ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ದಾವಣಗೆರೆ ಜಿಲ್ಲೆಯಲ್ಲಿ ಡಿಜೆ ಸಿಸ್ಟಂ ಬಳಕೆ ನಿಷೇಧ ನಿರ್ಧಾರದಲ್ಲಿ ಬದಲಾವಣೆ ಇಲ್ಲವೇ ಇಲ್ಲ: ಡಿಸಿ ಗಂಗಾಧರ ಸ್ವಾಮಿ ಖಡಕ್ ಮಾತು!

On: September 3, 2025 8:17 PM
Follow Us:
ಗಣೇಶ
---Advertisement---

SUDDIKSHANA KANNADA NEWS/ DAVANAGERE/DATE:03_09_2025

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಸಿಸ್ಟಂ ಬಳಕೆಗೆ ಅವಕಾಶ ನೀಡುವುದಿಲ್ಲ. ಈಗಿರುವ ಆದೇಶ ಮುಂದುವರಿಯುತ್ತದೆ ಎಂದು ಜಿಲ್ಲಾಧಿಕಾರಿ ಜಿ. ಎಂ. ಗಂಗಾಧರ ಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: “ಪೊಮೆರೇನಿಯನ್ ನಾಯಿ”ಗೆ ಎಸ್ಪಿ ಹೋಲಿಸಿದ್ದು ಬಿ. ಪಿ. ಹರೀಶ್ ಮನಸ್ಥಿತಿ ತೋರಿಸುತ್ತೆ: ಡಾ. ಪ್ರಭಾ ಮಲ್ಲಿಕಾರ್ಜುನ್ ತಿರುಗೇಟು!

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಣೇಶೋತ್ಸವ ಮೆರವಣಿಗೆ ವೇಳೆ ಯಾವುದೇ ಕಾರಣಕ್ಕೂ ಡಿಜೆ ಸಿಸ್ಟಂ ಬಳಕೆಗೆ ಅನುಮತಿ ನೀಡುವುದಿಲ್ಲ. ವಿನೋಬನಗರದ ವರಸಿದ್ಧಿ ವಿನಾಯಕ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಯು ಗುರುವಾರ ನಡೆಯಲಿದ್ದು, ಇದಕ್ಕೂ ಅನುಮತಿ ಕೊಟ್ಟಿಲ್ಲ. ಯಾವ ಗಣೇಶೋತ್ಸವ ಮೆರವಣಿಗೆಗೂ ಡಿಜೆ ಸಿಸ್ಟಂಗೆ ಅನುಮತಿ ಕೊಡುವುದಿಲ್ಲ, ಮುಂದೆಯೂ ಇಲ್ಲ ಎಂದು ಸ್ಪಷ್ಟನೆ ನೀಡಿದರು.

ನಮ್ಮ ಕೆಲಸ ಮಾತನಾಡುತ್ತದೆ. ನಾನು ಹೆಚ್ಚು ಮಾತನಾಡಲ್ಲ. ಡಿಜೆ ನೀಡುವ ವಿಚಾರದಲ್ಲಿನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಜಿಲ್ಲಾಡಳಿತ ತೆಗೆದುಕೊಂಡಿರುವ ನಿರ್ಧಾರಕ್ಕೆ ಬದ್ಧ ಎಂದು ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.

ಇದು ಒಬ್ಬರ ನಿರ್ಧಾರ ಅಲ್ಲ. ಜಿಲ್ಲಾ ಪೊಲೀಸ್ ಇಲಾಖೆ, ಸಮಾಜದ ಹಿರಿಯ ಮುಖಂಡರ ಜೊತೆ ಸಮಾಲೋಚನೆ ನಡೆಸಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ನಾವೆಲ್ಲರೂ ಸೇರಿ ಒಟ್ಟಾಗಿ ತೆಗೆದುಕೊಂಡ ನಿರ್ಧಾರ ಆಗಿದ್ದು, ಬದಲಾಯಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಸರ್ಕಾರದ ಆದೇಶ ಪಾಲನೆ ಮಾಡುತ್ತೇವೆ. ಜನರ ಆರೋಗ್ಯ ದೃಷ್ಟಿ ಗಮನದಲ್ಲಿಟ್ಟುಕೊಳ್ಳಬೇಕು. ಮನೋಬಲ, ಮನಸ್ಥಿತಿ ಕಾಪಾಡಲೇಬೇಕು. ಅಧಿಕಾರಿಯಾಗಿ ಹೆಚ್ಚು ಮಾತನಾಡಲು ಹೋಗಲ್ಲ. ನಮ್ಮ ಕಾರ್ಯ ಮಾತನಾಡಬೇಕೇ ಹೊರತು ಮಾತು ಮಾತನಾಡಲ್ಲ ಎಂದು ಗಂಗಾಧರ ಸ್ವಾಮಿ ಹೇಳಿದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ರಾಶಿ

ಈ ರಾಶಿಯ ರಿಯಲ್ ಎಸ್ಟೇಟ್ ವ್ಯವಹಾರಸ್ತರು ಲಾಭದ ಮೇಲೆ ಲಾಭ ಗಳಿಸುವರು, ಈ ರಾಶಿಯವರ ಈ ಬಾರಿ ಎಂಗೇಜ್ಮೆಂಟ್ ಫಿಕ್ಸ್

ಪ್ರಿಯಾಂಕ್ ಖರ್ಗೆ

ನಿಮ್ಮ ಮಕ್ಕಳಿಗೆ ಗಣವೇಷ, ತ್ರಿಶೂಲ ದೀಕ್ಷೆ ಯಾವಾಗ? ಯಾವಾಗ ಗೋಮೂತ್ರ ಸೇವಿಸುತ್ತಾರೆ?: ಬಿಜೆಪಿ ನಾಯಕರಿಗೆ ಪ್ರಿಯಾಂಕ್ ಖರ್ಗೆ ಪ್ರಶ್ನೆಗಳ ಸುರಿಮಳೆ!

ಪ್ರಿಯಾಂಕ್ ಖರ್ಗೆ

1800 ಕೋಟಿ ರೂ. ಕಪ್ಪ ಕೊಟ್ಟಿದ್ದ ಪೂಜ್ಯ ತಂದೆಯವರ ಮಾತು ಕಿವಿಗೊಟ್ಟು ಕೇಳಿ ಬಿ. ವೈ ರಾಘವೇಂದ್ರ ಮಾತನಾಡಲಿ: ಪ್ರಿಯಾಂಕ್ ಖರ್ಗೆ ಟಾಂಗ್!

ದೀಪಾವಳಿ

ದೀಪಾವಳಿ ಹಬ್ಬದ ವೇಳೆ ನಿಷೇಧಿತ, ಸೂಕ್ಷ್ಮ ಪ್ರದೇಶಗಳಲ್ಲಿ ಪಟಾಕಿ ಹಚ್ಚಬೇಡಿ: ಪೊಲೀಸ್ ಇಲಾಖೆ ಸೂಚನೆ

ದೀಪಾವಳಿ

ದೀಪಾವಳಿ ವೇಳೆ ಪಟಾಕಿ, ಸಿಡಿಮದ್ದು ಸಿಡಿಸುವಾಗ ಯಾವೆಲ್ಲಾ ಜಾಗ್ರತೆ ವಹಿಸಬೇಕು? ಕಣ್ಣಿಗೆ ಹಾನಿ ಆದ್ರೆ ಏನು ಮಾಡಬೇಕು?

ಸೈನಿಕ

ಎಸ್ ಎಸ್ ಎಲ್ ಸಿ, ಪಿಯುಸಿ ಓದಿದವರಿಗೆ ಭರ್ಜರಿ ಉದ್ಯೋಗಾವಕಾಶ: 1426 ಸೈನಿಕ ಹುದ್ದೆಗಳಿಗೆ ವಾಕ್-ಇನ್ ಸಂದರ್ಶನ

Leave a Comment