ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ದಾವಣಗೆರೆ ಬೀದಿ ಬದಿ ವ್ಯಾಪಾರಿಗಳಿಗೆ ಎಚ್ಚರಿಕೆ: ಹಸಿಕಸ, ಒಣಕಸ ವಿಂಗಡಣೆಗೆ ಡಸ್ಟ್ ಬಿನ್ ಬಳಸದಿದ್ದರೆ ಬೀಳುತ್ತೆ ದಂಡ!

On: August 20, 2025 7:24 PM
Follow Us:
---Advertisement---

SUDDIKSHANA KANNADA NEWS/ DAVANAGERE/DATE:20_08_2025

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಬೀದಿಬದಿ ಮಾರಾಟಗಾರರು, ಹೋಟೆಲ್ ಉದ್ದಿಮೆದಾರರು, ಕಾಫಿ, ಚಹಾ, ಪಾನೀಯ, ತಿಂಡಿ-ತಿನಿಸು ಆಹಾರ ಪಧಾರ್ಥಗಳಿಗೆ ಪ್ಲಾಸ್ಟಿಕ್ ಕಪ್, ಮೇಣಲೇಪಿತ ಪೇಪರ್ ಕಪ್ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಪ್ಲಾಸ್ಟಿಕ್ ಚಮಚ ಹಾಗೂ ಸ್ಟ್ರಾಗಳನ್ನು ಬಳಸಕೂಡದು ಎಂದು ಪಾಲಿಕೆ ಆಯುಕ್ತೆ ರೇಣುಕಾ ಸೂಚಿಸಿದ್ದಾರೆ.

READ ALSO THIS STORY: ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ರೂಪಿಸಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ದಾವಣಗೆರೆಯಲ್ಲಿ ಬೃಹತ್ ಜಾಥಾ

ಬೀದಿ ಬದಿ ಅಂಗಡಿಗಳಲ್ಲಿ ಪ್ರತ್ಯೇಕವಾಗಿ ಹಸಿಕಸ (ಹಸಿರು ಬಿನ್) ಮತ್ತು ಒಣಕಸ (ನೀಲಿ ಬಿನ್) ಸಂಗ್ರಹಣೆಗಾಗಿ 75 ಲೀ ಸಾಮರ್ಥ್ಯದ ಎರಡು ಲಿಟಲ್ ಬಿನ್‍ಗಳನ್ನು ಸ್ವಂತ ವೆಚ್ಚದಿಂದ ಖರೀದಿಸಿ ಕಡ್ಡಾಯವಾಗಿ ಸಾರ್ವಜನಿಕರಿಗೆ ಕೈಗೆಟುಕುವಂತೆ ಇರಿಸಬೇಕು. ಎಲ್ಲಾ ಬೀದಿಬದಿ ಮಾರಾಟಗಾರರು ಹೋಟೆಲ್ ಉದ್ದಿಮೆದಾರರು ತಮ್ಮ ಉದ್ದಿಮೆಯ ಸ್ಥಳದಲ್ಲಿ ಯಾವುದೇ ಕಸ ಬೀಳದಂತೆ ಕ್ರಮವಹಿಸಬೇಕು. ತ್ಯಾಜ್ಯ ನಿರ್ವಹಣಾ ನಿಯಮ ಕಡ್ಡಾಯವಾಗಿ ಪಾಲಿಸುವುದರೊಂದಿಗೆ ನಗರದ ಸ್ವಚ್ಛತೆ ಹಾಗೂ ಸಾರ್ವಜನಿಕ ಆರೋಗ್ಯ ಕಾಪಾಡಲು ಸಮರ್ಪಕ ತ್ಯಾಜ್ಯನಿರ್ವಹಣೆ ಅನುಷ್ಠಾನಗೊಳಿಸಲು ಪಾಲಿಕೆಯೊಂದಿಗೆ ಸಹಕರಿಸಬೇಕು.

ಪಾಲಿಕೆಯೊಂದಿಗೆ ಸಹಕರಿಸದ ಉದ್ದಿಮೆದಾರರುಗಳಿಗೆ ತ್ಯಾಜ್ಯ ನಿರ್ವಹಣೆ ನಿಯಮಗಳ ಉಲ್ಲಂಘನೆಗೆ ನಿಯಮಾನುಸಾರ ದಂಡ ವಿಧಿಸಲಾಗುವುದು ಎಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment