SUDDIKSHANA KANNADA NEWS/ DAVANAGERE/DATE:04_09_2025
ಅಲಿಗಢ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಅಲಿಗಢದಲ್ಲಿ ಪತಿಯೊಂದಿಗೆ ಜಗಳವಾಡಿದ ನಂತರ ಪತ್ನಿ ತನ್ನ ಎರಡು ಅಂತಸ್ತಿನ ಮನೆಯ ಟೆರೇಸ್ನಿಂದ ಜಿಗಿದು ಆಸ್ಪತ್ರೆಗೆ ದಾಖಲಾಗಿದ್ದಾರೆ.
READ ALSO THIS STORY: ಜಿ ಎಸ್ ಟಿ 2.0 ಗೃಹೋಪಯೋಗಿ ವಸ್ತುಗಳು ಅಗ್ಗ: ಮಧ್ಯಮ ವರ್ಗದವರಿಗೆ ಏನೆಲ್ಲಾ ಲಾಭ?
ದುರಂತ ಎಂದರೆ ಪತ್ನಿಗೆ ಪತಿಯು ಕಳಗೆ ಬೀಳು, ಕೆಳಗೆ ಬೀಳು ಎಂದಿದ್ದಾನೆ. ಆದರೆ ಕೊನೆಗೆ ಆಕೆಯೂ ಹಾಗೆ ಮಾಡುತ್ತಾಳೆ. ಆಕೆ ನೆಲಕ್ಕೆ ಬಿದ್ದಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದಾಳೆ.
ಪೊಲೀಸರ ಪ್ರಕಾರ, ಗೊಂಡಾ ಪ್ರದೇಶದ ಡಕೌಲಿ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ. “ಪತಿಯು ಪತ್ನಿಗೆ ಹಾರು ಎಂದ ಬಳಿಕ ಕೆಳಗಡೆ ಬಿದ್ದಿದ್ದಾಳೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ನಾವು ಆಕೆಯ ಹೇಳಿಕೆಯನ್ನು ದಾಖಲಿಸಿದ್ದೇವೆ ಮತ್ತು ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ” ಎಂದು ವೃತ್ತ ಅಧಿಕಾರಿ ಮಹೇಶ್ ಕುಮಾರ್ ಹೇಳಿದ್ದಾರೆ.
ಪತಿ ಮಹಿಳೆಯನ್ನು ಜಿಗಿಯಲು ಪದೇ ಪದೇ ಕೇಳುತ್ತಿರುವುದನ್ನು ವೀಡಿಯೊದಲ್ಲಿ ರೆಕಾರ್ಡ್ ಆಗಿದೆ. ಆಕೆ ಬಲವಾಗಿ ಇಳಿದಾಗ, ಪತಿಯು ಆಕೆಯನ್ನು ಮತ್ತೆ ಥಳಿಸಿದ್ದಾನೆ. ಈ ವೇಳೆ ಮಗುವೊಂದು “ಮಮ್ಮಿ ಮಮ್ಮಿ” ಎಂದು ಅಳುವುದು ಕೇಳುತ್ತದೆ. ಒಟ್ಟಿನಲ್ಲಿ ಪತಿ ಪತ್ನಿಯ ಜಗಳ ಟೆರೇಸ್ ಮೇಲಿಂದ ಹಾರಿ ಬೀಳುವವರೆಗೆ ಎಂಬಂತಾಗಿದೆ.