ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Davanagere: ನ್ಯಾಯಕ್ಕೆ ಸಂದ ಜಯ, ಆದೇಶ ಪ್ರತಿ ಸಿಕ್ಕ ಬಳಿಕ ಮಾತನಾಡ್ತೇನೆ, ಕಾದು ನೋಡಿ, ಯಾರ್ಯಾರು ಏನೇನೂ ಮಾಡಿದ್ದಾರೆ ಅಂತಾ ಎಲ್ಲವನ್ನೂ ಹೇಳ್ತೇನೆ: ಎಸ್. ಎಸ್. ಮಲ್ಲಿಕಾರ್ಜುನ್ ಗುಡುಗು

On: October 9, 2023 10:57 AM
Follow Us:
S. S. MALLIKARJUN
---Advertisement---

SUDDIKSHANA KANNADA NEWS/ DAVANAGERE/ DATE:09-10-2023

ದಾವಣಗೆರೆ  (Davanagere) : ನ್ಯಾಯಕ್ಕೆ ಸಂದ ಜಯ. ಹೈಕೋರ್ಟ್ ಆದೇಶ ಪ್ರತಿ ಕೈ ಸೇರಿಲ್ಲ. ಅದು ಕೈ ಸೇರಿದ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ. ಯಾರ್ಯಾರು ಎಲ್ಲೆಲ್ಲಿ ಏನು ಮಾಡಿದ್ದಾರೆ… ಎಲ್ಲವನ್ನೂ ಹೇಳುತ್ತೇನೆ. ಕಾದು ನೋಡಿ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಇಲಾಖೆ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ತಿಳಿಸಿದರು.

Read Also This Story:

Siddaramaiah- H.D. Devegowda Meet:ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ – ಸಿದ್ದರಾಮಯ್ಯ ಭೇಟಿ: ಸಿದ್ದುಗೆ ಹೆಚ್ ಡಿಡಿ ಹೇಳಿದ್ದೇನು…?

ವನ್ಯಜೀವಿ ಮೃಗಗಳ ಪತ್ತೆ ಪ್ರಕರಣ ಸಂಬಂಧ ಹೈಕೋರ್ಟ್ ಎಫ್ ಐ ಆರ್ ರದ್ದುಪಡಿಸಿರುವ ಕುರಿತ ಪ್ರಶ್ನೆಗೆ ದಾವಣಗೆರೆ(Davanagere)ಯಲ್ಲಿ ಮಾಧ್ಯಮವದರ ಜೊತೆ ಮಾತನಾಡುತ್ತಾ ಈ ಪ್ರತಿಕ್ರಿಯೆ ನೀಡಿದ ಅವರು, ಸ್ವಲ್ಪ ದಿನ ಕಾದು ನೋಡಿ.
ಯಾರ್ಯಾರು ಏನು ಮಾಡಿದ್ದಾರೆ ಎಂಬುದರ ಮಾಹಿತಿ ತೆಗೆಯುತ್ತಿದ್ದೇವೆ. ಎಲ್ಲವನ್ನೂ ಬಹಿರಂಗಪಡಿಸುತ್ತೇನೆ. ಆದೇಶ ಪ್ರತಿ ಸಿಗದೇ ಏನೂ ಮಾತನಾಡಲ್ಲ. ಇದಕ್ಕೆ ಟೈಂ ಇದೆ. ಈಗಲೇ ಮಾತನಾಡಲ್ಲ. ಪ್ರತಿ ಸಿಕ್ಕ ಬಳಿಕ ಎಲ್ಲಾ ವಿಚಾರಗಳ ಕುರಿತು ಮಾತನಾಡುತ್ತೇನೆ ಎಂದು ಹೇಳಿದರು.

ಮುಂಬರುವ ಲೋಕಸಭೆ ಚುನಾವಣೆಗೆ ಯಾರು ಕಾಂಗ್ರೆಸ್ ಕಾರ್ಯಕರ್ತರಾಗಿ ದುಡಿದಿರುತ್ತಾರೋ ಅವರಿಗೆ ಟಿಕೆಟ್ ಸಿಗುತ್ತದೆ. ಬಾವುಟ ಹಿಡಿದುಕೊಂಡು, ಪೋಸ್ಟರ್ ಹಚ್ಚಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಯಾರು ಕೆಲಸ ಮಾಡಿರುತ್ತಾರೋ ಅವರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತದೆ. ಎಲ್ಲೋ ಇದ್ದುಕೊಂಡು ಬಂದು ಟಿಕೆಟ್ ನನಗೆ ಸಿಗುತ್ತೆ ಎಂದು ಹೇಳಲು ಆಗದು ಎಂದು ಹೇಳಿದರು.

ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಹೇಳಿಕೆ ಗಮನಿಸಿದ್ದೇನೆ. ಎಲ್ಲರೂ ಕಾರ್ಯಕರ್ತರೇ. ಮೊದಲು ಅವರನ್ನು ಗುರುತಿಸುವ ಕೆಲಸ ಆಗಬೇಕಿದೆ. ಮಲ್ಲಪ್ಪ, ಬೋಳಪ್ಪ, ಕಾಳಪ್ಪ, ಸಿದ್ದಪ್ಪ ಯಾರು ಎಂಬುದು ಗೊತ್ತಾಗಬೇಕಲ್ವಾ.
ಎಲ್ಲಿಂದಲೋ ಬಂದು ನಿಂತುಕೊಂಡು ಮಾತನಾಡುವುದು ಸರಿಯಲ್ಲ. ಎಲ್ಲರನ್ನೂ ಕೇಳಬೇಕು, ಕಾಣಬೇಕು. ಕಾರ್ಯಕರ್ತರನ್ನು ಭೇಟಿಯಾಗಬೇಕು, ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು, ಬ್ಲಾಕ್ ಅಧ್ಯಕ್ಷರು, ಮುಖಂಡರನ್ನು ಭೇಟಿಯಾಗಿ
ಅಭಿಪ್ರಾಯ ಸಂಗ್ರಹಿಸಬೇಕು. ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರು ಸ್ಪರ್ಧೆ ಮಾಡಲಿ. ಯಾರೂ ಸಹ ಬೇಡ ಎನ್ನುವುದಿಲ್ಲ ಎಂದು ಎಸ್. ಎಸ್. ಮಲ್ಲಿಕಾರ್ಜುನ್ ಹೇಳಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಲಿಂಗಾಯತ ಅಧಿಕಾರಿಗಳ ಕಡೆಗಣನೆ ಮಾಡಲಾಗುತ್ತಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪರ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಇದು ಮುಗಿದ ಅಧ್ಯಾಯ. ಮಾಧ್ಯಮದವರು ಈ ವಿಚಾರವನ್ನು ಹೆಚ್ಚಾಗಿ ಪ್ರಚಾರ ನೀಡಿದ್ದಾರೆ. ನೀವೇ ವಿವಾದ ಮಾಡಿದ್ದು ಎಂದು ಹೇಳಿದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment