ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ದಾವಣಗೆರೆಗೂ ಕಾಲಿಟ್ಟ “ಡಿಜಿಟಲ್ ಅರೆಸ್ಟ್”: ರೂ. 22,40,000 ವಂಚನೆ, ಓರ್ವ ಆರೋಪಿ ಬಂಧನ!

On: August 27, 2025 8:30 PM
Follow Us:
ದಾವಣಗೆರೆ
---Advertisement---

SUDDIKSHANA KANNADA NEWS/ DAVANAGERE/DATE:27_08_2025

ದಾವಣಗೆರೆ: ಮುಂಬೈ, ಬೆಂಗಳೂರು, ದೆಹಲಿ ಸೇರಿದಂತೆ ಮಹಾನಗರಗಳಲ್ಲಿ ಬೆಳಕಿಗೆ ಬರುತ್ತಿದ್ದ ಡಿಜಿಟಲ್ ಅರೆಸ್ಟ್ ದಾವಣಗೆರೆಗೂ ಕಾಲಿಟ್ಟಿದ್ದು, ಶಿಕ್ಷಕರೊಬ್ಬರಿಂದ 22 ಲಕ್ಷದ 40 ಸಾವಿರ ರೂಪಾಯಿ ವರ್ಗಾವಣೆ ಮಾಡಿಕೊಂಡು ವಂಚಿಸಿದ ಪ್ರಕರಣ ಸಂಬಂಧ ಪ್ರಕರಣದ ಮೂರನೇ ಆರೋಪಿ ಬಂಧಿಸಲಾಗಿದ್ದು, ಇನ್ನಿಬ್ಬರು ಆರೋಪಿಗಳಿಗೆ ಹುಡುಕಾಟ ಮುಂದುವರಿದಿದೆ.

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಬಂಟೇನಹಳ್ಳಿಯ ಕೋರಟಿಕೆರೆ ಗ್ರಾಮದ ವ್ಯವಸಾಯ ವೃತ್ತಿ ಮಾಡುತ್ತಿದ್ದ ಅರುಣ್ ಕುಮಾರ್ (35) ಬಂಧಿತ ಆರೋಪಿ.

READ ALSO THIS STORY: ಇಸ್ಲಾಂ ಪಾಲಿಸಿ ಬದುಕಬೇಕು: ಮುಸ್ಲಿಂ ವಿದ್ಯಾರ್ಥಿಗಳು ಓಣಂ ಆಚರಣೆ ಮಾಡಬಾರದೆಂಬ ಕರೆ ಕೊಟ್ಟ ಬಳಿಕ ಏನಾಯ್ತು?
ಘಟನೆ ಹಿನ್ನೆಲೆ:

ದಾವಣಗೆರೆ ವಾಸಿಯಾಗಿದ್ದು, ಶಿಕ್ಷಕಿ ವೃತ್ತಿ ಮಾಡಿತ್ತಿದ್ದ ಶಿಕ್ಷಕರೊಬ್ಬರಿಗೆ ಫೆಬ್ರವರಿ 5 ನೇ ತಾರೀಖಿನಂದು ಶಾಲೆಯಲ್ಲಿರುವಾಗ ಬೆಳಿಗ್ಗೆ 9.30 ಗಂಟೆಗೆ +9672786862 ನಂಬರ್ ನಿಂದ ಕರೆ ಮಾಡಿ ನಾನು ಬ್ಲೂ ಡಾಟ್ ಕೋರಿಯಾರ್ ಸರ್ವಿಸ್ ಮುಂಬೈಯಿ ಎಂದು ಪರಿಚಯಿಸಿಕೊಂಡು ನಿಮ್ಮ ಫೆಡಕ್ಸ್ ಕೊರಿಯರ್ ನಲ್ಲಿ ಕೆಲವು ಔಷಧಗಳು ಮುಂಬೈನಿಂದ ದುಬೈಗೆ ಪಾರ್ಸಲ್ ಹೋಗುತ್ತಿದ್ದು ಅದರಲ್ಲಿ ಡ್ರಗ್ಸ್ ಕೂಡ ಇದೆ ಎಂದು ಹೆದರಿಸಲಾಗಿದೆ. ನಿಮ್ಮ ಗುರುತು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ನಿಮ್ಮ ಮೇಲೆ ಪ್ರಕರಣ ದಾಖಲಿಸುವುದಾಗಿ ಬೆದರಿಸಲಾಗಿಗೆ.

ಆಧಾರ ಕಾರ್ಡ್ ಮತ್ತು ಇ -ಮೇಲ್ ಐಡಿಯನ್ನು ಹಾಕಿಸಿಕೊಂಡು 8983204966 ವಾಟ್ಸ್ ಆಪ್ ಕಾಲ್ ನಲ್ಲಿ DCP ಮೇಡಂ ಮಾತನಾಡುತ್ತಿರುವುದಾಗಿ ಹೇಳಿ ನರೇಶ್ ಗೊಯಿಲ್ ಅನ್ನುವ ವ್ಯಕ್ತಿ ಮನಿಲ್ಯಾಂಡರಿಂಗ್ ಮಾಡುತ್ತಿದ್ದಾನೆ. ಈ ಕೇಸ್ ನಲ್ಲಿ ನೀವು ಕೂಡ ಇದ್ದೀರಾ. ಕೆನರಾ ಬ್ಯಾಂಕ್ ಮುಂಬೈಯಲ್ಲಿ ನಿಮ್ಮ ಆಕೌಂಟ್ ಇದೆ. ಇದರ ಎಟಿಎಂ ಕಾರ್ಡ ನರೇಶ್ ಗೋಯಿಲ್ ಹತ್ತಿರ ಸಿಕ್ಕಿದೆ. ಪ್ರತಿ ತಿಂಗಳು 20 ಲಕ್ಷ ರೂಪಾಯಿ ನಿಮ್ಮ ಖಾತೆಗೆ ಬರುತ್ತಿದೆ.

ನಿಮ್ಮ ಖಾತೆಯಲ್ಲಿರುವ ಹಣ ಲೀಗಲ್ ಅಥಾವ ILLEGAL ಎಂದು ಚೆಕ್ ಮಾಡಬೇಕು ನಾವು ಕಳುಹಿಸಿದ ಎರಡು ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಿ ಎಂದು ಹೇಳಿ ಖಾತೆಯಿಂದ ರೂ 22,40,000 ಹಣವನ್ನು ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡಿರುತ್ತಾರೆಂದು ಮಾರ್ಚ್ 12ರಂದು ಶಿಕ್ಷಕರು ಸಿಇಎನ್ ಅಪರಾಧ ಠಾಣೆಗೆ ದೂರು ನೀಡಿದ್ದರು. ಈ ದೂರಿನನ್ವಯ ಕಲಂ 66(ಸಿ) 66(ಡಿ) ಐಟಿ ಆಕ್ಟ್ 2000 & 308(2) 318 (3), 319(2) ಬಿ. ಎನ್.ಎಸ್ ಕಾಯ್ದೆ 2023 ರೀತ್ಯಾ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಆರೋಪಿತನ ಪತ್ತೆಗಾಗಿ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ಅವರ ಮಾರ್ಗದರ್ಶನದಲ್ಲಿ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕ ಬಂಕಾಳಿ ನಾಗಪ್ಪ ನೇತೃತ್ವದಲ್ಲಿ ಅಧಿಕಾರಿ ಸಿಬ್ಬಂದಿಗಳನ್ನೊಳಗೊಂಡ ತಂಡವು ಈ ಪ್ರಕರಣದಲ್ಲಿ ತನಿಖೆ ಕೈಗೊಂಡಿತ್ತು.

ಪ್ರಕರಣದ ಮೂರನೇ ಆರೋಪಿ ಅರುಣ್ ಕುಮಾರ್ ನನ್ನು ಬಂಧಿಸಿ ಒಂದು ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಸದ್ಯ ಆರೋಪಿತನನ್ನು ಘನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನು ಇಬ್ಬರು ಆರೋಪಿತರು ತಲೆಮರೆಸಿಕೊಂಡಿದ್ದು, ಆರೋಪಿತರ ಪತ್ತೆ ಕಾರ್ಯ ಮತ್ತು ತನಿಖೆ ಮುಂದುವರೆದಿದೆ. ಆರೋಪಿತರ ಬ್ಯಾಂಕ್ ಖಾತೆಯಲ್ಲಿದ್ದ 1,90,000 ರೂ. ಫ್ರೀಜ್ ಮಾಡಿಸಲಾಗಿದೆ.

ಈ ಕಾರ್ಯಚರಣೆಯಲ್ಲಿ ಯಶಸ್ವಿಯಾದ ಡಿವೈಎಸ್ಪಿ ಬಂಕಾಳಿ ನಾಗಪ್ಪ ಹಾಗೂ ಸಿಬ್ಬಂದಿಯವರಾದ ಅಶೋಕ, ಮುತ್ತುರಾಜ್, ಯೋಗೀಶ್ ನಾಯ್ಕ್, ನಿಜಲಿಂಗಪ್ಪ ಅವರನ್ನು ಎಸ್ಪಿ ಉಮಾ ಪ್ರಶಾಂತ್ ಅಭಿನಂದಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ದಸರಾ

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ವಿರೋಧ ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು: ಮೊಹಮ್ಮದ್ ಜಿಕ್ರಿಯಾ

ನಡುಕ

“ಮತದಾರರ ಅಧಿಕಾರ ಯಾತ್ರೆ”ಗೆ ಭಾರೀ ಬೆಂಬಲ, ಬಿಜೆಪಿಗೆ ನಡುಕ: ಸೈಯದ್ ಖಾಲಿದ್ ಅಹ್ಮದ್

ಶಿವಾಜಿ

“ಅಫ್ಜಲ್ ಗುರು ವಧೆ ಮಾಡುವ ಶಿವಾಜಿ ಮಹಾರಾಜರ ಪೋಸ್ಟರ್”: ತೆರವಿಗೆ ಪೊಲೀಸರು ಬರುತ್ತಿದ್ದಂತೆ ಮಟಿಕಲ್ ನಲ್ಲಿ ಉದ್ವಿಗ್ನ ವಾತಾವರಣ!

RASHI

ಈ ರಾಶಿಯವರಿಗೆ ವ್ಯಾಪಾರದಲ್ಲಿ ದ್ವಿಗುಣ: ಶುಕ್ರವಾರದ ರಾಶಿ ಭವಿಷ್ಯ 29 ಆಗಸ್ಟ್ 2025

ಟಿಕ್ಕಿ

“ಕಪ್ಪಗಿದ್ದೆಯಾ ಮಗನಿಗೆ ಒಳ್ಳೆಯ ಜೋಡಿಯಲ್ಲ, ಬೇರೆ ಮದ್ವೆ ಮಾಡ್ತೀವಿ ಬಿಟ್ಬಿಡು”: ಟೆಕ್ಕಿ ಸೂಸೈಡ್ ಸ್ಫೋಟಕ ಕಾರಣ ಬಹಿರಂಗ!

ಹಿಂದೂ

ಆ. 29ಕ್ಕೆ ಹಳೇಕುಂದುವಾಡಕ್ಕೆ ಹಿಂದೂ “ಫೈರ್” ಬಾಂಡ್ ಹಾರಿಕಾ ಮಂಜುನಾಥ್: ಯುವಕರಲ್ಲಿ ದೇಶಭಕ್ತಿ, ಸಂಸ್ಕೃತಿ ಮೂಡಿಸುವುದು ಹೇಗೆ? ವಿಷಯದ ಬಗ್ಗೆ ದಿಕ್ಸೂಚಿ ಭಾಷಣ

Leave a Comment