಾಗೂ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ವಾರದಲ್ಲಿ 2 ದಿನ 1 ಗಂಟೆ ಕಾಲ 6 ತಿಂಗಳಿಗೆ 48 ಬೋಧನಾ ಅವಧಿಗಳಲ್ಲಿ “ಸ್ವಯಂ ರಕ್ಷಣಾ ಕೌಶಲ್ಯ ಕರಾಟೆ“ ತರಬೇತಿಯನ್ನು ನೀಡಲು ಅರ್ಹ ತರಬೇತಿ ಸಂಸ್ಥೆಗಳಿಂದ ಮಹಿಳಾ ಕರಾಟೆ ತರಬೇತಿದಾರರನ್ನು ಒದಗಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
READ ALSO THIS STORY: ಬೆಂಗಳೂರಿನಲ್ಲಿ 18,000 ರೂ.ನಲ್ಲೇ ಬಿಂದಾಸ್ ಲೈಫ್: ದುಬೈನಲ್ಲಿ ಹೆಚ್ಚು ದುಡಿದ್ರೂ ಇಲ್ಲ ಸಂತೋಷ, ನೆಮ್ಮದಿ!
ಸೆ.20 ರವರೆಗೆ ಅಗತ್ಯ ದಾಖಲೆಯೊಂದಿಗೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, #44, `ಎ’ ಬ್ಲಾಕ್, 2ನೇ ಮಹಡಿ, ಜಿಲ್ಲಾಡಳಿತ ಭವನ, ಕರೂರು ಕ್ರಾಸ್, ಹರಿಹರ ರಸ್ತೆ, ದಾವಣಗೆರೆ ಇಲ್ಲಿಗೆ ಅರ್ಜಿ ಸಲ್ಲಿಸಬೇಕೆಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ತಾತ್ಕಾಲಿಕ ಪಟಾಕಿ ಮಾರಾಟ ಮಳಿಗೆ ನಿರ್ಮಿಸುವ ಕುರಿತು ಸಭೆ:
ಪ್ರಸಕ್ತ ಸಾಲಿನ ದೀಪಾವಳಿ ಹಬ್ಬದ ಪ್ರಯುಕ್ತ ತಾತ್ಕಾಲಿಕ ಪಟಾಕಿ ಮಾರಾಟ ಮಳಿಗೆ ನಿರ್ಮಿಸಲು ಸ್ಥಳ ಗುರುತಿಸುವ ಕುರಿತು ಹಾಗೂ ತೆಗದುಕೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಕುರಿತು ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 15 ರಂದು ಬೆಳಿಗ್ಗೆ 11 ಗಂಟೆಗೆ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಸಭೆ ಆಯೋಜಿಸಲಾಗಿದೆ.