ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಬಿಹಾರದಲ್ಲಿ ಮತದಾರರ ಹಕ್ಕು ಕಸಿಯುತ್ತಿರುವ ಚುನಾವಣಾ ಆಯೋಗ: ಸೈಯದ್ ಖಾಲಿದ್ ಅಹ್ಮದ್ ಕಿಡಿನುಡಿ

On: August 23, 2025 6:41 PM
Follow Us:
Bihara
---Advertisement---

SUDDIKSHANA KANNADA NEWS/ DAVANAGERE/DATE:23_08_2025

ದಾವಣಗೆರೆ: ಬಿಹಾರದಲ್ಲಿ ಚುನಾವಣಾ ಆಯೋಗವು ಮತದಾರರ ಹಕ್ಕು ಕಸಿಯುತ್ತಿದೆ. ಬಿಜೆಪಿ ಪರವಾಗಿ ಕೆಲಸ ಮಾಡುವ ಮೂಲಕ ಪ್ರಜಾಪ್ರಭುತ್ವ, ಸಂವಿಧಾನಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ ಎಂದು ಅಖಿಲ ಭಾರತ
ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಅವರು ಆರೋಪಿಸಿದರು.

READ ALSO THIS STORY: ಧರ್ಮಸ್ಥಳ ಕೇಸ್ ದೂರುಕೊಟ್ಟವನೇ ಆರೋಪಿಯಾಗಿದ್ದು ಹೇಗೆ? 10 ದಿನಗಳ ಕಾಲ ಎಸ್ ಐ ಟಿ ಕಸ್ಟಡಿಗೆ ಮುಸುಕುಧಾರಿ ಚಿನ್ನಯ್ಯ!

ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಅಧಿಕಾರ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿಪಕ್ಷ ನಾಯಕ ರಾಹುಲ್ ಗಾಂಧಿ, ತೇಜಸ್ವಿ ಯಾದವ್, ಉದಯ ಭಾನು, ಕೃಷ್ಣ ಅಲ್ಲವರು ಯಾತ್ರೆ ಕೈಗೊಂಡಿದ್ದಾರೆ. ಜನರಲ್ಲಿ
ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಬಿಹಾರದ ಸಸಾರಾಮ್‌ನಿಂದ 1,300 ಕಿ.ಮೀಟರ್ ವರೆಗೆ ಮತದಾರ ಅಧಿಕಾರ ಯಾತ್ರೆ’ಯನ್ನು ಆರಂಭಿಸಿದ್ದಾರೆ. ” ಮತ ಚೋರಿ “ಎಂಬ ಘೋಷವಾಕ್ಯದೊಂದಿಗೆ ವಿರೋಧ ಪಕ್ಷಗಳು ಅಭಿಯಾನ ಆರಂಭಿಸಿವೆ. ಈ ಮೂಲಕ ಚುನಾವಣಾ ಆಯೋಗದ ಪಾರದರ್ಶಕತೆ ಕಾರ್ಯವೈಖರಿ ಹೇಗಿದೆ ಎಂಬುದನ್ನು ತಿಳಿಸಿಕೊಡಲಾಗುತ್ತಿದೆ ಎಂದು ಹೇಳಿದರು.

‘ಮತದಾರರ ಅಧಿಕಾರ ಯಾತ್ರೆ’ಯು ಸಂವಿಧಾನವನ್ನು ಉಳಿಸುವ ಹೋರಾಟ”. ಇಡೀ ದೇಶದಲ್ಲಿ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಮತಕಳ್ಳತನ ಮಾಡಿ ಬಿಜೆಪಿ ಗೆಲ್ಲುತ್ತಿದೆ. ಈಗ ಬಿಹಾರದಲ್ಲಿಯೂ ಇದೇ ತಂತ್ರ ರೂಪಿಸಲು
ಮುಂದಾಗಿದೆ. ಎಸ್‌ಐಆರ್ ಮೂಲಕ ಮತದಾರರನ್ನು ಅಳಿಸಿ ಸೇರಿಸುವುದು ಪಿತೂರಿಯಾಗಿದೆ. ಚುನಾವಣಾ ಆಯೋಗ ಏನು ಮಾಡುತ್ತಿದೆ ಮತ್ತು ಅದು ಮತ “ಕದಿಯುವಿಕೆ”ಯನ್ನು ಹೇಗೆ ನಡೆಸುತ್ತಿದೆ ಎಂಬುದು ಈಗ ಇಡೀ ದೇಶಕ್ಕೆ
ತಿಳಿದಿದೆ ಎಂದು ತಿಳಿಸಿದರು.

