SUDDIKSHANA KANNADA NEWS/ DAVANAGERE/DATE:22_08_2025
ಬೆಂಗಳೂರು: ಕರ್ನಾಟಕ ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿಗಳ (ಕ್ಷೇಮ ಅಭಿವೃದ್ಧಿ ಕ್ರಮಗಳು ಮತ್ತು ದೌರ್ಜನ್ಯಗಳ ವಿರುದ್ಧ ರಕ್ಷಣೆ) ವಿಧೇಯಕ ಮಂಡನೆಗೊಂಡಿದೆ.
READ ALSO THIS STORY: ರಸ್ತೆ ರಿಪೇರಿಗೆ ದಾವಣಗೆರೆಯ ಆಲೂರಿನಲ್ಲಿ ವಿದ್ಯಾರ್ಥಿನಿ ಏಕಾಂಗಿ ಧರಣಿ: ಇದು ಕಾಂಗ್ರೆಸ್ ಆಡಳಿತಕ್ಕೆ ಹಿಡಿದ ಕೈಗನ್ನಡಿ!
ಈ ಮೂಲಕ ಜೀವ ವಿಮೆ, ಆರೋಗ್ಯ ವಿಮೆ, ಪಶು ವಿಮೆ ಮತ್ತು ವಿಕಲತೆಯ ವ್ಯಾಪ್ತಿಗೆ ಒಳಪಡಿಸುವುದು, ಆರೋಗ್ಯ, ಶೈಕ್ಷಣಿಕ ಸೌಲಭ್ಯಗಳನ್ನು ಕಲ್ಪಿಸುವುದು, ಕೌಶಲ ಉನ್ನತೀಕರಣ, ಆಹಾರ ಭದ್ರತೆ ಒದಗಿಸುವುದು, ಲಸಿಕೆ ಮತ್ತು ಚಿಕಿತ್ಸೆ ನೀಡುವುದು, ಸಾಂಪ್ರದಾಯಿಕ ಮತ್ತು ಅಲೆಮಾರಿ ಕುರಿಗಾಹಿಗಳ ಉತ್ಪನ್ನಗಳಿಗಾಗಿ ಮಾರಾಟ ಬೆಂಬಲ ನಿಗ ಮಾಡಲಾಗುವುದು ಎಂದು ರಾಜ್ಯ ಸರ್ಕಾರವು ತಿಳಿಸಿದೆ.
ರಾಜ್ಯದಲ್ಲಿ 15 ಸಾವಿರ ಕುರಿಗಾಹಿಗಳಿದ್ದು, 5 ಸಾವಿರ ಮಂದಿ ನೋಂದಣಿ ಆಗಿದ್ದಾರೆ. 4 ಸಾವಿರ ಗುರುತಿನ ಚೀಟಿ ವಿತರಿಸಲಾಗಿದೆ ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಅವರು ವಿಧಾನ ಮಂಡಲದ ಅಧಿವೇಶನದಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ತಿಳಿಸಿದರು