SUDDIKSHANA KANNADA NEWS/ DAVANAGERE/DATE:21_08_2025
ದಾವಣಗೆರೆ: ಕರ್ನಾಟಕ ಸಹಕಾರ ಸಂಘಗಳ ನಿಯಮಗಳು ಯಾವುದೇ ಸಹಕಾರ ಸಂಘದ ಮುಖ್ಯಕಾರ್ಯನಿರ್ವಾಹಕರು ಹಾಗೂ ಕರ್ನಾಟಕ ಸೌಹಾರ್ದ ಸಹಕಾರಿ ನಿಯಮಗಳನ್ವಯ ಯಾವುದೇ ಸೌಹಾರ್ದ ಸಹಕಾರಿ ಮುಖ್ಯ ಕಾರ್ಯನಿರ್ವಾಹಕರು ವಾರ್ಷಿಕ ಮಹಾಸಭೆಯಲ್ಲಿ ಲೆಕ್ಕಪರಿಶೋಧಕರ ಅಥವಾ ಲೆಕ್ಕಪರಿಶೋಧನಾ ಫರ್ಮ್ನ್ನು ನೇಮಕ ಮಾಡಿಕೊಂಡ ಬಗ್ಗೆ ವಾರ್ಷಿಕ ಮಹಾಸಭೆಯ ದಿನಾಂಕದಿಂದ 7 ದಿನಗಳೊಳಗಾಗಿ ಲೆಕ್ಕಪರಿಶೋಧಕರಿಗೆ, ಲೆಕ್ಕಪರಿಶೋಧನಾ ಫರ್ಮಿಗೆ ಮತ್ತು ಸಹಕಾರಿ ಲೆಕ್ಕಪರಿಶೋಧನಾ ನಿರ್ದೇಶಕರಿಗೆ ತಿಳಿಸಬೇಕು.
READ ALSO THIS STORY: ದಾವಣಗೆರೆಯಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳ ಆರೋಪ: ಗೃಹಿಣಿ ಆತ್ಮಹತ್ಯೆಗೆ ಶರಣು!
ಆದರೆ ಜಿಲ್ಲೆಯ ಬಹುಪಾಲು ಸಹಕಾರ ಸಂಘಗಳು ಮತ್ತು ಸೌಹಾರ್ದ ಸಹಕಾರಿಗಳು ಪ್ರಸಕ್ತ ಸಾಲಿನ ಲೆಕ್ಕಪರಿಶೋಧನೆಗೆ ಲೆಕ್ಕಪರಿಶೋಧಕರ, ಲೆಕ್ಕಪರಿಶೋಧನಾ ಫರ್ಮಿನ್ನು ಆಯ್ಕೆ ಮಾಡಿಕೊಂಡಿರುವ ಕುರಿತು ಮಾಹಿತಿಯನ್ನು ಈ ಕಚೇರಿಗೆ
ಈವರೆವಿಗೂ ಸಲ್ಲಿಸಿರುವುದಿಲ್ಲ.
ಆದ್ದರಿಂದ 2025-26ನೇ ಸಾಲಿನ ಲೆಕ್ಕಪರಿಶೋಧನೆಗಾಗಿ ಲೆಕ್ಕಪರಿಶೋಧಕರ, ಲೆಕ್ಕಪರಿಶೋಧನಾ ಫರ್ಮಿನ್ನು ಆಯ್ಕೆ ಮಾಡಿಕೊಂಡಿರುವ ಕುರಿತಂತೆ ಮಾಹಿತಿಯನ್ನು ವಾರ್ಷಿಕ ಮಹಾಸಭೆಯ ನಡಾವಳಿಗಳ ಧೃಡೀಕೃತ ಪ್ರತಿಗಳೊಂದಿಗೆ ಆಯ್ಕೆ ಪತ್ರವನ್ನು ಮುದ್ದಾಂ, ಅಂಚೆ, ಇ-ಮೇಲ್ ಮುಖಾಂತರ ಈ ಪ್ರಕಟಣೆಯ ದಿನಾಂಕದಿಂದ 3 ದಿನಗಳೊಳಗಾಗಿ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ ಉಪನಿರ್ದೇಶಕರ ಕಚೇರಿ, #257/1-5. ಮೊದಲನೇ ಮಹಡಿ, ಜನತಾ ಬಜಾರ್ ಕಟ್ಟಡ, ಮೊದಲನೇ ಮುಖ್ಯರಸ್ತೆ, ಪಿ.ಜೆ.ಬಡಾವಣೆ, ದಾವಣಗೆರೆ-577002. 08192-231351. E-Mail: ddadavanagereaudit@gmail.com ಕಚೇರಿಗೆ ಸಲ್ಲಿಸಬೇಕು.
ಇಲ್ಲವಾದಲ್ಲಿ ಅಂತಹ ಸಹಕಾರ ಸಂಘಗಳಿಗೆ ಈ ಇಲಾಖೆಯಿಂದ ಲೆಕ್ಕಪರಿಶೋಧಕರನ್ನು ನೇಮಿಸಲಾಗುವುದೆಂದು ಹಾಗೂ ಲೆಕ್ಕಪರಿಶೋಧನೆಯಲ್ಲಿ ವಿಳಂಬವಾದಲ್ಲಿ ಸಂಬಂಧಿಸಿದ ಸಂಘಗಳ, ಸಹಕಾರಿಗಳ ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳೇ ಹೊಣೆಗಾರರೆಂದು ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.