ಬಿಹಾರದಲ್ಲಿ ಚುನಾವಣೆಯಲ್ಲಿ ಮತ ಕದಿಯಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಬಡವರಿಗೆ ಮಾತ್ರ ಅವರ ಮತದ ಅಧಿಕಾರವಿರುತ್ತದೆ. ಅದನ್ನು ಅವರು ಕಸಿದುಕೊಳ್ಳಲು ನಾವು ಬಿಡುವುದಿಲ್ಲ” “ಪ್ರತಿ ಚುನಾವಣೆಯಲ್ಲೂ ಬಿಜೆಪಿ ಗೆಲ್ಲುತ್ತದೆ. ಮಹಾರಾಷ್ಟ್ರದಲ್ಲಿ, ಎಲ್ಲಾ ಅಭಿಪ್ರಾಯ ಸಮೀಕ್ಷೆಗಳು ಭಾರತ ಬಣ ಗೆಲ್ಲುತ್ತದೆ ಎಂದು ಹೇಳಿವೆ. (2024) ಲೋಕಸಭಾ (ಚುನಾವಣೆಗಳಲ್ಲಿ), ನಮ್ಮ ಮೈತ್ರಿಕೂಟ ಗೆದ್ದಿತ್ತು, ಆದರೆ ಅದೇ ಮಹಾರಾಷ್ಟ್ರದಲ್ಲಿ ನಾಲ್ಕು ತಿಂಗಳ ನಂತರ, ಒಂದು ಕೋಟಿ ಮತದಾರರು ಸೇರ್ಪಡೆಯಾದಾಗ ಬಿಜೆಪಿ ಮೈತ್ರಿಕೂಟವು ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿತು ಮತ್ತು ಅಂತಹ ಸೇರ್ಪಡೆಗಳು ನಡೆದಲ್ಲೆಲ್ಲಾ ಬಿಜೆಪಿ ಗೆದ್ದಿತ್ತು” ಎಂದು ರಾಹುಲ್ ಗಾಂಧಿ ಅವರು ಹೇಳಿದ್ದಾರೆ. ಇದು ನೂರಕ್ಕೆ ನೂರರಷ್ಟು ಸತ್ಯ ಎಂದರು.

ಜನರಿಗೆ ಸತ್ಯ ತಿಳಿಸುವ ಸಲುವಾಗಿ ಯಾತ್ರೆ ನಡೆಸಲಾಗುತ್ತಿದೆ. ಚುನಾವಣೆ ಪಾರದರ್ಶಕವಾಗಿ ನಡೆಯಬೇಕು. ಜನ ಬೆಂಬಲ ಇದ್ದವರು ಗೆಲ್ಲಬೇಕು. ವಾಮಮಾರ್ಗದ ಮೂಲಕ ತಂತ್ರ, ಷಡ್ಯಂತ್ರ ರೂಪಿಸಿ ಗೆಲ್ಲುವುದಕ್ಕೆ ಕಡಿವಾಣ ಹಾಕಲೇಬೇಕಿದೆ ಎಂದು ಸೈಯದ್ ಖಾಲಿದ್ ಅಹ್ಮದ್ ಹೇಳಿದರು.

