ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

“ನಾವು ಧರ್ಮಸ್ಥಳದೊಂದಿಗೆ ಇದ್ದೇವೆ”: ಸಾವಿರಾರು ಸದ್ಭಕ್ತರ ಒಕ್ಕೊರಲ ಸಂದೇಶ!

On: August 20, 2025 11:54 AM
Follow Us:
Dharmasthala
---Advertisement---

SUDDIKSHANA KANNADA NEWS/ DAVANAGERE/DATE:20_08_2025

ದಾವಣಗೆರೆ: ಧರ್ಮಸ್ಥಳದಲ್ಲಿ ಮುಸುಕುಧಾರಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎನ್ನುವ ಆರೋಪ ಪ್ರಕರಣ ಬಳಸಿಕೊಂಡು ಶ್ರೀಕ್ಷೇತ್ರದ ಬಗ್ಗೆ ಅಪಪ್ರಚಾರ ನಡೆಸುತ್ತಿರುವ ವಿರುದ್ಧ ದಾವಣಗೆರೆಯಲ್ಲಿ ಸಾವಿರಾರು ಸದ್ಭಕ್ತರು ಆಕ್ರೋಶ ವ್ಯಕ್ತಪಡಿಸಿದರು.

READ ALSO THIS STORY: ಧರ್ಮಸ್ಥಳದ ಬಗ್ಗೆಅಪಪ್ರಚಾರ ಶುರುವಾಗಿದ್ದು ಯಾವಾಗಿನಿಂದ? ನಮ್ಮ ಕುಟುಂಬದ ವಿರುದ್ಧ ಷಡ್ಯಂತ್ರ ಎಂದಿದ್ಯಾಕೆ ಡಾ. ವೀರೇಂದ್ರ ಹೆಗ್ಗಡೆ?

ನಗರದ ಜಯದೇವ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮವು ಧರ್ಮಸ್ಥಳ ಪರವಾದ ನಾಮಫಲಕ ಹಿಡಿದು ಜೈ ಧರ್ಮಸ್ಥಳ ಎಂಬ ಘೋಷಣೆ ಹಾಕಿದರು. ನಮ್ಮ ಪೂಜ್ಯರು ನಮ್ಮ ಹೆಮ್ಮೆ, ಧರ್ಮಸ್ಥಳದೊಂದಿಗೆ ನಾವಿದ್ದೇವೆ, ಧರ್ಮ ವಿರೋಧಿಗಳನ್ನು ಬಂಧಿಸಬೇಕು. ಸತ್ಯಮೇವ ಜಯತೆ, ಅಪಪ್ರಚಾರ ನಡೆಸುತ್ತಿರುವ ಯುಟ್ಯೂಬರ್ ಗಳಿಗೆ ಧಿಕ್ಕಾರ, ಸಾಮಾಜಿಕ ಜಾಲತಾಣಗಳಲ್ಲಿ ಧರ್ಮಸ್ಥಳದ ವಿರುದ್ಧ ಹೇಳಿಕೆ ನೀಡುವವರಿಗೆ ಧಿಕ್ಕಾರ ಎಂಬ ನಾಮಫಲಕಗಳು ಗಮನ ಸೆಳೆದವು.

ಜಿಲ್ಲೆಯ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಹೆಚ್ಚಾಗಿ ಮಹಿಳೆಯರೇ ಇದ್ದದ್ದು ವಿಶೇಷವಾಗಿತ್ತು. ಧರ್ಮಸ್ಥಳ ನಮ್ಮ ಹೆಮ್ಮೆ, ಪೂಜ್ಯ ವೀರೇಂದ್ರ ಹೆಗ್ಗಡೆ ಅವರ ಪರವಾಗಿ ನಾವು ನಿಲ್ಲುತ್ತೇವೆ. ಕೂಡಲೇ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆಸುತ್ತಿರುವುದಕ್ಕೆ ರಾಜ್ಯ ಸರ್ಕಾರ ಬ್ರೇಕ್ ಹಾಕಬೇಕು. ಧರ್ಮ ವಿರೋಧಿಗಳಿಗೆ ತಕ್ಕ ಪಾಠ ಕಲಿಸಬೇಕು. ಶ್ರೀ ಕ್ಷೇತ್ರ ಧರ್ಮಸ್ಥಳವು ಕೋಟ್ಯಂತರ ಭಕ್ತರನ್ನು ಆರಾಧ್ಯ, ಶ್ರದ್ಧಾ ಭಕ್ತಿಯ ತಾಣ. ಆದ್ರೆ, ಈ ತಾಣಕ್ಕೆ ಅಪಚಾರ ಎಸಗುವ ಗುಂಪು ಷಡ್ಯಂತ್ರ ರೂಪಿಸಿರುವುದು ಬಟಾಬಯಲಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.

ಮುಸುಕುಧಾರಿ ಕೂಡಲೇ ಬಂಧಿಸಿ, ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಈತನ ವಿರುದ್ಧ ಹಿಂದೆ ಯಾರಿದ್ದರೂ ಬಿಡಬಾರದು. ಧರ್ಮ ವಿರೋಧಿ ಕೃತ್ಯಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲೇಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಮಹಿಳೆಯರು ಧರ್ಮಸ್ಥಳ, ವೀರೇಂದ್ರ ಹೆಗ್ಗಡೆ ಅವರ ಪರ ಜೈಕಾರ ಹಾಕಿದರು. ಮಹೇಶ್ ಶೆಟ್ಟಿ ತಿಮ್ಮರೋಡಿ, ಗಿರೀಶ್ ಮಟ್ಟೆಣ್ಣನವರ್, ಎಂ. ಡಿ. ಸಮೀರ್ ಸೇರಿದಂತೆ ಯುಟ್ಯೂಬರ್ ಗಳ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment