SUDDIKSHANA KANNADA NEWS/ DAVANAGERE/DATE:27_08_2025
ದಾವಣಗೆರೆ: ದಾವಣಗೆರೆ ದಕ್ಷಿಣ ವಲಯದ ಪಿ ಜೆ ಬಡಾವಣೆ ಹಾಗೂ ವಿನೋಭನಗರ ಕ್ಲಸ್ಟರ್ ಮಟ್ಟದ 2025-26ನೇ ಸಾಲಿನ (14 ವರ್ಷ ವಯೋಮಾನ) ಕ್ರೀಡಾಕೂಟಕ್ಕೆ ಅದ್ದೂರಿ ಚಾಲನೆ ಸಿಕ್ಕಿದೆ.
READ ALSO THIS STORY: ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಆಯೋಜಕರಿಗೆ ಮಾಹಿತಿ: ಆ.27, 28, ಮತ್ತು 31ಕ್ಕೆ ಗಣೇಶ ವಿಗ್ರಹಗಳ ವಿಸರ್ಜನೆಗೆ ಸ್ಥಳ ನಿಗದಿ
ದಾವಣಗೆರೆ ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಪುಷ್ಪಲತಾ ಅಧ್ಯಕ್ಷತೆಯಲ್ಲಿ, ಉಪ ನಿರ್ದೇಶಕರ ಕಚೇರಿ ಇ ಓ ಸಿದ್ದಪ್ಪ ಬಿ ಸಿ ಉಪಸ್ಥಿತಿಯಲ್ಲಿ ಬಿ ಆರ್ ಸಿ ಚೌಡಪ್ಪನವರು ಶಾಟ್ ಪುಟ್ ಎಸೆಯುವ ಮೂಲಕ ಎರಡು ದಿನಗಳ ಕ್ರೀಡಾಕೂಟಕ್ಕೆ ಬಾಪೂಜಿ ಜಿಲ್ಲಾ ಕ್ರೀಡಾಂಗಣದಲ್ಲಿ ಚಾಲನೆ ಸಿಕ್ಕಿದೆ.
ಈ ಸಂದರ್ಭದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಬಿ ಇ ಓ ಡಾ.ಪುಷ್ಪಲತಾ ಮಕ್ಕಳಿಗೆ ಕ್ರೀಡಾಕೂಟದ ಮಹತ್ವ, ಪೋಷಕರು ಹಾಗು ಶಿಕ್ಷಕರ ಪ್ರೋತ್ಸಾಹ, ಮಕ್ಕಳ ದೈಹಿಕ ಹಾಗು ಮಾನಸಿಕ ಬೆಳವಣಿಗೆಗೆ ಕ್ರೀಡೆ ಎಷ್ಟು ಸಹಕಾರಿ ಎಂಬ ಬಗ್ಗೆ ಚುಟುಕಾಗಿ ತಿಳಿಹೇಳಿದರು.
ಬಾಪೂಜಿ ಜಿಲ್ಲಾ ಕ್ರೀಡಾಂಗಣದಲ್ಲಿ ಅಚ್ಚುಕಟ್ಟಾಗಿ ಕ್ರೀಡಾಕೂಟ ಆಯೋಜನೆ ಮಾಡಿದ ಸಿ ಆರ್ ಪಿಗಳಾದ ಡಿ ರಮೇಶ್ ಹಾಗು ಸವಿತಾರನ್ನು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷರಾದ ಗದಿಗೆಪ್ಪ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಅಧ್ಯಕ್ಷರಾದ ರಾಜಪ್ಪ ಎನ್ ಎಚ್ ವಿವಿಧ ಶಾಲಾ ಕಾಲೇಜ್ ಮುಖ್ಯಸ್ಥರು,ಮುಖ್ಯಶಿಕ್ಷಕರು ದೈಹಿಕ ಶಿಕ್ಷಕರುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.