ರಾಹುಲ್ ಗಾಂಧಿಯವರ ‘ಮತದಾರ ಅಧಿಕಾರ ಯಾತ್ರೆ’ ಬಿಹಾರದ 20 ಜಿಲ್ಲೆಗಳನ್ನು ಒಳಗೊಂಡಿದೆ. ಇದು ಔರಂಗಾಬಾದ್, ಗಯಾ, ನಾವಡಾ, ನಳಂದಾ, ಶೇಖ್‌ಪುರ, ಲಖಿಸಾರೈ, ಮುಂಗೇರ್, ಭಾಗಲ್‌ಪುರ್, ಕತಿಹಾರ್, ಪುರ್ನಿಯಾ, ಅರಾರಿಯಾ, ಸುಪೌಲ್, ಮಧುಬನಿ, ದರ್ಬಂಗಾ, ಸಿತಾಮರ್ಹಿ, ಪೂರ್ವ ಚಂಪಾರಣ್, ಪಶ್ಚಿಮ ಚಂಪಾರಣ್, ಗೋಪಾಲ್‌ಗಂಜ್, ಸಿವಾನ್, ಚಪ್ರಾ ಮತ್ತು ಅರಾ ಮೂಲಕ ಹಾದುಹೋಗುತ್ತದೆ. 2024 ರ ಲೋಕಸಭಾ ಚುನಾವಣೆಗೆ ಮುನ್ನ ರಾಹುಲ್ ಗಾಂಧಿಯವರ ಮಣಿಪುರದಿಂದ ಮುಂಬೈಗೆ ‘ಭಾರತ್ ಜೋಡೋ ನ್ಯಾಯ ಯಾತ್ರೆ’ಯಂತೆ ಇದನ್ನು ಕಾಲ್ನಡಿಗೆಯಲ್ಲಿ ಮತ್ತು ವಾಹನದ ಮೂಲಕ ಹೈಬ್ರಿಡ್ ಮಾದರಿಯಲ್ಲಿ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ಬಿಹಾರ ಯುವ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ದಸರಾ

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ವಿರೋಧ ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು: ಮೊಹಮ್ಮದ್ ಜಿಕ್ರಿಯಾ

ನಡುಕ

“ಮತದಾರರ ಅಧಿಕಾರ ಯಾತ್ರೆ”ಗೆ ಭಾರೀ ಬೆಂಬಲ, ಬಿಜೆಪಿಗೆ ನಡುಕ: ಸೈಯದ್ ಖಾಲಿದ್ ಅಹ್ಮದ್

ಶಿವಾಜಿ

“ಅಫ್ಜಲ್ ಗುರು ವಧೆ ಮಾಡುವ ಶಿವಾಜಿ ಮಹಾರಾಜರ ಪೋಸ್ಟರ್”: ತೆರವಿಗೆ ಪೊಲೀಸರು ಬರುತ್ತಿದ್ದಂತೆ ಮಟಿಕಲ್ ನಲ್ಲಿ ಉದ್ವಿಗ್ನ ವಾತಾವರಣ!

RASHI

ಈ ರಾಶಿಯವರಿಗೆ ವ್ಯಾಪಾರದಲ್ಲಿ ದ್ವಿಗುಣ: ಶುಕ್ರವಾರದ ರಾಶಿ ಭವಿಷ್ಯ 29 ಆಗಸ್ಟ್ 2025

ಟಿಕ್ಕಿ

“ಕಪ್ಪಗಿದ್ದೆಯಾ ಮಗನಿಗೆ ಒಳ್ಳೆಯ ಜೋಡಿಯಲ್ಲ, ಬೇರೆ ಮದ್ವೆ ಮಾಡ್ತೀವಿ ಬಿಟ್ಬಿಡು”: ಟೆಕ್ಕಿ ಸೂಸೈಡ್ ಸ್ಫೋಟಕ ಕಾರಣ ಬಹಿರಂಗ!

ಹಿಂದೂ

ಆ. 29ಕ್ಕೆ ಹಳೇಕುಂದುವಾಡಕ್ಕೆ ಹಿಂದೂ “ಫೈರ್” ಬಾಂಡ್ ಹಾರಿಕಾ ಮಂಜುನಾಥ್: ಯುವಕರಲ್ಲಿ ದೇಶಭಕ್ತಿ, ಸಂಸ್ಕೃತಿ ಮೂಡಿಸುವುದು ಹೇಗೆ? ವಿಷಯದ ಬಗ್ಗೆ ದಿಕ್ಸೂಚಿ ಭಾಷಣ

Leave a Comment